ಮುಂಡಗೋಡ: ಕೃಷಿ ಕಾಯ್ದೆ ತಿದ್ದುಪಡಿ ವಿಧೇಯಕ ವಿರೋಧಿಸಿ ರೈತ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್, ಮುಂಡಗೋಡಿನಲ್ಲಿ ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಬಿಟ್ಟರೆ, ಪಟ್ಟಣದಲ್ಲಿ ಜನಜೀವನ ಎಂದಿನಂತೆ ಇತ್ತು. ಇಂದು ಬೆಳಗಿನಿಂದಲೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಓಪನ್ ಆಗಿತ್ತು. ವ್ಯಾಪಾರ ವಹಿವಾಟು ಎಂದಿನಂತೆ ಪ್ರಾರಂಭವಾಗಿತ್ತು. ಆಟೋ, ಬಸ್ ಗಳು ಎಂದಿನಂತೆ ರಸ್ತೆಗಿಳಿದಿದ್ದವು. ಆದ್ರೆ, ಇಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಕೃಷಿ ಕಾಯ್ದೆ ತಿದ್ದುಪಡಿ ವಿಧೇಯಕ ಹಿಂಪಡೆಯುವಂತೆ ಮನವಿ ಪತ್ರ ನೀಡಿದ್ರು. ಕೆಲಹೊತ್ತು, ತಹಶೀಲ್ದಾರ್ ಕಚೇರಿ ಎದುರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ರು. ಇನ್ನು, ಇಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೇಚ್ಚರ ವಹಿಸಿದ್ರು.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಮುಂಡಗೋಡಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಯ್ತು ಭಾರತ್ ಬಂದ್..! ಎಂದಿನಂತೆ ಸಹಜ, ಸಹಜ..!!
ಸಿದ್ದಾಪುರದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ; ಒಂದು ಲಾರಿ ವಶಕ್ಕೆ, ಮೂವರ ಮೇಲೆ ಕೇಸ್..!
ಸಿದ್ದಾಪುರ: ಸಿದ್ದಾಪುರದಲ್ಲಿ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕಿದ್ದ ಮೂವರು ಲಾರಿ ಸಮೇತ ಸಿಕ್ಕಿಬಿದ್ದಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ತುಂಬಿ ಸಾಗಣೆ ಮಾಡುತ್ತಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ. ಸಿದ್ದಾಪುರದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಸಿದ್ದಾಪುರ ಪಟ್ಟಣದ ಭಗತ್ ಸಿಂಗ್ ವೃತ್ತದ ಬಳಿ, ತಹಶೀಲ್ದಾರ್ ನೇತೃತ್ವದ ತಂಡದಿಂದ ದಾಳಿ ಮಾಡಲಾಗಿದೆ. ಪರಿಣಾಮ, ಅಂದಾಜು 1,73,952 ರೂಪಾಯಿ ಮೌಲ್ಯದ, 50 ಕೆಜಿ ತೂಕದ 163 ಚೀಲದ, 81.40 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದ್ದು, ಬಾವ ಪಕೀರಸಾಬ ಅಮೀನಾ ಸರ್ಕಲ್ ಸಿದ್ದಾಪುರ, ಅರವಿಂದ ಶೇಷಗಿರಿ ಭಟ್ ಸಿದ್ದಾಪುರ, ಶ್ರೀನಿವಾಸ್ ಗೌಡ ಮೈಸೂರು ಅನ್ನೋ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಮುಂಡಗೋಡ ಬಿಜೆಪಿಯಲ್ಲಿ “ಲೋಕಲ್” ನಿರ್ಲಕ್ಷಕ್ಕೆ ನಿತ್ಯವೂ ಕತ್ತಲರಾತ್ರಿ..! ಒಳಗೊಳಗಿನ “ಕೆಂಡ” ಕ್ಕೆ ಮೈ ಛಳಿಬಿಟ್ಟು ಕೂತಿದೆ ಕಾಂಗ್ರೆಸ್..!!
ಮುಂಡಗೋಡ ತಾಲೂಕಿನಲ್ಲಿ ಬಿಜೆಪಿ ಇಷ್ಟರ ಮಟ್ಟಿಗೆ ಕುಬ್ಜವಾಯ್ತಾ..? ಅದ್ರಲ್ಲೂ ಸಚಿವ ಹೆಬ್ಬಾರ್ ಸಾಹೇಬ್ರು ಇಂತಹ ರಾಜಕಾರಣಕ್ಕೆ ಜೋತುಬಿದ್ರಾ..? ನಿಜಕ್ಕೂ ನಿಬ್ಬೆರಗಾಗಿ ಯೋಚಿಸ್ತಿದಾರೆ ಜನ. ಯಾಕಂದ್ರೆ, ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳದೇ, ಜಿದ್ದಿನ ರಾಜಕೀಯಕ್ಕೆ ಬಂದು ನಿಂತಿರೋದಾದ್ರೂ ಯಾತಕ್ಕೆ ಅನ್ನೋ ಪ್ರಶ್ನೆ ಸಹಜವಾಗೇ ಗುಲ್ಲೆಬ್ಬಿಸಿದೆ. ಅದಕ್ಕೆ ಕಾರಣ, ಬಡ್ಡಿಗೇರಿಯ ಮುಗ್ದ ಕಾರ್ಯಕರ್ತರು ಕಾಂಗ್ರೆಸ್ ಶಾಲು ಹೊದ್ದಿಸಿಕೊಂಡು “ಕೈ” ಹಿಡಿದಿದ್ದರು ಅನ್ನೋ ಬೃಹನ್ ಕತೆ. ಆನಂತರ, ಅವ್ರನ್ನ ಮತ್ತೆ ಕರೆದು, ಬಿಜೆಪಿ ಶಾಲು ಹೊದಿಸಿ ಅದನ್ನೇ ಬಹುದೋಡ್ಡ ಸಾಧನೆ ಅಂತಾ ಬೀಗ್ತಿರೋ ಹೆಬ್ಬಾರ ಬಳಗ. ಮತ್ತೆ ಅದಕ್ಕೊಂದು ಪತ್ರಿಕಾ ಪ್ರಕಟಣೆ..! ಇಲ್ಲಿ, ಅಸಲೀ ಕತೆಯೇ ಬೇರೆ ಇದೆ. ಸಣ್ಣ ಸಂಗತಿಗಳಲ್ಲಿ ಸಂತೃಪ್ತಿ ಪಡೆಯುವ ಬದಲು, ಇಡೀ ಕ್ಷೇತ್ರದಲ್ಲಿ, ಅದ್ರಲ್ಲೂ ಮುಂಡಗೋಡ ಬಿಜೆಪಿಯಲ್ಲಿ ಒಳಗೊಳಗೆ ಏನ್ ನಡೀತಿದೆ ಅನ್ನೋದರ ಒಂದಿಷ್ಟು ಅಸಲೀ ಸಂಗತಿಗಳ ಕಡೆ ಸಾಹೇಬ್ರು ಗಮನ ಕೊಡಬೇಕಿದೆ. ಯುವ ಶಕ್ತಿಗೆ ಬೆಲೆ ಕೊಡಿ..! ಅಸಲು, ಮುಂಡಗೋಡ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಒಳಗೊಳಗೇ ಕೊತ ಕೊತ...
ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಗ್ರಾಮಗಳಲ್ಲಿ ಪಂ.ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ..!
ಮುಂಡಗೋಡ- ತಾಲೂಕಿನ ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಸೇರಿದಂತೆ ತಾಲೂಕಿನಾದ್ಯಂತ ಇಂದು ಹಲವು ಗ್ರಾಮಗಳಲ್ಲಿ ಜನಸಂಘದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 105ನೇ ಜನ್ಮದಿನ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಹುನಗುಂದ ಗ್ರಾಮದ ಶಕ್ತಿಕೇಂದ್ರದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ, ಬೂತ್ ಗಳ ಅಧ್ಯಕ್ಷರುಗಳು, ಗ್ರಾಮಗಳ ಪ್ರಮುಖರು, ಬಿಜೆಪಿಯ ಹಿರಿಯರು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.
ನಕಲಿ ಸಹಿ ಮಾಡಿ ಭೂಮಿ ನೋಂದಾಯಿಸಿದ್ದ ಗ್ರೇಡ್2 ತಹಶೀಲ್ದಾರ್ ಅರೆಸ್ಟ್..!
ಚಿಕ್ಕೋಡಿ: ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ನೊಂದಾಯಿಸಿದ್ದ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಅರೆಸ್ಟ್ ಆಗಿದ್ದಾರೆ. ಚಿಕ್ಕೋಡಿ ತಹಶೀಲ್ದಾರರ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಶ್ರೀಖಂಡೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಏನದು ಕೇಸ್..? ಬಂಧಿತ ಗ್ರೇಡ್ 2 ತಹಶೀಲ್ದಾರ್ ಶ್ರೀಖಂಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಮಾರುತಿ ಕರಿಗಾರ ಎಂಬುವರಿಗೆ ಸೇರಿದ್ದ ರಿ.ನಂ 436/5ಮತ್ತು 436/6 ರ ಜಮೀನು ಕೊಟ್ಟಿ ದಾಖಲೆ ಸೃಷ್ಠಿಸಿ, ಖರೀದಿ ಮಾಡಿ, ಪೋರ್ಜರಿ ಸಹಿ ಮಾಡಿ ಭೂಮಿಯನ್ನು ನೊಂದಾಯಿಸಿದ್ದ ಆರೋಪವಿತ್ತು. ಈ ಬಗ್ಗೆ ಮಾರುತಿ ಕರಿಗಾರ ಎಂಬುವವರು ನೀಡಿದ ದೂರಿನ ಮೇರೆಗೆ ಗ್ರೇಡ್ 2 ತಹಶಿಲ್ದಾರ್ ಅವರನ್ನು ಚಿಕ್ಕೋಡಿ ಪೊಲೀಸ್ರು ಬಂಧಿಸಿದ್ದಾರೆ.
ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!
ಮುಂಡಗೋಡ: ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಲಮಾಣಿಯವರ ಮೇಲೆ ದೈಹಿಕ ಹಲ್ಲೆ ನಡೆಸಿದವರ ಮೇಲೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾಯತಿ ಪಿಡಿಓಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನವಿ ಅರ್ಪಿಸಿದ್ರು. ನಂದಿಕಟ್ಟಾ ಗ್ರಾಮ ಪಂಚಾಯತ ಪಿಡಿಓ ವೆಂಕಪ್ಪ ಕೆ.ಲಮಾಣಿ ರವರ ಮೇಲೆ ದೈಹಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗೌಸುಸಾಬ ಮೌಲಾಲಿ ಯಳ್ಳುರ ಎಂಬುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಅಪರಾಧಿಗೆ ತಕ್ಕೆ ಶಿಕ್ಷೆಯಾಗಬೇಕು ಅಂತಾ ನೌಕರರು ಆಗ್ರಹಿಸಿದ್ದಾರೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಸರ್ಕಾರದ ವಿವಿದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸ್ಥಳೀಯ ಮಟ್ಟದಲ್ಲಿ ಇದ್ದುಕೊಂಡು ಗ್ರಾಮದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡ ಜನರ ಮನೆ ಮನೆಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತ ಬರುತ್ತಿರುವ ಗ್ರಾಮ ಪಂಚಾಯತ ನೌಕರ ವೃಂದವಾದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು, ಎಸ್.ಡಿ.ಎ ಗಳು, ಬಿಲ್ ಕಲೆಕ್ಟರ್, ಕ್ಲರ್ಕ, ಕಂಪ್ಯೂಟರ್ ಆಪರೇಟರ್, ಸಿಪಾಯಿ, ವಾಟರಮನ್ ಗಳ ಮೇಲೆ...
ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!
ನಿಜಕ್ಕೂ ಮುಂಡಗೋಡಿನ ಮಣ್ಣ ಕಣಕಣದಲ್ಲೇ ಮಾನವೀಯತೆ ಇದೆ ಅನ್ನೋದಕ್ಕೆ ಇವತ್ತಿನ ಈ ಘಟನೆಯೇ ಸಾಕ್ಷಿ. ಯುವತಿಯೊಬ್ಳು ರಸ್ತೆಯ ಮದ್ಯದಲ್ಲೇ ಪ್ರಜ್ಞಾಹೀನವಾಗಿ ಬಿದ್ದಾಗ ಸಾರ್ವಜನಿಕರೇ ಆ ಯುವತಿಯನ್ನ ಆಸ್ಪತ್ರೆಗೆ ಸೇರಿಸಿರೋ ಘಟನೆ ನಡೆದಿದೆ. ಏನಾಯ್ತು..? ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ಸಮೀಪ ಬಂಕಾಪುರ ರಸ್ತೆಯಲ್ಲಿ ಇಂದು ಮದ್ಯಾಹ್ನ ಓರ್ವ ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ರಸ್ತೆಯಲ್ಲೆ ಬಿದ್ದಿದ್ದಾಳೆ. ಆ ಹೊತ್ತಲ್ಲಿ ಆಕೆಯ ಜೊತೆಗಿದ್ದ ಓರ್ವ ಅಜ್ಜಿ ಆತಂಕದಲ್ಲಿ ಚೀರಾಟ ಶುರುವಿಟ್ಟಿದ್ದಾಳೆ. ಆ ಕ್ಷಣ ನಿಜಕ್ಕೂ ಈ ಘಟನೆ ಯಾರಿಗೂ ಅರ್ಥವೇ ಆಗಿಲ್ಲ. ಏಕಾ ಏಕಿ ಹಾಗೆ ರಸ್ತೆಯಡಿ ಬಿದ್ದ ಯುವತಿಗೆ ಏನಾಗಿದೆ ಅನ್ನೋದೂ ಯಾರಿಗೂ ಗೊತ್ತಾಗಿಲ್ಲ. ತಕ್ಷಣವೇ ಅಲ್ಲಿನ ಕೆಲ ಯುವಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವ್ರು, ಅಂಬ್ಯುಲೆನ್ಸ್ ಗೂ ಕರೆ ಮಾಡಿದ್ದಾರೆ. ಆದ್ರೆ, ಕರೆ ಮಾಡಿದ್ರೂ ಅಂಬ್ಯುಲೆನ್ಸ್ ಬರಲೇ ಇಲ್ಲ. ಹೀಗಾಗಿ, ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೀಡಾಗಿದ್ದಾರೆ. ಪಿಟ್ಸ್ ಅನಕೊಂಡ್ರು..! ಹಾಗೆ, ರಸ್ತೆಯಲ್ಲಿ ಏಕಾಏಕಿ ಬಿದ್ದು ನರಳಾಡುತ್ತಿದ್ದ ಯುವತಿಗೆ ಬಹುಶಃ ಪಿಟ್ಸ್ ಬಂದಿರಬಹುದು...
ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?
ಇಡೀ ರಾಜ್ಯ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದೆ. ಅದ್ರಲ್ಲೂ ಈ ಮೂರನೇ ಅಲೆ ಅನ್ನೋದು ಬಹುತೇಕ ಮಕ್ಕಳಿಗೆ ತುಂಬಾ ಎಫೆಕ್ಟ್ ಆಗತ್ತೆ ಅನ್ನೋ ಮಾತುಗಳನ್ನು ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗೇ ಸರ್ಕಾರ ಮಕ್ಕಳ ಆರೋಗ್ಯದ ಸಲುವಾಗಿ ಇನ್ನಿಲ್ಲದ ಕಟ್ಟೇಚ್ಚರ ವಹಿಸಿದೆ. ಸಾಂಕ್ರಾಮಿಕ ಜ್ವರದ ಬಾಧೆ..! ಅಂದಹಾಗೆ, ಸದ್ಯ ಇಡೀ ರಾಜ್ಯಾದ್ಯಂತ ಪುಟ್ಟ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ಜ್ವರದ ಬಾಧೆ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಸೇರಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿವೆ. ಮುಂಡಗೋಡ ತಾಲೂಕೂ ಇದಕ್ಕೆ ಹೊರತಾಗಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಜ್ವರದಿಂದ ಬಳಲುತ್ತಿರೋ ಮಕ್ಕಳ ದೇಖರೇಕಿ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಎರಡನೇ ಅಲೆಯ ಹೊಡೆತ..! ಅಂದಹಾಗೆ, ಕಳೆದ ಎರಡನೇ ಅಲೆಯ ಹೊಡೆತಕ್ಕೆ ಮುಂಡಗೋಡ ತಾಲೂಕು ಇಡಿ ಇಡಿಯಾಗಿ ನರಳಿತ್ತು. ಅದೇಷ್ಟೋ ಜನ ಕೊರೊನಾ ಕಾಟಕ್ಕೆ ತುತ್ತಾಗಿ ಇನ್ನೂ ಅದರ ಸೈಡ್ ಎಫೆಕ್ಟ್ ನಿಂದ ಹೊರಬಂದಿಲ್ಲ. ನಿನ್ನೆಯಷ್ಟೇ ನನ್ನ ಜೊತೆ ಕೂತು ಟೀ ಕುಡಿದಿದ್ದಾ ರೀ, ಇವತ್ತು...
ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!
ಶಿರಸಿ: ಮನೆಯ ಛಾವಣಿಯಲ್ಲಿ ಅಡಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಸುರನಗದ್ದೆಯ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಉರಗ ತಜ್ಞ ಪ್ರಶಾಂತ ಹುಲೇಕಲ್, ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಹಿಡಿದರು. ನಂತರ ಶಿವಗಂಗಾ ಫಾಲ್ಸ ಬಳಿಯ ನಿರ್ಜನ ಪ್ರದೇಶದ ರಕ್ಷಿತಾರಣ್ಯದಲ್ಲಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಯಿತು. ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್.ಎಫ್.ಓ ಮಂಜುನಾಥ ಹೆಬ್ಬಾರ, ಡಿ.ವೈ.ಆರ್.ಎಫ್.ಓ ರಾಘವೇಂದ್ರ ಹೆಗಡೆ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ, ವಾಹನ ಚಾಲಕ ನಾಗರಾಜ ಉಪಸ್ಥಿತರಿದ್ದರು.
ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!
ಮುಂಡಗೋಡ: ಪಟ್ಟಣದಲ್ಲಿ ಸೆಪ್ಟೆಂಬರ್ 3 ರ ರಾತ್ರಿ ನಡೆದಿದ್ದ , ಪೋಟೊ ಸ್ಟುಡಿಯೋ ಹಾಗೂ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹಾಳಬಾವಿಕೇರಿಯ ಇಮಾಮಸಾಬ ದಾವಲಸಾಬ ಅಲ್ಲಿಬಾಯಿ (21) ಎಂಬುವವನೇ ಕಳ್ಳತನದ ಆರೋಪಿಯಾಗಿದ್ದಾನೆ. ಬಂಧಿತ ಅಂತರ್ ಜಿಲ್ಲಾ ಕಳ್ಳನಿಂದ ಪೇನಾಸಾನಿಕ್ ಎ.ಜಿ.ಎಸ್.ಸಿ-90 ವಿಡಿಯೋ ಕ್ಯಾಮರಾ, ನಿಕಾನ್ ಡಿ- 3500 ಡಿ.ಎಸ್.ಎಲ್.ಆರ್ ಫೋಟೋ ಕ್ಯಾಮರಾ, 20 ಮೊಬೈಲ್ ಗಳು ಹಾಗೂ ಮೊಬೈಲ್ ನ ಬಿಡಿ ಭಾಗಗಳು ಸೇರಿ, ಸುಮಾರು ಒಂದೂವರೇ ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪಿಐ ಸಿದ್ಧಪ್ಪ ಎಸ್. ಸಿಮಾನಿ ರವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ ಮಬನೂರ, ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಧರ್ಮರಾಜ, ಸುರೇಶ್ ವಿ, ವಿನೋದಕುಮಾರ, ಅರುಣಕುಮಾರ ಬಿ,...