ಚಿಕ್ಕೋಡಿ: ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ನೊಂದಾಯಿಸಿದ್ದ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಅರೆಸ್ಟ್ ಆಗಿದ್ದಾರೆ.
ಚಿಕ್ಕೋಡಿ ತಹಶೀಲ್ದಾರರ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಶ್ರೀಖಂಡೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಏನದು ಕೇಸ್..?
ಬಂಧಿತ ಗ್ರೇಡ್ 2 ತಹಶೀಲ್ದಾರ್ ಶ್ರೀಖಂಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಮಾರುತಿ ಕರಿಗಾರ ಎಂಬುವರಿಗೆ ಸೇರಿದ್ದ ರಿ.ನಂ 436/5ಮತ್ತು 436/6 ರ ಜಮೀನು ಕೊಟ್ಟಿ ದಾಖಲೆ ಸೃಷ್ಠಿಸಿ, ಖರೀದಿ ಮಾಡಿ, ಪೋರ್ಜರಿ ಸಹಿ ಮಾಡಿ ಭೂಮಿಯನ್ನು ನೊಂದಾಯಿಸಿದ್ದ ಆರೋಪವಿತ್ತು.
ಈ ಬಗ್ಗೆ ಮಾರುತಿ ಕರಿಗಾರ ಎಂಬುವವರು ನೀಡಿದ ದೂರಿನ ಮೇರೆಗೆ ಗ್ರೇಡ್ 2 ತಹಶಿಲ್ದಾರ್ ಅವರನ್ನು ಚಿಕ್ಕೋಡಿ ಪೊಲೀಸ್ರು ಬಂಧಿಸಿದ್ದಾರೆ.