ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್

ಮುಂಡಗೋಡ; ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಯಾಕಾಗಿದೆ ಗೊತ್ತಿಲ್ಲ. ಆದರೆ ಇದರ ಪರಿಣಾಮ ಮಾತ್ರ ಇನ್ನು ಎರಡು ಮೂರು ದಿನದಲ್ಲಿ ಗೊತ್ತಾಗಲಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯ ವತಿಯಿಂದ ಕೆರೆಯ ಹೂಳೆತ್ತುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವ್ರು ಪ್ರತಿಕ್ರಿಯಿಸಿದರು.

ಬಸವನಗೌಡ ಪಾಟೀಲ್ ಉಚ್ಚಾಟನೆ ಅದು ಪಕ್ಷದ ನಿರ್ಣಯ. ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಇನ್ನು ಬಿಜೆಪಿ ನಮ್ಮನ್ನು ಉಚ್ಚಾಟಿಸಲ್ಲ. ಪಕ್ಷ ಏನೇ ನಿರ್ಧರಿಸಿದರೂ ನಾನು ಸ್ವಾಗತಿಸುವೆ. ಶಾಸಕ ಸೋಮಶೇಖರ ಅವರು ಪಕ್ಷವನ್ನು ನಿಜಕ್ಕೂ ಮುಜಗರಕ್ಕೀಡುಮಾಡಿರುವವರ ವಿರುದ್ಧ ಕ್ರಮವಾಗದ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ ನೂರಕ್ಕೆ ನೂರಾ ಒಂದರಷ್ಟು ನಿಜ ಎಂದರು.

‘ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆಯಿತು. ಶಾಸಕರಾದ ಸುನೀಲಕುಮಾರ, ಆರ್.ಅಶೋಕ ಅವರಿಗೆ ಏನೂ ಆಗಲಿಲ್ಲ. ಪಾಪದ ಶಾಸಕರು ಮಾತ್ರ ಅಮಾನತುಗೊಂಡರು. ದೊಡ್ಡ ನಾಯಕರಿಗೆ ಏನೂ ಆಗಲ್ಲ. ಅವರು ಆರಾಮಾಗಿ ಇರುತ್ತಾರೆ’ ಎಂದರು.

error: Content is protected !!