ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್ ಆಗಿದ್ದಾರೆ. ಬೇಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆಕ್ಟಿವ್ ಆಗಿದ್ದ ಕಳ್ಳಿಯರ ಖರ್ತನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಬೆಳಗಾವಿ ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೂವರು ಖರ್ತನಾಕ್ ಕಳ್ಳಿಯರ ಅರೇಸ್ಟ್ ಆಗಿದ್ದಾರೆ.
ಬೆಳಗಾವಿ ನಗರದ ವಡ್ಡರವಾಡಿಯ ನಿವಾಸಿಗಳಾದ ಅನೀತಾ ಚೌಗಲೆ 58, ನಿಶಾ ಲೊಂಡೆ 25, ಗಿಡ್ಡಿ ಲೊಂಡೆ 35 ಅರೇಸ್ಟ್ ಆದ ಆರೋಪಿಗಳು. ಆರೋಪಿಗಳಿಂದ 12 ಲಕ್ಷ 70 ಸಾವಿರ ಮೌಲ್ಯದ 143 ಗ್ರಾಂ ಚಿನ್ನದ ಒಡವೆ ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿ ಮೂಲದ ಕಾಂಚನ್ ಗೌಡರ ಎಂಬುವರ ಚಿನ್ನ ಕಳ್ಳತನ ಆಗಿತ್ತು. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಾಂಚನಾ ದೂರು ನೀಡಿದ್ದರು.
ಕೇಸ್ ದಾಖಲಿಸಿಕೊಂಡ ಮಾರ್ಕೆಟ್ ಪೊಲೀಸರು ಕಳ್ಳಿಯರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.