ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ನಿಜಕ್ಕೂ ಮುಂಡಗೋಡಿನ ಮಣ್ಣ ಕಣಕಣದಲ್ಲೇ ಮಾನವೀಯತೆ ಇದೆ ಅನ್ನೋದಕ್ಕೆ ಇವತ್ತಿನ ಈ ಘಟನೆಯೇ ಸಾಕ್ಷಿ. ಯುವತಿಯೊಬ್ಳು ರಸ್ತೆಯ ಮದ್ಯದಲ್ಲೇ ಪ್ರಜ್ಞಾಹೀನವಾಗಿ ಬಿದ್ದಾಗ ಸಾರ್ವಜನಿಕರೇ ಆ ಯುವತಿಯನ್ನ ಆಸ್ಪತ್ರೆಗೆ ಸೇರಿಸಿರೋ ಘಟನೆ ನಡೆದಿದೆ‌.

ಏನಾಯ್ತು..?
ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ಸಮೀಪ ಬಂಕಾಪುರ ರಸ್ತೆಯಲ್ಲಿ ಇಂದು ಮದ್ಯಾಹ್ನ ಓರ್ವ ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ರಸ್ತೆಯಲ್ಲೆ ಬಿದ್ದಿದ್ದಾಳೆ. ಆ ಹೊತ್ತಲ್ಲಿ ಆಕೆಯ ಜೊತೆಗಿದ್ದ ಓರ್ವ ಅಜ್ಜಿ ಆತಂಕದಲ್ಲಿ ಚೀರಾಟ ಶುರುವಿಟ್ಟಿದ್ದಾಳೆ. ಆ ಕ್ಷಣ ನಿಜಕ್ಕೂ ಈ ಘಟನೆ ಯಾರಿಗೂ ಅರ್ಥವೇ ಆಗಿಲ್ಲ. ಏಕಾ ಏಕಿ ಹಾಗೆ ರಸ್ತೆಯಡಿ ಬಿದ್ದ ಯುವತಿಗೆ ಏನಾಗಿದೆ ಅನ್ನೋದೂ ಯಾರಿಗೂ ಗೊತ್ತಾಗಿಲ್ಲ. ತಕ್ಷಣವೇ ಅಲ್ಲಿನ ಕೆಲ ಯುವಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವ್ರು, ಅಂಬ್ಯುಲೆನ್ಸ್ ಗೂ ಕರೆ ಮಾಡಿದ್ದಾರೆ. ಆದ್ರೆ, ಕರೆ ಮಾಡಿದ್ರೂ ಅಂಬ್ಯುಲೆನ್ಸ್ ಬರಲೇ ಇಲ್ಲ. ಹೀಗಾಗಿ, ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೀಡಾಗಿದ್ದಾರೆ.

ಪಿಟ್ಸ್ ಅನಕೊಂಡ್ರು..!
ಹಾಗೆ, ರಸ್ತೆಯಲ್ಲಿ ಏಕಾಏಕಿ ಬಿದ್ದು ನರಳಾಡುತ್ತಿದ್ದ ಯುವತಿಗೆ ಬಹುಶಃ ಪಿಟ್ಸ್ ಬಂದಿರಬಹುದು ಅನ್ನೋ ಶಂಕೆಯಲ್ಲಿ ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ಆ ನಂತರ ಯುವತಿ ಯಾವುದೋ ಕಾರಣಕ್ಕೆ ವಿಷ ಸೇವಿಸಿದ್ದಾಳೆ ಅನ್ನೋ ಮಾತುಗಳು ಕೇಳಿ ಬಂದ ನಂತ್ರ, ಜನ ಮತ್ತಷ್ಟು ಹೆದರಿದ್ದಾರೆ. ಹೀಗಾಗಿ, ತಕ್ಷಣವೇ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರ್ ಗೆ ಕಾಲ್ ಮಾಡಿ ” ಸರ್ ಹೀಗಾಗಿದೆ ಏನ್ ಮಾಡೋದು..? ಅಂತಾ ಕೇಳಿದ್ದಾರೆ..” ಆ ಕಡೆಯಿಂದ ಪಿಎಸ್ ಐ ಬಸವರಾಜು, ಯಾರೂ ಭಯ ಪಡಬೇಡಿ, ಮೊದಲು ಆಸ್ಪತ್ರೆಗೆ ಸೇರಿಸೋ ವ್ಯವಸ್ಥೆ ಮಾಡಿ, ನಾವೂ ತಕ್ಷಣವೇ ಅಲ್ಲಿಗೆ ಬರ್ತಿವಿ ಅಂತಾ ಹೇಳಿದ್ದಾರೆ.

ಮಾನವೀಯತೆ ಅಂದ್ರೆ ಇದೇ ಅಲ್ವಾ..?
ಪಿಎಸ್ಐ ಸಾಹೇಬ್ರು ಅಷ್ಟು ಹೇಳಿದ್ದೇ ತಡ, ರಸ್ತೆಯಲ್ಲಿ ಬಿದ್ದು ಅಕ್ಷರಶಃ ಪ್ರಜ್ಣಾಹೀನ ಸ್ಥಿತಿಗೆ ತಲುಪಿದ್ದ ಯುವತಿಯನ್ನು ಅಲ್ಲಿನ ಯುವಕರು ಹೇಗಾದ್ರೂ ಸರಿ ಬೇಗ ಆಸ್ಪತ್ರೆಗೆ ಸೇರಿಸಬೇಕು ಅಂತಾ ಆಟೋಗೆ ಬುಲಾವ್ ನೀಡಿ, ಅಸ್ವಸ್ಥಗೊಂಡಿದ್ದ ಯುವತಿಯನ್ನು ತಕ್ಷಣವೇ ಆಟೋದಲ್ಲಿ ಎತ್ತಿ ಹಾಕಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಟೋದಲ್ಲೇ ಯುವತಿಯನ್ನು ತಾಲೂಕಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಜೀವ ಕಾಪಾಡೋದಕ್ಕೆ ಭಯಬೇಡ..!
ನಿಜ, ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು, ಯಾಕಪ್ಪಾ ಬೇಕು ಪೊಲೀಸು, ಕೇಸು, ಗೀಸು ಅಂತಾ ಕೋರ್ಟಿಗೆ ಅಲಿಯೋಕೆ ಆಗಲ್ಲ, ಸಹವಾಸವೇ ಬೇಡ ಅಂತಾ ಕಣ್ಣಿಂದ ನೋಡಿಯೂ ಭಯದಲ್ಲಿ ಮುಟ್ಟಲು ಹೆದರುತ್ತಾರೆ. ಆದ್ರೆ, ಆ ಸಂದರ್ಭದಲ್ಲಿ ಪ್ರತೀ ಕ್ಷಣಗಳೂ ಅಮೂಲ್ಯವಾಗಿರತ್ತೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ರೆ ಜೀವ ಉಳಿಯೋ ಸಾಧ್ಯತೆಗಳಿರತ್ತೆ‌. ಹೀಗಾಗಿ, ಜೀವ ಉಳಿಸೋ ಪ್ರಯತ್ನ ಮಾಡಿದೋರಿಗೆ ಯಾವ ಕೋರ್ಟೂ, ಯಾವ ಪೊಲೀಸೂ ಶಿಕ್ಷೆ ಕೊಡಲ್ಲ.‌ ಹೀಗಾಗಿ, ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಒಂದಿಷ್ಟು ಮುಂದೆ ಬಂದು ಮಾನವೀಯತೆ ತೋರಬೇಕಾಗಿರತ್ತೆ. ಇವತ್ತು ಮುಂಡಗೋಡಿನ ನಾಗರಿಕರೂ ಕೂಡ ಅಂತದ್ದೇ ಮಾನವೀಯತೆ ತೋರಿದ್ದಾರೆ.

ಸದ್ಯ, ಯುವತಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅಷ್ಟಕ್ಕೂ ಆ ಯುವತಿ ಯಾರು..? ಎಲ್ಲಿಯವಳು..? ಯುವತಿಗೆ ಆಗಿದ್ದು ಏನು..? ಯಾವ ಕಾರಣಕ್ಕೆ ಆ ಯುವತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು..? ಇದೇಲ್ಲ ಮಾಹಿತಿ ಪೊಲೀಸರ ವಿಚಾರಣೆ ಬಳಿಕ ತಿಳಿಯಬೇಕಿದೆ‌.

error: Content is protected !!