ಮುಂಡಗೋಡ: ತಾಲೂಕಿನ ಹನುಮಾಪುರದ ಬಳಿ ಭಾರೀ ದುರಂತವೊಂದು ಸಂಭವಿಸಿದೆ. ಜಲಮಿಷನ್ ಯೋಜನೆಯ ಕಾಮಗಾರಿ ವೇಳೆ ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ.
ಮೂಲತಃ ಬಿಹಾರದವನಾದ ರಾಜು ಯಾದವ್ (35) ಮೃತಪಟ್ಟ ದುರ್ಧೈವಿಯಾಗಿದ್ದು, ಇಂದು ಕಾರ್ಯನಿರ್ವಹಿಸುವ ವೇಳೆ ಆಕಸ್ಮಿಕವಾಗಿ ಬೃಹತ್ ಪೈಪ್ ಆಯತಪ್ಪಿ ಕಾರ್ಮಿಕನ ಮೈಮೇಲೆ ಬಿದ್ದಿದೆ. ಹೀಗಾಗಿ, ಕಾರ್ಮಿಕನ ದೇಹ ಚಿದ್ರಗೊಂಡಿದೆ. ಸದ್ಯ ಮುಂಡಗೋಡ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.