ಕುಮಟಾ: ನಾಯಿ ಬೇಟೆಯಾಡಲು ಬಂದ ಚಿರತೆಯೊಂದು, ತಾನೆ ನಾಯಿ ಬಲೆಯಲ್ಲಿ ಸಿಲಕಿದ ಘಟನೆ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಮನೆಯ ಹತ್ತಿರ ಕಟ್ಟಿದ್ದ ನಾಯಿಯನ್ನು ಹಿಡಿಯಲು ಬಂದಿದ್ದ ಚಿರತೆ, ನಾಯಿಯ ಬೋನಿನೋಳಗೆ ಹೋಗಿದೆ. ಬೋನಿನೊಳಗೆ ಹೋಗಿದ್ದನ್ನ ಗಮನಿಸಿದ ಮನೆಯ ಮಾಲೀಕರು, ತಕ್ಷಣ ಬೋನ್ ಲಾಕ್ ಮಾಡಿದ್ದಾರೆ. ಹೀಗಾಗಿ, ನಾಯಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಚಿರತೆ ಈಗ ನಾಯಿ ಬೋನಲ್ಲೇ ಬಲೆ ಬಿದ್ದಿದೆ.
ಹೀಗಾಗಿ, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭವಾಗಿದೆ.