ಸಿದ್ದಾಪುರದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ; ಒಂದು ಲಾರಿ ವಶಕ್ಕೆ, ಮೂವರ ಮೇಲೆ ಕೇಸ್..!

ಸಿದ್ದಾಪುರ: ಸಿದ್ದಾಪುರದಲ್ಲಿ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕಿದ್ದ ಮೂವರು ಲಾರಿ ಸಮೇತ ಸಿಕ್ಕಿಬಿದ್ದಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ತುಂಬಿ ಸಾಗಣೆ ಮಾಡುತ್ತಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ‌.

ಸಿದ್ದಾಪುರದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಸಿದ್ದಾಪುರ ಪಟ್ಟಣದ ಭಗತ್ ಸಿಂಗ್ ವೃತ್ತದ ಬಳಿ, ತಹಶೀಲ್ದಾರ್ ನೇತೃತ್ವದ ತಂಡದಿಂದ ದಾಳಿ ಮಾಡಲಾಗಿದೆ.

ಪರಿಣಾಮ, ಅಂದಾಜು 1,73,952 ರೂಪಾಯಿ ಮೌಲ್ಯದ, 50 ಕೆಜಿ ತೂಕದ 163 ಚೀಲದ, 81.40 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ‌. ಜೊತೆಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದ್ದು, ಬಾವ ಪಕೀರಸಾಬ ಅಮೀನಾ ಸರ್ಕಲ್ ಸಿದ್ದಾಪುರ, ಅರವಿಂದ ಶೇಷಗಿರಿ ಭಟ್ ಸಿದ್ದಾಪುರ, ಶ್ರೀನಿವಾಸ್ ಗೌಡ ಮೈಸೂರು ಅನ್ನೋ ಮೂವರ ಮೇಲೆ ಪ್ರಕರಣ ದಾಖಲಾಗಿದೆ.

error: Content is protected !!