ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೇಲಿಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಗಂಡು ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ.

ಸನವಳ್ಳಿ ಗ್ರಾಮದ ರೈತ ಕೃಷ್ಣಪ್ಪ ಎಲಿವಾಳ ಎಂಬುವವರ ಜಮೀನಿನ‌ ಬೇಲಿಗೆ ಜಿಂಕೆ ತನ್ನ ಕೊಂಬು ಸಿಲುಕಿಸಿಕೊಂಡು ಜೀವ ಕಳೆದುಕೊಳ್ಳುವ ಅಪಾಯದಲ್ಲಿತ್ತು. ಹೀಗಾಗಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದ ಗಂಡು ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬೇಲಿಯಿಂದ ಕೊಂಬು ಬಿಡಿಸಿದ ತಕ್ಷಣವೇ ಬದುಕಿದೆಯಾ ಬಡಜೀವ ಅಂತಾ ಜಿಂಕೆ ಅಲ್ಲಿಂದ ಕಾಡಿನೊಳಕ್ಕೆ ಕಾಲ್ಕಿತ್ತಿದೆ.

ಜಿಂಕೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿಯವರಿಗೆ, ಅರಣ್ಯ ರಕ್ಷಕರುಗಳಾದ ರಾಜು ಪರೀಟ, ಸಾಗರ ಕೊಣ್ಣೂರ, ಅರಣ್ಯ ವೀಕ್ಷಕ ರುದ್ರಪ್ಪ ಸಹಾಯ ಮಾಡಿದ್ದಾರೆ.

error: Content is protected !!