ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿರುವ ಗ್ರಾಮ ಪಂಚಾಯತಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ಘೋಷಿಸಿದೆ. ಮೇ 20 ರಂದು ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. 2022 ಏಪ್ರಿಲ್ ನಿಂದ, 2022ರ ಜುಲೈ ತಿಂಗಳವರೆಗೆ ಅವಧಿಯಲ್ಲಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,...
Top Stories
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
Tag: uttara kannada news
ಇಂದೂರಿನಲ್ಲಿ ಸಿಡಿಲಾಘಾತ, ಹೊತ್ತಿ ಉರಿದ ತೆಂಗಿನ ಮರಗಳು..!
ಮುಂಡಗೋಡ: ತಾಲೂಕಿನ ಹಲವೆಡೆ ಮಳೆ ಗಾಳಿ, ಸಿಡಿಲಿನ ಅರ್ಭಟ ಜೋರಾಗಿತ್ತು. ತಾಲೂಕಿನ ಇಂದೂರು ಗ್ರಾಮದಲ್ಲಿ ಭರಸಿಡಿಲು ಬಡಿದು ಎರಡು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ. ಇಲ್ಲಿನ ಕಲ್ಮೇಶ್ ದುಗ್ಗಳ್ಳಿ ಎಂಬುವವರ ಮನೆಯ ಹಿತ್ತಲಿನಲ್ಲಿರೋ ತೆಂಗಿನ ಮರಕ್ಕೆ ಭರಸಿಡಿಲು ಬಡಿದು ಹೊತ್ತಿ ಉರಿದಿವೆ. ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿದೆ. ಹೀಗಾಗಿ ಆತಂಕಗೊಂಡ ಗ್ರಾಮಸ್ಥರು ನಿಬ್ಬೆರಗಾಗಿ ಆ ಸಿಡಿಲಾಘಾತದ ರೋಮಾಂಚಕ ಕ್ಷಣ ನೋಡಿದ್ದಾರೆ. ಸಿಡಿಲಿನ ಹೊಡೆತಕ್ಕೆ ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.
ಮುಂಡಗೋಡ ಮಾರಿಕಾಂಬಾ ದೇವಾಲಯದ ಹತ್ತಿರ ಬೈಕ್ ಗಳ ನಡುವೆ ಡಿಕ್ಕಿ ವೃದ್ಧನಿಗೆ ಗಂಭೀರ ಗಾಯ..!
ಮುಂಡಗೋಡ: ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಹತ್ತಿರ ಟಿವಿಎಸ್ ಎಕ್ಸೆಲ್ ಹಾಗೂ ಸ್ಪ್ಲೆಂಡರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟಿವಿಎಸ್ ಎಕ್ಸೆಲ್ ಸವಾರ ವೃದ್ದನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ತಮ್ಯಾನಕೊಪ್ಪ ಗ್ರಾಮದ ಲಕ್ಷ್ಮಣ ಮಾನು ರಾಠೋಡ್(60) ಎಂಬುವವರೇ ಗಾಯಗೊಂಡ ವೃದ್ದನಾಗಿದ್ದಾನೆ. ಮತ್ತೊರ್ವ ಬೈಕ್ ಸವಾರ ನಂದಿಕಟ್ಟಾ ಗ್ರಾಮದ ತೋಪಣ್ಣ ರೇಟರಿ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ತಮ್ಯಾನಕೊಪ್ಪದಿಂದ ಇಂದೂರು ಕಡೆಗೆ ಹೊರಟಿದ್ದ ವೃದ್ದನಿಗೆ ಸ್ಪ್ಲೆಂಡರ್ ಬೈಕ್ ಗುದ್ದಿದೆ. ಪರಿಣಾಮ ವೃದ್ದ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ...
ಮುಡಸಾಲಿ ಬಳಿ ಎತ್ತಿನ ಚಕ್ಕಡಿಗೆ ಹಿಂದಿನಿಂದ ಗುದ್ದಿದ KSRTC ಬಸ್, ಇಬ್ಬರಿಗೆ ಗಾಯ..! ತಪ್ಪಿದ ಭಾರೀ ಅನಾಹುತ
ಮುಂಡಗೋಡ: ತಾಲೂಕಿನ ಮೂಡಸಾಲಿ ಕ್ರಾಸ್ ಬಳಿ ಬಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ. ಎತ್ತಿನ ಚಕ್ಕಡಿಗೆ KSRTC ಬಸ್ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಕಾತೂರು ಕಡೆ ಹೊರಟಿದ್ದ ಚಕ್ಕಡಿಗೆ ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಸಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಕಾತೂರು ಗ್ರಾಮದ ಸಂತೋಷ ತಿಪ್ಪಣ್ಣ ಹರಿಜನ (30), ಮಂಜುನಾಥ್ ಬಸಪ್ಪ ಡೊಳ್ಳೇಶ್ವರ್ (38) ಎಂಬುವರಿಗೆ ಗಾಯವಾಗಿದೆ. KSRTC ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರೀ ಅವಘಡ ತಪ್ಪಿದಂತಾಗಿದೆ. ತಡರಾತ್ರಿಯಲ್ಲಿ ಘಟನೆ...
ಬಡ್ಡಿಗೇರಿ ಅಪಘಾತ ಪ್ರಕರಣ: ಚಾಲಕನ ವಿರುದ್ಧ ಕೇಸ್, ಟಾಟಾ ಎಸ್ ನಲ್ಲಿ ಜನರನ್ನ ಸಾಗಿಸುವಂತಿಲ್ಲ, ಪೊಲೀಸರ ಖಡಕ್ ಕ್ರಮ..!
ಮುಂಡಗೊಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಎಸ್ ವಾಹನ ಚಾಲಕನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಟಾ ಏಸ್ ವಾಹನ ನಂ-ಕೆಎ-25/ಸಿ-5779 ನೇದರ ಚಾಲಕ ಮುಂಡಗೋಡ ವಡ್ಡರ ಓಣಿಯ ಮಂಜುನಾಥ ಈರಪ್ಪ ಬೋವಿ ಎಂಬುವನ ಮೇಲೆ ಪ್ರಕರಣ ದಾಖಲಾಗಿದ್ದು, ಈತನು ತನ್ನ ಟಾಟಾ ಏಸ್ ವಾಹನವನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ, ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದು, ಅಲ್ಲದೆ ಒಟ್ಟೂ 21 ಜನರಿಗೆ ಭಾರಿ ಗಾಯ ಪಡಿಸಿರುತ್ತಾನೆ...
ಮಳಗಿ ಡ್ಯಾಂನಲ್ಲಿ ಕೊಲೆಯಾದ್ನಾ ಭಟ್ಕಳದ ವಿನಾಯಕ..? ಆ ಸಾವಿನ ಸುತ್ತ ಕುಟುಂಬಸ್ಥರ ಅನುಮಾನಗಳೇನು..?
ಮುಂಡಗೋಡ: ಮಳಗಿ ಧರ್ಮಾ ಜಲಾಶಯದ ಒಡಲಿನಲ್ಲಿ ಕ್ರೌರ್ಯಗಳೂ ನಡಿತಿವೆಯಾ..? ನಿಜಕ್ಕೂ ಆ ಒಂದು ಸಾವು, ಸಾವಿನಾಚೆಗಿನ ಬಿಡಿಸಲಾಗದ ಸತ್ಯಗಳು ಎಂತವರನ್ನೂ ಒಂದುಕ್ಷಣ ತಲ್ಲಣಗೊಳಿಸ್ತಿವೆ. ಭಟ್ಕಳದಿಂದ ಶಿರಸಿ ಮಾರಿ ಜಾತ್ರೆಗೆ ಬಂದಿದ್ದ ಯುವಕ ನೀರುಪಾಲಾಗಿದ್ದರ ಹಿಂದೆ, ಬರೀ ಅನುಮಾನಗಳೇ ಹಾಸು ಹೊಕ್ಕಾಗಿವೆ. ಮಗನನ್ನ ಕಳೆದುಕೊಂಡ ಕುಟುಂಬವೀಗ ಅಕ್ಷರಶಃ ಅನಾಥವಾಗಿದೆ. ಅವತ್ತು ಮಾ.22 ಭಟ್ಕಳದ ಶಿರಾಲಿ ಮೂಲದ ವಿನಾಯಕ ಜನ್ನು ಎನ್ನುವ ಯುವಕ ಮಾರ್ಚ್ 22ರಂದು ಇದೇ ಮಳಗಿಯ ಧರ್ಮಾ ಜಲಾಶಯದಲ್ಲಿ ಹೆಣವಾಗಿ ಸಿಕ್ಕಿದ್ದ. ತನ್ನ ಗೆಳೆಯರೊಂದಿಗೆ ಶಿರಸಿ ಜಾತ್ರೆಗೆ...
ಅಗಡಿಯಲ್ಲಿ ವಿದ್ಯುತ್ ತಂತಿ ತುಳಿದು ಬಾಲಕ ದಾರುಣ ಸಾವು, ಅದೃಷ್ಟವಶಾತ್ ಬಚಾವಾದ ಮತ್ತೋರ್ವ ಬಾಲಕ..!
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಭಾರೀ ಮನಕಲುಕುವ ಘಟನೆ ನಡೆದಿದೆ. ಹರಿದು ಬಿದ್ದಿದ್ದ ವಿದ್ಯುತ್ ತಂತಿ ಹಿಡಿದ ಪರಿಣಾಮ 13 ವರ್ಷದ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊರ್ವ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಷ್ಪಕ್ ಮೊಹ್ಮದ್ ಷರೀಪ್ ಚಪಾತಿ (13) ಎಂಬ ಬಾಲಕನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಬೇಲಿಯ ಮೇಲೆ ವಿದ್ಯುತ್ ಲೈನ್ ಹರಿದು ಬಿದ್ದಿದೆ. ಇದೇ ವೇಳೆ ಅಷ್ಪಕ್ ಹಾಗೂ ಆತನ ಮತ್ತೊರ್ವ ಸಹೋದರ ಮಹ್ಮದ್ ಜಾಫರ್ ಚಪಾತಿ ಎನ್ನುವ ಬಾಲಕ ಅದೇ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಬಾಲಕ...
ಸನವಳ್ಳಿಯಲ್ಲಿ ಗದ್ದೆಯ ಬೇಲಿಗೆ ಕೊಂಬು ಸಿಲುಕಿಸಿಕೊಂಡು ಅಪಾಯದಲ್ಲಿದ್ದ ಜಿಂಕೆಯ ರಕ್ಷಣೆ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೇಲಿಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಗಂಡು ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ. ಸನವಳ್ಳಿ ಗ್ರಾಮದ ರೈತ ಕೃಷ್ಣಪ್ಪ ಎಲಿವಾಳ ಎಂಬುವವರ ಜಮೀನಿನ ಬೇಲಿಗೆ ಜಿಂಕೆ ತನ್ನ ಕೊಂಬು ಸಿಲುಕಿಸಿಕೊಂಡು ಜೀವ ಕಳೆದುಕೊಳ್ಳುವ ಅಪಾಯದಲ್ಲಿತ್ತು. ಹೀಗಾಗಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದ ಗಂಡು ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬೇಲಿಯಿಂದ ಕೊಂಬು ಬಿಡಿಸಿದ ತಕ್ಷಣವೇ ಬದುಕಿದೆಯಾ ಬಡಜೀವ ಅಂತಾ ಜಿಂಕೆ ಅಲ್ಲಿಂದ...
ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?
ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..? ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..!...
ಹನುಮಾಪುರದಲ್ಲಿ ಜಲಮಿಷನ್ ಕಾಮಗಾರಿ ಪೈಪು ಮೈಮೇಲೆ ಬಿದ್ದು ಕಾರ್ಮಿಕನ ದಾರುಣ ಸಾವು..!
ಮುಂಡಗೋಡ: ತಾಲೂಕಿನ ಹನುಮಾಪುರದ ಬಳಿ ಭಾರೀ ದುರಂತವೊಂದು ಸಂಭವಿಸಿದೆ. ಜಲಮಿಷನ್ ಯೋಜನೆಯ ಕಾಮಗಾರಿ ವೇಳೆ ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಮೂಲತಃ ಬಿಹಾರದವನಾದ ರಾಜು ಯಾದವ್ (35) ಮೃತಪಟ್ಟ ದುರ್ಧೈವಿಯಾಗಿದ್ದು, ಇಂದು ಕಾರ್ಯನಿರ್ವಹಿಸುವ ವೇಳೆ ಆಕಸ್ಮಿಕವಾಗಿ ಬೃಹತ್ ಪೈಪ್ ಆಯತಪ್ಪಿ ಕಾರ್ಮಿಕನ ಮೈಮೇಲೆ ಬಿದ್ದಿದೆ. ಹೀಗಾಗಿ, ಕಾರ್ಮಿಕನ ದೇಹ ಚಿದ್ರಗೊಂಡಿದೆ. ಸದ್ಯ ಮುಂಡಗೋಡ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.