ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆ‌ಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..?

ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ‌ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..! ಹೀಗಾಗಿನೇ, ನಿನ್ನೆಯಿಂದ ದಲಿತ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಯ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮಾಡಬೇಕಾಯ್ತಾ..?

ಸಹಜ ತಾನೇ..?
ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಹುದ್ದೆ ಪಡೆದಿರೋ ಆರೋಪ ಕೇಳಿ ಬಂದ ಹಿನ್ನೆಲೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಅವ್ರನ್ನ ಬಂಧಿಸಲು ಬಂದಿದ್ರು. ಆ ಹೊತ್ತಲ್ಲಿ ಇಡೀ ತಾಲೂಕಿನ ದಂಡಾಧಿಕಾರಿಯಾಗಿದ್ದ ಶ್ರೀಧರ್ ಮುಂದಲಮನಿ ಸಾಹೇಬ್ರು, ಬರೋಬ್ಬರಿ ಹನ್ನೊಂದು ಗಂಟೆಗಳ ಕಾಲ ಪೊಲೀಸ್ ಅಧಿಕಾರಿಗಳನ್ನು ಮನೆಯ ಹೊರಗೇ ನಿಲ್ಲಿಸಿ ಬಾಗಿಲು ಜಡಿದುಕೊಂಡು ಒಳಗಡೆಯೇ ಕುಳಿತಿದ್ರು. ಆರೋಪದ ಸತ್ಯಾಸತ್ಯತೆ ಅದೇನೇ ಆಗಿರಲಿ,ಅದು ನಮಗೆ ಬೇಕಿಲ್ಲ. ಆದ್ರೆ, ಕಾನೂನು ಅನ್ನೋದು ಎಲ್ಲರಿಗೂ ಒಂದೇ ಅನ್ನೋ ಕನಿಷ್ಟ ಸೌಜನ್ಯವನ್ನೂ ತೋರಿಸದ ತಹಶೀಲ್ದಾರ್ ಸಾಹೇಬ್ರು, ಮನೆಯ ಒಳಗೇ ಇದ್ದು ಬಾಗಿಲು ಜಡಿದುಕೊಂಡು, ಬರೋಬ್ಬರಿ ಹನ್ನೊಂದು ತಾಸುಗಳ ಕಾಲ ಕಾನೂನು ಪರಿಪಾಲಿಸಲು ಬಂದಿದ್ದವರಿಗೆ ಠಕ್ಕಾ ಟೊಳ್ಳಿ ಹಚ್ಚಿದ್ದು ಅವ್ರ ಸ್ಥಾನದ ಘನತೆನಾ..? ಕನಿಷ್ಟಪಕ್ಷ ಅವತ್ತು ಬಂದಿದ್ದ ಅಧಿಕಾರಿಗಳು ಬಾಗಿಲು ಬಡಿದಾಗ, ಬಾಗಿಲು ತೆರೆದು ಮಾತನಾಡಿಸುವ ಕನಿಷ್ಟ ಸೌಜನ್ಯವನ್ನೂ ತಹಶೀಲ್ದಾರ್ ಸಾಹೇಬ್ರು ತೋರಿಸಲಿಲ್ಲವಲ್ಲಾ..? ಹಾಗಿದ್ರೆ, ಇಂತವರಿಂದ ತಾಲೂಕಿನಲ್ಲಿ ಅದ್ಯಾವ ಕಾನೂನು ಪರಿಪಾಲನೆ ಸಾಧ್ಯ..?
ಈ ಪ್ರಶ್ನೆ ಮುಂಡಗೋಡಿನ ಸಾಮಾನ್ಯ ಪ್ರಜೆ ಕೇಳ್ತಿದಾರೆ.

ನಿಲ್ಲದ ಹೋರಾಟ..!
ಈ ಕಾರಣಕ್ಕಾಗಿನೇ, ಮುಂಡಗೋಡಿನ ದಲಿತ ಸಂಘಟನೆಯ ಮುಖಂಡರು, ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ನಿನ್ನೆ ಮಂಗಳವಾರದಿಂದ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮುಂಡಗೋಡಿನಲ್ಲಿ ತಹಶೀಲ್ದಾರ್ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜೊತೆಗೆ ಅದೇ ತಹಶೀಲ್ದಾರ್ ಕಚೇರಿಯ ಎದುರು ಅನಿರ್ಧಿಷ್ಟ ಕಾಲದ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಇವತ್ತು ಆ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ದಲಿತ ಮುಖಂಡ ಚಿದಾನಂದ ಹರಿಜನ್ ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು ಅಮಾನತ್ತು ಮಾಡೋವರೆಗೂ ನಾವು ಧರಣಿ ಸತ್ಯಾಗ್ರಹ ಕೈ ಬಿಡಲ್ಲ ಅಂತಿದಾರೆ. ಆದ್ರೆ ಅವ್ರನ್ನ ರಕ್ಷಣೆ ಮಾಡ್ತಿರೋರಿಗೆ ಇದೇಲ್ಲ ಅರ್ಥವಾಗಬೇಕಲ್ಲ..? ನಿಜ ಅಂದ್ರೆ, ದಲಿತರ ಆಕ್ರೋಶದ ಕಿಚ್ಚು ತಣ್ಣಗಾಗುವ ಯಾವ ಲಕ್ಷಣಗಳೂ ಕಾಣ್ತಿಲ್ಲ. ಇದು ಎಲ್ಲಿಗೆ ಹೋಗಿ ಮುಟ್ಟತ್ತೊ ಗೊತ್ತಿಲ್ಲ. ಇನ್ನಾದ್ರೂ ಎಚ್ಚೆತ್ತುಕೊಳ್ಳೊ ಅವಶ್ಯಕತೆ ಖಂಡಿತ ಇದೆ.

 

error: Content is protected !!