ಮುಂಡಗೋಡ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕರ್ತರು, 2ಎ ಮೀಸಲಾತಿಗೆ ಸೇರಿಸುವಂತೆ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆವು, ಆ ವೇಳೆ, ಸಿಎಂ ಆಗಿದ್ದ ಯಡಿಯೂರಪ್ಪ ಅವರು 2ಎ ಮೀಸಲಾತಿ ನೀಡಲು ಆರು ತಿಂಗಳು ಸಮಯ ಕೇಳಿದ್ದರು, ಆದ್ರೆ ಈಗ ಯಡಿಯೂರಪ್ಪರ ಸಮಯದ ಅವಧಿ ಮುಗಿದಿದೆ. ಈಗ ನೂತನವಾಗಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ, ಕೂಡಲೇ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಸಂಘದ ಮುಖಂಡರು ಹಾಗೂ ಸಮಾಜದ ಬಾಂಧವರು ಸರ್ಕಾರಕ್ಕೆ ಒತ್ತಾಯಿಸಿದ್ರು. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಅಂತಾ ಇದೇ ವೇಳೆ ಎಚ್ಚರಿಸಿದ್ರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ರಾಮಣ್ಣ ಕುನ್ನೂರ್, ಗುಡ್ಡಪ್ಪ ಕಾತೂರು, ಶಿವಾನಂದ್ ನಿಡಗುಂದಿ, ಶೇಕಪ್ಪ ಹೊನ್ನಳ್ಳಿ, ಚಂದ್ರು ಹಡಪದ, ವಿನೋದ್ ಬಿಸನಳ್ಳಿ, ಮಲ್ಲಿಕಾರ್ಜುನ್ ಗೌಳಿ, ಸುರೇಶ್ ಗೌಳಿ,...
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!
ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ದಾವಣಗೇರೆಯಲ್ಲಿ ಮನಕಲುಕುವ ದೃಷ್ಯ..!
ಬೆಂಗಳೂರು ಆತ್ಮಹತ್ಯೆ ಘಟನೆ ಮಾಸುವ ಮುನ್ನವೆ ದಾವಣಗೆರೆಯಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿದ್ದಾರೆ. ದಾವಣಗೆರೆಯ ಭಾರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು ಕೃಷ್ಣಾನಾಯ್ಕ್ (35)ಆತನ ಪತ್ನಿ ಸರಸ್ವತಿ ಬಾಯಿ, ಎಂಟು ವರ್ಷದ ಮಗು ಧ್ರುವ ಮೃತಪಟ್ಟವರು. ಭಾರತ್ ಕಾಲೋನಿ ಶೇಖರಪ್ಪ ಬಿ ಬ್ಲಾಕ್ ನಲ್ಲಿ ವಾಸವಾಗಿದ್ದ ಕೃಷ್ಣನಾಯ್ಕ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸರಸ್ವತಿ ಬಾಯಿ ಮೂಲವ್ಯಾಧಿಯಿಂದ ಬಳಲುತ್ತಿದ್ದರು. ಕೃಷ್ಣಾನಾಯ್ಕ್ ರಿಗೆ ಸಹ ಆರೋಗ್ಯ ಸಮಸ್ಯೆ ಇತ್ತು, ಕೃಷ್ಣನಾಯ್ಕ್ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು.ಅನಾರೋಗ್ಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಎಂಟು ವರ್ಷ ವಯಸ್ಸಿನ ಧ್ರುವ ಹಾಗೂ ತಾಯಿ ಸರಸ್ವತಿ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿದ್ದಾರೆ. ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕೃಷ್ಣಾನಾಯ್ಕ್ ಶವ ಪತ್ತೆಯಾಗಿದೆ. ಮನೆ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೂ ಆರೋಗ್ಯ ಕೈಕೊಟ್ಟ ಹಿನ್ನೆಲೆ ಈ ನಿರ್ಧಾರ ಕೈಗೊಂಡ್ರಾ...
ನಾಳೆಯಿಂದ ದಾವಣಗೇರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ..! ಏನೇಲ್ಲ ಇರತ್ತೆ, ಯಾರೇಲ್ಲ ಬರ್ತಾರೆ ಗೊತ್ತಾ..?
ದಾವಣಗೇರೆ: ನಾಳೆ ಶನಿವಾರದಿಂದ ಬೆಣ್ಣೆ ನಗರಿ, ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸಭೆ ನಡೆಲಿದೆ. ಕಾರ್ಯ ಕಾರಿಣಿಗೆ ಈಗಾಗಲೇ ಸ್ಮಾರ್ಟ್ ಸಿಟಿ ಸಿದ್ದಗೊಂಡಿದ್ದು, ಮುಂಬರುವ ಸ್ಥಳೀಯ ಹಾಗೂ ವಿಧಾನ ಸಭಾ ಚುನಾವಣೆಗೆ ಈಗಲೇ ತಂತ್ರ ಹೆಣಿಯುತ್ತಿದೆ. ರಾಜಕೀಯ ಹಾಟ್ ಸ್ಪಾಟ್..! ಹೌದು.. ವಿಕೆಂಡ್ ನಲ್ಲಿ ದಾವಣಗೆರೆ ಎರಡು ದಿನಗಳ ಕಾಲ ರಾಜಕೀಯ ಹಾಟ್ ಸ್ಪಾಟ್ ಆಗಿ ಬದಲಾಗಲಿದೆ. ಏಕೆಂದ್ರೆ. ಬಿಜೆಪಿಯ ರಾಜ್ಯ ಕಾರ್ಯ ಕಾರಿಣಿ ಸಭೆ ನಡೆಯಲಿದ್ದು ಜಿಲ್ಲೆಗೆ ಬಿಜೆಪಿ ರಾಜ್ಯ, ಹಾಗೂ ರಾಷ್ಟ್ರ ನಾಯಕರ ದಂಡೆ ಹರಿದು ಬರಲಿದೆ. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಹಾಗೂ ಮುಂಬರುವ 2023 ರ ವಿಧಾನ ಸಭಾ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಬೂತ್ ಮಟ್ಟದಿಂದ ಪಕ್ಷವನ್ನ ಬಲ ಪಡಿಸಲು ಈಗಲೇ ತಂತ್ರ ಹೆಣೆಯುತ್ತಿದ್ದಾರೆ. ಬೆಣ್ಣೆ ನಗರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯ ಕಾರಿಣಿ ಸಭೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ...
ಸಿನಿಮೀಯ ರೀತಿಯಲ್ಲಿ ಕಳ್ಳನ ಕೈಚಳಕ, ಜ್ಯುವೇಲ್ಲರಿ ಮಾಲೀಕನಿಂದ ಚಿನ್ನದ ಸರ ಕಸಿದು ಪರಾರಿ..!
ಶಿರಸಿ: ಸಿನಿಮೀಯ ರೀತಿಯಲ್ಲಿ ಚಿನ್ನದ ಸರ ಅಪಹರಣ ಮಾಡಿದ ಘಟನೆ, ಶಿರಸಿಯ ರತ್ನದೀಪ ಜ್ಯುವೆಲರ್ಸ್ ನಲ್ಲಿ ನಡೆದಿದೆ. ಚಿನ್ನದ ಸರ ಖರೀದಿಯ ನೆಪದಲ್ಲಿ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿ, ಚಿನ್ನದ ಸರ ತೋರಿಸುವಂತೆ ಕೇಳಿದ್ದಾನೆ. ಅಂಗಡಿಯಾತ ಚಿನ್ನದ ಸರ ತೋರಿಸುತ್ತಿದ್ದಾಗಲೇ ಸರ ಕಸಿದುಕೊಂಡ ಕಳ್ಳ ಕಾಲ್ಕಿತ್ತಿದ್ದಾನೆ. ಚಿನ್ನದ ಸರದೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ. ಕಳ್ಳನ ಸಂಪೂರ್ಣ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಚಾಲಾಕಿ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
ಮುಂಡಗೋಡಿನಲ್ಲಿ ಸರಳ ವಿಶ್ವಕರ್ಮ ಜಯಂತಿ ಆಚರಣೆ..!
ಮುಂಡಗೋಡ: ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಉತ್ಸವ ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳ ವಿಶ್ವಕರ್ಮ ಸಮಾಜದ ಮುಖಂಡರು ಸರಳವಾಗಿ ಆಚರಿಸಿದ್ರು. ಈ ವೇಳೆ ವಿಶ್ವಕರ್ಮ ಸಮಾಜದ ಆರ್.ವಿ. ಬಡಿಗೇರ್, ಮೌನೇಶ್ ಬಡಿಗೇರ್, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸೇರಿ ವಿಶ್ವಕರ್ಮ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.
ಯಲ್ಲಾಪುರದ ತುಡುಗುಣಿ ಕಾಡು ಮನೆಯಲ್ಲಿ ಮಹಿಳೆಯ ಭೀಕರ ಹತ್ಯೆ..! ಅಷ್ಟಕ್ಕೂ ಹಂತಕನ ನೆರಳು ಅದೇನಾ..?
ಯಲ್ಲಾಪುರ ತಾಲೂಕಿನಲ್ಲಿ ನಿನ್ನೆ ರಾತ್ರಿ ಭೀಕರ ಹತ್ಯೆಯಾಗಿದೆ. ಮಹಿಳೆಯೋರ್ವಳನ್ನ ಆಗಂತುಕರು ಭೀಕರವಾಗಿ ಹತ್ಯೆ ಮಾಡಿ ಹೋಗಿದ್ದಾರೆ. ಯಲ್ಲಾಪುರ-ಶಿರಸಿ ಗಡಿಭಾಗದ ತುಡುಗುಣಿಯಲ್ಲಿ ಇಂತಹದ್ದೊಂದು ಹತ್ಯೆ ನಡೆದಿದ್ದು, ಇಡೀ ಯಲ್ಲಾಪುರ ತಾಲೂಕೇ ಬೆಚ್ಚಿ ಬೀಳುವಂತೆ ಮಾಡಿದೆ. ಅಂದಹಾಗೆ, ಇಲ್ಲಿ ಹೀಗೆ ಭೀಕರ ಹತ್ಯೆಯಾಗಿ ಬಿದ್ದವಳ ಹೆಸರು, ಸರೋಜಾ ನಾಯರ್, ವಯಸ್ಸು ಈಗಿನ್ನು 35 ರ ಆಸು ಪಾಸು. ತುಡುಗುಣಿಯ ಕಾಡಿನಲ್ಲಿರೋ ಮನೆಯಲ್ಲಿ ವಾಸವಿದ್ದ ಈಕೆಯನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ. ನಿಮಗೆ ಗೊತ್ತಿರಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಕ್ಷ ಪೊಲೀಸ್ ಪಡೆ ಇದೆ. ಕೊಲೆಯ ರಹಸ್ಯ ಕೆಲವೇ ಗಂಟೆಗಳಲ್ಲಿ ಬಟಾಬಯಲಾಗಲಿದೆ. ಅದ್ಯಾವನೇ ಇರಲಿ, ಅದೇಂತವನೇ ಹಂತಕ ಇದ್ರೂ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟೋದು ಮಾತ್ರ ಪಕ್ಕಾ. ಅನೈತಿಕ ಮರ್ಡರಾ.? ಹಾಗೆ, ಕಾಡಿನಲ್ಲಿರೋ ಮನೆಯಲ್ಲಿ ಮಹಿಳೆಯೊಬ್ಬಳ ಭೀಕರ ಹತ್ಯೆಯಾಗಿದೆ ಅಂದ್ರೆ, ಅದರ ಹಿಂದೆ ಅದ್ಯಾವನೋ ಎಡಬಿಡಂಗಿ, ಪಾಗಲ್ ಪ್ರೇಮಿಯ ಹುಚ್ಚುತನ ಕೆಲಸ...
ಕಟ್ಟಿಗೆ ತುಂಬಿದ್ದ ಲಾರಿ ಪಲ್ಟಿ, ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ..!
ಯಲ್ಲಾಪುರ: ಕಟ್ಟಿಗೆ ತುಂಬಿದ್ದ ಲಾರಿ ಹೆದ್ದಾರಿಯಲ್ಲೇ ಪಲ್ಟಿಯಾಗಿ, ವಾಹನ ದಟ್ಟಣೆ ಹೆಚ್ಚಿದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾದ ಘಟನೆ, ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ನಡೆದಿದೆ. ಅಂಕೋಲಾದಿಂದ ಯಲ್ಲಾಪುರಕ್ಕೆ ತೆರಳುತ್ತಿದ್ದ ಲಾರಿ, ಘಟ್ಟದಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹಾಗೆ ಪಲ್ಟಿಯಾದ ಲಾರಿ ಎದುರಲ್ಲೇ ಮತ್ತೊಂದು ಲಾರಿ, ಕೆಟ್ಟು ನಿಂತಿದೆ. ಪರಿಣಾಮ, ಅರಬೈಲ್ ಘಟ್ಟದಲ್ಲಿ ಸರಕು ಸಾಗಣೆ ಲಾರಿಗಳು ಸಾಲುಗಟ್ಟಿ ನಿಂತಿವೆ. ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಅಂಕೋಲಾ ಯಲ್ಲಾಪುರ ಮಾರ್ಗವಾಗಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ.
ಪುಟ್ಟ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ, ತಪ್ಪಿದ ಭಾರೀ ದುರಂತ..!
ಉಡುಪಿ: ಉತ್ತರ ಕನ್ನಡ ಜಿಲ್ಲೆಯಿಂದ ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತವಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಮಾಬುಕಳ ಸೇತುವೆ ಬಳಿ ಘಟನೆ ನಡೆದಿದೆ. ಟೈಯರ್ ಸ್ಪೋಟಗೊಂಡು ಡಿವೈಡರ್ ಹಾರಿ ನುಗ್ಗಿದ ಅಂಬುಲೆನ್ಸ್, ಇಡಿ ಇಡಿಯಾಗಿ ನದಿಗೆ ಹಾರುವುದರಲ್ಲಿ ಸ್ವಲ್ಪದರಲ್ಲೇ ತಪ್ಪಿದೆ. ಸೇತುವೆಯ ಆವರಣ ಗೋಡೆಗೆ ಡಿಕ್ಕಿಯಾಗಿ ಬಚಾವ್ ಆಗಿದೆ. ಹೀಗಾಗಿ, ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ. ಇದ್ರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಘಟನೆಯಲ್ಲಿ ಆಂಬುಲೆನ್ಸ್ ನಲ್ಲಿ ಮಗುವನ್ನು ಕರೆದೊಯ್ಯುತ್ತಿದ್ದ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ನಾಯಿ ಬೇಟೆಯಾಡಲು ಬಂದ ಚಿರತೆಗೆ ಏನಾಯ್ತು..? ಕುಮಟಾದಲ್ಲೊಂದು ವಿಚಿತ್ರ ಘಟನೆ..!
ಕುಮಟಾ: ನಾಯಿ ಬೇಟೆಯಾಡಲು ಬಂದ ಚಿರತೆಯೊಂದು, ತಾನೆ ನಾಯಿ ಬಲೆಯಲ್ಲಿ ಸಿಲಕಿದ ಘಟನೆ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ. ರಾತ್ರಿ ಮನೆಯ ಹತ್ತಿರ ಕಟ್ಟಿದ್ದ ನಾಯಿಯನ್ನು ಹಿಡಿಯಲು ಬಂದಿದ್ದ ಚಿರತೆ, ನಾಯಿಯ ಬೋನಿನೋಳಗೆ ಹೋಗಿದೆ. ಬೋನಿನೊಳಗೆ ಹೋಗಿದ್ದನ್ನ ಗಮನಿಸಿದ ಮನೆಯ ಮಾಲೀಕರು, ತಕ್ಷಣ ಬೋನ್ ಲಾಕ್ ಮಾಡಿದ್ದಾರೆ. ಹೀಗಾಗಿ, ನಾಯಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಚಿರತೆ ಈಗ ನಾಯಿ ಬೋನಲ್ಲೇ ಬಲೆ ಬಿದ್ದಿದೆ. ಹೀಗಾಗಿ, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭವಾಗಿದೆ.
ಕಾರವಾರ ಯುವಕನಿಗೆ ನಿಫಾ ವೈರಸ್ ಇಲ್ಲ, ಪುಣೆಯಿಂದ ಬಂದ ವರದಿ ನೆಗೆಟಿವ್..! ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ..!!
ಕಾರವಾರ: ನಿಫಾ ವೈರಸ್ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರದ ಯುವಕ ಸದ್ಯ ರಿಲೀಫ್ ಆಗಿದ್ದಾನೆ. ಯಾಕಂದ್ರೆ, ನಿಫಾ ಆತಂಕಿತ ಯುವಕನ ನಿಫಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಇದ್ರಿಂದ ನಿಫಾ ಆತಂಕಕ್ಕಿಡಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಕ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಂತ, ದಕ್ಷಿಣಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ, ಕಾರವಾರ ಮೂಲದ ಯುವಕನ ಬ್ಲಡ್, ಯುರಿನ್ ಮತ್ತು ಸ್ವಾಬ್ ಸ್ಯಾಂಪಲನ್ನು ಟೆಸ್ಟ್ ಗೆ ಕಳಿಸಿತ್ತು. ಗೋವಾದಲ್ಲಿ ನಿಫಾ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್ನಲ್ಲಿ ಕೆಲಸ ಮಾಡ್ತಿದ್ದ ಯುವಕ, ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ಕಳೆದ ಶನಿವಾರ ಸಂಜೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಯುವಕ ದಾಖಲಾಗಿದ್ದ. ಈ ಕಾರಣಕ್ಕಾಗಿ, ನಿಫಾ ಆತಂಕದಿಂದ ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಿದ್ದ ಆರೋಗ್ಯ ಇಲಾಖೆಗೆ, ಇಂದು ಪುಣೆಯ ಲ್ಯಾಬ್ ನಿಂದ ವರದಿ ಬಂದಿದ್ದಿ, ನೆಗೆಟಿವ್ ಅಂತಾ ದಾಖಲಾಗಿದೆ.