ಮುಂಡಗೋಡ: ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಹತ್ತಿರ ಟಿವಿಎಸ್ ಎಕ್ಸೆಲ್ ಹಾಗೂ ಸ್ಪ್ಲೆಂಡರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟಿವಿಎಸ್ ಎಕ್ಸೆಲ್ ಸವಾರ ವೃದ್ದನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ತಮ್ಯಾನಕೊಪ್ಪ ಗ್ರಾಮದ ಲಕ್ಷ್ಮಣ ಮಾನು ರಾಠೋಡ್(60) ಎಂಬುವವರೇ ಗಾಯಗೊಂಡ ವೃದ್ದನಾಗಿದ್ದಾನೆ. ಮತ್ತೊರ್ವ ಬೈಕ್ ಸವಾರ ನಂದಿಕಟ್ಟಾ ಗ್ರಾಮದ ತೋಪಣ್ಣ ರೇಟರಿ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ‌.

ತಮ್ಯಾನಕೊಪ್ಪದಿಂದ ಇಂದೂರು ಕಡೆಗೆ ಹೊರಟಿದ್ದ ವೃದ್ದನಿಗೆ ಸ್ಪ್ಲೆಂಡರ್ ಬೈಕ್ ಗುದ್ದಿದೆ. ಪರಿಣಾಮ ವೃದ್ದ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದ್ದು, ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!