ಮುಂಡಗೋಡ: ತಾಲೂಕಿನ ಹಲವೆಡೆ ಮಳೆ ಗಾಳಿ, ಸಿಡಿಲಿನ ಅರ್ಭಟ ಜೋರಾಗಿತ್ತು. ತಾಲೂಕಿನ ಇಂದೂರು ಗ್ರಾಮದಲ್ಲಿ ಭರಸಿಡಿಲು ಬಡಿದು ಎರಡು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ.
ಇಲ್ಲಿನ ಕಲ್ಮೇಶ್ ದುಗ್ಗಳ್ಳಿ ಎಂಬುವವರ ಮನೆಯ ಹಿತ್ತಲಿನಲ್ಲಿರೋ ತೆಂಗಿನ ಮರಕ್ಕೆ ಭರಸಿಡಿಲು ಬಡಿದು ಹೊತ್ತಿ ಉರಿದಿವೆ. ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿದೆ. ಹೀಗಾಗಿ ಆತಂಕಗೊಂಡ ಗ್ರಾಮಸ್ಥರು ನಿಬ್ಬೆರಗಾಗಿ ಆ ಸಿಡಿಲಾಘಾತದ ರೋಮಾಂಚಕ ಕ್ಷಣ ನೋಡಿದ್ದಾರೆ. ಸಿಡಿಲಿನ ಹೊಡೆತಕ್ಕೆ ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.