ಇಡೀ ರಾಜ್ಯ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದೆ. ಅದ್ರಲ್ಲೂ ಈ ಮೂರನೇ ಅಲೆ ಅನ್ನೋದು ಬಹುತೇಕ ಮಕ್ಕಳಿಗೆ ತುಂಬಾ ಎಫೆಕ್ಟ್ ಆಗತ್ತೆ ಅನ್ನೋ ಮಾತುಗಳನ್ನು ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗೇ ಸರ್ಕಾರ ಮಕ್ಕಳ ಆರೋಗ್ಯದ ಸಲುವಾಗಿ ಇನ್ನಿಲ್ಲದ ಕಟ್ಟೇಚ್ಚರ ವಹಿಸಿದೆ.

ಸಾಂಕ್ರಾಮಿಕ ಜ್ವರದ ಬಾಧೆ..!
ಅಂದಹಾಗೆ, ಸದ್ಯ ಇಡೀ ರಾಜ್ಯಾದ್ಯಂತ ಪುಟ್ಟ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ಜ್ವರದ ಬಾಧೆ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಸೇರಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿವೆ. ಮುಂಡಗೋಡ ತಾಲೂಕೂ ಇದಕ್ಕೆ ಹೊರತಾಗಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಜ್ವರದಿಂದ ಬಳಲುತ್ತಿರೋ ಮಕ್ಕಳ ದೇಖರೇಕಿ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ಎರಡನೇ ಅಲೆಯ ಹೊಡೆತ..!
ಅಂದಹಾಗೆ, ಕಳೆದ ಎರಡನೇ ಅಲೆಯ ಹೊಡೆತಕ್ಕೆ ಮುಂಡಗೋಡ ತಾಲೂಕು ಇಡಿ ಇಡಿಯಾಗಿ ನರಳಿತ್ತು. ಅದೇಷ್ಟೋ ಜನ ಕೊರೊನಾ ಕಾಟಕ್ಕೆ ತುತ್ತಾಗಿ ಇನ್ನೂ ಅದರ ಸೈಡ್ ಎಫೆಕ್ಟ್ ನಿಂದ ಹೊರಬಂದಿಲ್ಲ. ನಿನ್ನೆಯಷ್ಟೇ ನನ್ನ ಜೊತೆ ಕೂತು ಟೀ ಕುಡಿದಿದ್ದಾ ರೀ, ಇವತ್ತು ತೀರಿಕೊಂಡುಬಿಟ್ಟ, ಕೋರೊನಾ ಬಂದಿತ್ತಂತೆ” ಅನ್ನೋ ಮಾತುಗಳನ್ನು ನಾವೇಲ್ಲರೂ ಕೇಳಿ ಕೇಳಿ ಮಮ್ಮಲ ಮರುಗಿದ್ದೇವೆ. ಆತಂಕ ಪಟ್ಟಿದ್ದೇವೆ. ಅಷ್ಟರ ಮಟ್ಟಿಗೆ ಕೋರೊನಾ ನಮ್ಮನ್ನೇಲ್ಲ ಹಿಂಡಿ ಹಿಪ್ಪೆ ಮಾಡಿತ್ತು.

ಆದೇಶ ಪ್ರತಿ

ಈ ಕಾರಣಕ್ಕಾಗೇ ರಾಜ್ಯಾದ್ಯಂತ ಸರ್ಕಾರ ಇದುವರೆಗೂ ಶಾಲೆಗಳನ್ನು ಬಂದ್ ಮಾಡಿತ್ತು.. ಆದ್ರೆ, ಕೆಲ ದಿನಗಳ ಹಿಂದೆಯಷ್ಟೇ 6 ನೇ ತರಗತಿಯಿಂದ 8 ನೇ ತರಗತಿಗಳಿಗೆ ಮಾತ್ರ ಅವಕಾಶ ಕೊಟ್ಟು, ಮುಂಜಾಗ್ರತಾ ಕ್ರಮಗಳೊಂದಿಗೆ, ಕಟ್ಟೇಚ್ಚರ ವಹಿಸಿ ಶಾಲೆಗಳನ್ನು ತೆರೆದಿದೆ‌. ಆದ್ರೆ, ನರ್ಸರಿ, LKG, UKG ಹಾಗೂ 1 ರಿಂದ 5 ನೇ ತರಗತಿಗಳನ್ನು ಬಿಲ್ ಕುಲ್ ತೆರೆದಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಅವಕಾಶ ನೀಡಿಲ್ಲ.. ಆದ್ರೆ, ಇದೇಲ್ಲ ಮುಂಡಗೋಡ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತೇ ಅಗಿಲ್ಲವಾ..? ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದಾರಾ..? ಒಂದೂ ಅರ್ಥವಾಗ್ತಿಲ್ಲ.. ಯಾಕಂದ್ರೆ, ಮುಂಡಗೋಡಿನ ಅದೊಂದು ಶಾಲೆ ಪುಟ್ಟ ಪುಟ್ಟ ಮಕ್ಕಳ ಆರೋಗ್ಯ ಹಾಗೂ ಜೀವಗಳ ಜೊತೆ ಚೆಲ್ಲಾಟವಾಡ್ತಿದೆ.

ರಹಸ್ಯ ಕಾರ್ಯಾಚರಣೆ ದೃಷ್ಯ-1

ಅದು ಪ್ರತಿಷ್ಟಿತವಂತೆ “ಲೊಯೊಲಾ”..!
ಯಸ್, ಮುಂಡಗೋಡಿನ ಶಿರಸಿ ರಸ್ತೆಯಲ್ಲಿರೋ ಲೊಯೊಲಾ ಕೇಂದ್ರೀಯ ವಿದ್ಯಾಲಯದ ಸಿಬಿಎಸ್ ಇ ಪಠ್ಯಕ್ರಮ ಬೋಧಿಸುವ ಶಾಲೆಯಲ್ಲಿ ನಿತ್ಯವೂ ಎಲ್ಲಾ ತರಗತಿಗಳು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಹಾಗಂತ, ನಾವು ಹೇಳ್ತಿಲ್ಲ. ಬದಲಾಗಿ ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳೇ ಪಬ್ಲಿಕ್ ಫಸ್ಟ್ ಎದುರು ಹೇಳಿದ್ದಾರೆ ಕೇಳಿ.

ರಹಸ್ಯ ಕಾರ್ಯಾಚರಣೆ ದೃಷ್ಯ-2

ಸಾಮಾಜಿಕ ಜವಾಬ್ದಾರಿ ಇಲ್ವಾ..?
ಅಂದಹಾಗೆ, ಶಿರಸಿ ರಸ್ತೆಯ ಲೊಯೊಲಾ ಕೇಂದ್ರೀಯ ವಿದ್ಯಾಲಯದಲ್ಲಿ ಹೀಗೆ ಎಲ್ಲಾ ರೀತಿಯ ತರಗತಿಗಳು ಪ್ರಾರಂಭವಾಗಿದ್ದು ಈಗಷ್ಟೇ ಅಲ್ಲ. ಯಾವಾಗ, ಸರ್ಕಾರ ಆರರಿಂದ ಎಂಟನೇ ತರಗತಿವರೆಗೆ ಪ್ರಾಥಮಿಕ ಶಾಲೆಗಳನ್ನ ಓಪನ್ ಮಾಡಲು ಅವಕಾಶ ಕಲ್ಪಿಸಿತ್ತೋ ಅದಕ್ಕೂ ಮೊದಲಿನಿಂದಲೇ ಶುರುವಾಗಿವೆ. ಹಾಗಂತ ಇಲ್ಲಿನ ಹಲವು ಪೋಷಕರು ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಕರೆ ಮಾಡಿ ಆರೋಪಿಸುತ್ತಲೇ ಇದ್ರು. ಅಸಲು, ಇದೇಲ್ಲ ಬಹುತೇಕ ಪೋಷಕರಿಗೆ ಸಹ್ಯ ಆಗದೇ ಇದ್ರೂ ಅದನ್ನ ಯಾರೂ ಪ್ರಶ್ನಿಸುವ ಹಾಗಿರಲಿಲ್ಲ. ಯಾಕಂದ್ರೆ, ಹಾಗೆ ಪ್ರಶ್ನಿಸಿದ ಪೋಷಕರ ಮಕ್ಕಳು ಅಲ್ಲಿ ಟಾರ್ಗೆಟ್ ಆಗುತ್ತಿದ್ದರಂತೆ. ಹೀಗಾಗಿ, ಅಂತಹ ಕೆಲವು ಪ್ರಜ್ಞಾವಂತ ಪೋಷಕರು ನಮ್ಮೇದುರು ಅಳಲು ತೋಡಿಕೊಂಡಿದ್ರು. ಹಾಗೆ ಪ್ರತಿಷ್ಟಿತ ಸ್ಥಾನದಲ್ಲಿರೋ ಶಾಲಾ ಆಡಳಿತ ಮಂಡಳಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವಾ ಅಂತಾ ಪ್ರಶ್ನಿಸುತ್ತಲೇ ಇದ್ದರು. ಇದೇಲ್ಲ ಇಲ್ಲಿನ ಅಧಿಕಾರಿಗಳಿಗೆ, ತಾಲೂಕಾಡಳಿತಕ್ಕೆ ಯಾಕೆ ನಜರಿಗೆ ಬರಲಿಲ್ಲ. ಇದೇ ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.

ರಹಸ್ಯ ಕಾರ್ಯಾಚರಣೆ ದೃಷ್ಯ-3

ಪೋಷಕರ ಒಪ್ಪಿಗೆ ಪತ್ರವಂತೆ..!
ಅಂದಹಾಗೆ, ಈ ಶಾಲೆಯವರ ವಿಪರೀತ ಜಾಣತನ ಏನು ಗೊತ್ತಾ..? ಇಲ್ಲಿ ಎಲ್ ಕೆಜಿ, ಯೂಕೆಜಿ ಸೇರಿ ಒಂದರಿಂದ, ಐದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕು ಅಂದ್ರೆ ಪೋಷಕರು ಒಪ್ಪಿಗೆ ಪತ್ರ ನೀಡಿ ಸೇರಿಸಬೇಕಂತೆ. ಇಲ್ಲವಾದಲ್ಲಿ ಒಳಗಡೆ ಪಡಿಯೋದೇ ಇಲ್ಲವಂತೆ. ಇದು ಈ ಲೊಯೊಲಾ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಮಾಡಿಕೊಂಡಿರೋ ಅವರದ್ದೇ ಕಾನೂನು. ಗಮನಿಸಿ, ಸರ್ಕಾರ 6 ರಿಂದ 7 ನೇ ತರಗತಿ, ಅದಷ್ಟೇ ಯಾಕೆ ಹೈಸ್ಕೂಲು ವಿದ್ಯಾರ್ಥಿಗಳೂ ಕೂಡ ಖಡಾ ಖಂಡಿತವಾಗಿ ಶಾಲೆಗೆ ಬರಲೇ ಬೇಕು ಅನ್ನೋ ಕಟ್ಟಳೆ ಹೊರಡಿಸಿಯೇ ಇಲ್ಲ. ಪೋಷಕರು, ತಮಗೊಪ್ಪುವ ವಾತಾವರಣ ಕಂಡ್ರೆ ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು. ಆದ್ರೆ, 1 ರಿಂದ 5 ನೇ ತರಗತಿಗೆ ಅದೇಂತದ್ದೇ ವಾತಾವರಣವಿದ್ದರೂ ತರಗತಿಗಳನ್ನು ನಡೆಸುವ ಹಾಗೇ ಇಲ್ಲ. ಅಂತಹದ್ದೊಂದು ಖಡಕ್ ಆದೇಶ ಸರ್ಕಾರ ಅವಾಗ್ಲೇ ಜಾರಿ‌ಮಾಡಿ ಆಗಿದೆ. ಹೀಗಿದ್ದಾಗ್ಯೂ ಈ ಲೊಯೊಲಾ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿಗೆ ಇದೇಲ್ಲ ಯಾಕೆ ಗೊತ್ತಾಗಿಲ್ಲ..?

ರಹಸ್ಯ ಕಾರ್ಯಾಚರಣೆ ದೃಷ್ಯ-4

ಎಲ್ಲವೂ ಫೀಸ್ ಗಾಗಿ..!
ನಿಮಗೆ ಗೊತ್ತಿರಲಿ, ಇಲ್ಲಿನ ವಿದ್ಯಾರ್ಥಿಗಳೇ ಹೇಳೋ ಪ್ರಕಾರ ಈ ಲೊಯೊಲಾ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಅಡ್ಮಿಶನ್ ಪಡೀಬೇಕು ಅಂದ್ರೆ ಕನಿಷ್ಟ 30 ಸಾವಿರ ಬೇಕಂತೆ. ಇದು, ಹೈಸ್ಕೂಲು ವಿದ್ಯಾರ್ಥಿಗಳ ಫೀಸು ಅಂತಾ ಅನಕೊಬೇಡಿ. ನರ್ಸರಿ, ಎಲ್ ಕೆ ಜಿ, ಯೂಕೆಜಿ, 1, 2, 3,4 ನೇ ತರಗತಿ ವಿದ್ಯಾರ್ಥಿಗಳನ್ನು ಈ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಬೇಕಂದ್ರೆ ಸಾವಿರ ಸಾವಿರ ಹಣ ಬೇಕೇ ಬೇಕು. ನಿಜ ಅಂದ್ರೆ ಈ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಬೇಕು ಅಂದ್ರೆ ಅದು ಸುಲಭದ ಮಾತಲ್ಲ. ಯಾಕಂದ್ರೆ, ಇವ್ರ ಪೀಸು, ಡೋನೇಶನ್ನು, ಎಕ್ಸಿಟ್ರಾ, ಎಕ್ಸಿಟ್ರಾಗಳು ಬಡವರಿಗೆ ಬಿಲ್ ಕುಲ್ ಸರಿಹೊಂದಲ್ಲ ಬಿಡಿ. ಈ ಕಾರಣಕ್ಕಾಗೇ, ಇತ್ತೀಚೆಗೆ ಇಲ್ಲಿನ ಕೆಲವು ಪೋಷಕರು ಡಿಡಿಪಿಐ ವರೆಗೂ ತಮ್ಮ ಅಳಲು ಹೊತ್ತೊಯ್ದಿದ್ದರು. ಆದ್ರೆ, ಅದೇಲ್ಲ ಅವ್ರ “ಅಳಲು” ಆಗಿ ಹೋಯ್ತು ಬಿಟ್ಟರೆ, ಆ ಅಧಿಕಾರಿಗಳು ಮಾತ್ರ ಯಾವ ಕ್ರಮವನ್ನೂ ಪಡೆಯಲೇ ಇಲ್ಲ. ಅಷ್ಟಕ್ಕೂ, ಅದು ಅವರ ಶೈಕ್ಷಣಿಕ ಕಲಿಕೆಯೆ ತಾಕತ್ತು, ಹಾಗೆ ಅಲ್ಲಿನ ವ್ಯವಸ್ಥೆಗಳಿಗೆ ಅನುಗುಣವಾಗಿ ಅವ್ರು ಪಡೆಯುವ ಫೀಸು ಆಗಿರತ್ತೆ ಅನ್ನಬಹುದೇನೋ. ಹೀಗಾಗಿ, ಅದನ್ನ ನಾವಿಲ್ಲಿ ಪ್ರಶ್ನಿಸುತ್ತಿಲ್ಲ. ಪ್ರಶ್ನಿಸುವುದೂ ಇಲ್ಲ.. ಆದ್ರೆ ಇಡೀ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ, ತಜ್ಞರ ಜೊತೆ ಚರ್ಚಿಸಿ ಜಾರಿ ಮಾಡಿರೋ ಕಾನೂನುಗಳನ್ನು ಯಾಕೆ ಈ ಶಾಲೆ ಪಾಲಿಸುತ್ತಿಲ್ಲ..? ಹಾಗಾದ್ರೆ, ಇವರದ್ದೇ ಬೇರೆ ಕಾನೂನಾ..? ಹಾಗಂತ, ಪ್ರಜ್ಞಾವಂತರು
ಪ್ರಶ್ನಿಸುತ್ತಿದ್ದಾರೆ.

ರಹಸ್ಯ ಕಾರ್ಯಾಚರಣೆ ದೃಷ್ಯ-5

ರೋಟರಿ ಶಾಲೆಯ ಹೆಮ್ಮೆ..!
ನಿಜ ಅಂದ್ರೆ ಮುಂಡಗೋಡಿನಲ್ಲಿ ಸಾಕಷ್ಟು ಖಾಸಗಿ ಶಾಲೆಗಳಿವೆ. ಅದ್ರಲ್ಲಿ ರೋಟರಿ ಶಾಲೆ ಸೇರಿದಂತೆ ಬೇರೆ ಯಾವ ಶಾಲೆಗಳೂ ಸರ್ಕಾರದ ನಿಯಮಗಳ ವಿರುದ್ಧವಾಗಿ ಹೆಜ್ಜೆ ಇಟ್ಟಿಲ್ಲ. ಆದ್ರೆ ಈ ಲೊಯೊಲಾ ಕೇಂದ್ರೀಯ ವಿದ್ಯಾಲಯ ಮಾತ್ರ ಅದ್ಯಾಕೆ ಹೀಗೆ ಸರ್ಕಾರದ ನಿಯಮದ ವಿರುದ್ಧ ಇದೆ‌. ಹಾಗಾದ್ರೆ, ಈ ಶಾಲೆಗೆ ಅದ್ಯಾರ ಕೃಪಾಕಟಾಕ್ಷ ಇದೆ. ಅಧಿಕಾರಿಗಳು ಈ ಶಾಲೆಯ ಬಗ್ಗೆ ಯಾಕೆ “ಮೌನ ಸಮ್ಮತಿ” ನೀಡಿದ್ದಾರೆ..? ಇದೇಲ್ಲ ಪ್ರಶ್ನೆಗಳೂ ಸದ್ಯ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿವೆ.

ರಹಸ್ಯ ಕಾರ್ಯಾಚರಣೆ ದೃಷ್ಯ-6

ತಹಶೀಲ್ದಾರ್ ಸಾಹೇಬ್ರೇ ಗಮನಿಸಿ..!
ನಿಜ, ಕೋವಿಡ್ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ತಾಲೂಕಿನ ಪ್ರತೀ ಹಳ್ಳಿಗಳ ಸಮಸ್ಯೆಗಳ ಕುರಿತು ಜಾಗ್ರತೆ ವಹಿಸಿದ್ದವರು ಅಂದ್ರೆ ಅದು ಮುಂಡಗೋಡಿನ ತಹಶೀಲ್ದಾರ್ ಶ್ರೀಧರ ಮುಂದಲಮನಿ, ಆದ್ರೆ, ಅದ್ಯಾಕೋ ಏನೋ ತಹಶೀಲ್ದಾರ್ ಸಾಹೇಬ್ರಿಗೆ ಇದೇಲ್ಲ ಯಾಕೆ ಗಮನಕ್ಕೆ ಬರಲಿಲ್ಲ..? ಅಷ್ಟಕ್ಕೂ ಶಿಕ್ಷಣ ಇಲಾಖೆ ಅಧಿಕಾರಿಗಳು ಒಳಗೊಳಗೇ ಗಪ್ ಚುಪ್ ಆಗಿ ಯಾಕೆ ಕೂತುಕೊಂಡಿದ್ದಾರೆ..? ಇದೇಲ್ಲ ಯಾರಿಗೂ ಅರ್ಥವಾಗದ ಪ್ರಶ್ನೆಯಾಗಿವೆ.

ರಹಸ್ಯ ಕಾರ್ಯಾಚರಣೆ ದೃಷ್ಯ-7

ತಮ್ಮ ಗಮನಕ್ಕೆ..
ನಾವು ಖಂಡಿತ ಶಿಕ್ಷಣದ ವಿರೋಧಿಗಳಲ್ಲ. ಕಳೆದ ಎರಡು ವರ್ಷದ ಅವಧಿಯಲ್ಲಿ ನಮ್ಮೇಲ್ಲರ ಮಕ್ಕಳೂ ಶಾಲೆಯನ್ನೇ ಮರೆತುಬಿಟ್ರಾ ಅನ್ನೋ ಸ್ಥಿತಿಯೂ ನಿರ್ಮಾಣವಾಗಿತ್ತು. ಮಕ್ಕಳಿಗೆ ಸಿಗಬೇಕಿದ್ದ ಶಿಕ್ಷಣ ಕೋವಿಡ್ ಹಿನ್ನೆಲೆಯಲ್ಲಿ ಸಿಕ್ಕೇ ಇಲ್ಲ. ಹಾಗಂತ, ಅದರ ಜೊತೆ ಆರೋಗ್ಯದ ಹಿತದೃಷ್ಟಿಯ ಚಿಂತನೆ ಬೇಡವಾ..? ಜೀವನಕ್ಕಿಂತ ಜೀವವೇ ಮುಖ್ಯ ಅನ್ನೋದು ಬಹುಶಃ ಎಲ್ಲರಿಗೂ ಅರ್ಥವಾಗಿತ್ತು. ಹೀಗಾಗಿ, ಸರ್ಕಾರವೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸರ್ಕಾರದ ನಿಯಮ ಒತ್ತಟ್ಟಿಗಿರಲಿ, ನಮ್ಮ ಮಕ್ಕಳ ಆರೋಗ್ಯ ನಮಗೆ ಮುಖ್ಯವಲ್ಲವೇ..? ಪೋಷಕರೂ ಯೋಚಿಸಬೇಕಿದೆ.

ಆದೇಶ ಪ್ರತಿ

ಬಿಇಓ ಸಾಹೇಬ್ರೇ ಎಲ್ಲಿದ್ದೀರಿ..?
ಇನ್ನು, ಈ ಕೇಂದ್ರೀಯ ವಿದ್ಯಾಲಯದಲ್ಲಿ ಹೀಗೆ ಪುಟ್ಟ ಪುಟ್ಟ ಮಕ್ಕಳಿಗೆ ತರಗತಿಗಳು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಆದ್ರೆ, ಇದೇಲ್ಲ ಇಲ್ಲಿನ ಬಿಇಓ ಸಾಹೇಬ್ರಿಗೆ ಮಾತ್ರ ಕಾಣಲೇ ಇಲ್ವಾ..? ಅಥವಾ ಕಂಡ್ರೂ ಕೂಡ ಇದೇಲ್ಲ ನಮಗ್ಯಾಕೆ ಅಂತಾ ಬೆಪ್ಪಗೆ ಕೂತು ಬಿಟ್ರಾ..? ಅವ್ರೇ ಉತ್ತರಿಸಬೇಕಿದೆ. ಆದ್ರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರೋ ಶಿಕ್ಷಣ ಸಂಸ್ಥೆಗೆ ಈಗಲಾದರೂ ಇಲ್ಲಿನ ಅಧಿಕಾರಿಗಳು ಕಿವಿ ಹಿಂಡಿ ಕ್ರಮ ಕೈಗೊಳ್ತಾರಾ ಕಾದು ನೋಡಬೇಕಿದೆ.

error: Content is protected !!