ಹಾವೇರಿ ತಾಲೂಕಾ ಶಿಕ್ಷಣಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬಿಇಓ ಮೌನೇಶ ಬಡಿಗೇರ ಮನೆ ಮೇಲೆ ದಾಳಿ ನಡೆದಿದ್ದು, ವೇತನ ಬಿಡುಗಡೆ ಮಾಡಲು 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿ, ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇನ್ನು ಶಿಕ್ಷಕ ಪ್ರಕಾಶ್ ಬಾರ್ಕಿ ಎಂಬುವವರಿಗೆ ವೇತನ ಬಿಡುಗಡೆ ಮಾಡಲು, 50 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದರು, ಅದ್ರಲ್ಲಿ ಇವತ್ತು 15 ಸಾವಿರ ರೂ. ಲಂಚ ತೆಗೆದುಕೊಳ್ಳುವಾಗ ಟ್ರ್ಯಾಪ್ ಮಾಡಲಾಗಿದೆ.
ದಾಳಿ ವೇಳೆ ಬಿಇಓ ಮೌನೇಶ್ ಬಡಿಗೇರ ಹಾಗೂ ಅತನ ಜೀಪ್ ಡ್ರೈವರ್ ವಶಕ್ಕೆ ಪಡೆಯಲಾಗಿದ್ದು ಮತ್ತೋರ್ವ ಲಂಚಬಾಕ ಶಿಕ್ಷಕ ಪರಾರಿಯಾಗಿದ್ದಾನೆ.