ಹುಬ್ಬಳ್ಳಿ: ಇಡೀ ಹುಬ್ಬಳ್ಳಿ ನಗರವೇ ತಲೆತಗ್ಗಿಸುವ ಕ್ರೌರ್ಯವೊಂದು ಅಶೋಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಾರಣವಾದ ಆರೋಪಿಯ ಪತ್ತೆಗಾಗಿ ಐದು ತಂಡಗಳನ್ನ ರಚನೆ ಮಾಡಲಾಗಿದೆ.
5 ವರ್ಷದ ಕಂದಮ್ಮನನ್ನ ಅಪಹರಣ ಮಾಡಿ, ಕಾಮದ ಉದ್ದೇಶದಿಂದ ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗಿದೆ. ಆದರೆ, ಅತೀ ಗಲೀಜಿರುವ ಟಾಯ್ಲೆಟ್‌ನಲ್ಲಿ ಕೂತ ರೂಪದಲ್ಲಿ ಮಗುವಿನ ಪ್ರಾಣ ಹೋಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಶವವನ್ನ ಕಿಮ್ಸ್ ಗೆ ರವಾನೆ ಮಾಡಿದ್ದಾರೆ. ಆಕ್ರೋಶಗೊಂಡ ಹಲವರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸ್ ಕಮೀಷನರ್ ಕಿಮ್ಸ್‌ಗೆ ಭೇಟಿ ನೀಡಿದ್ದಾರೆ.