ದಾವಣಗೇರೆ: ನಾಳೆ ಶನಿವಾರದಿಂದ ಬೆಣ್ಣೆ ನಗರಿ, ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸಭೆ ನಡೆಲಿದೆ. ಕಾರ್ಯ ಕಾರಿಣಿಗೆ ಈಗಾಗಲೇ ಸ್ಮಾರ್ಟ್ ಸಿಟಿ ಸಿದ್ದಗೊಂಡಿದ್ದು, ಮುಂಬರುವ ಸ್ಥಳೀಯ ಹಾಗೂ ವಿಧಾನ ಸಭಾ ಚುನಾವಣೆಗೆ ಈಗಲೇ ತಂತ್ರ ಹೆಣಿಯುತ್ತಿದೆ.
ರಾಜಕೀಯ ಹಾಟ್ ಸ್ಪಾಟ್..!
ಹೌದು.. ವಿಕೆಂಡ್ ನಲ್ಲಿ ದಾವಣಗೆರೆ ಎರಡು ದಿನಗಳ ಕಾಲ ರಾಜಕೀಯ ಹಾಟ್ ಸ್ಪಾಟ್ ಆಗಿ ಬದಲಾಗಲಿದೆ. ಏಕೆಂದ್ರೆ. ಬಿಜೆಪಿಯ ರಾಜ್ಯ ಕಾರ್ಯ ಕಾರಿಣಿ ಸಭೆ ನಡೆಯಲಿದ್ದು ಜಿಲ್ಲೆಗೆ ಬಿಜೆಪಿ ರಾಜ್ಯ, ಹಾಗೂ ರಾಷ್ಟ್ರ ನಾಯಕರ ದಂಡೆ ಹರಿದು ಬರಲಿದೆ. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಹಾಗೂ ಮುಂಬರುವ 2023 ರ ವಿಧಾನ ಸಭಾ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಬೂತ್ ಮಟ್ಟದಿಂದ ಪಕ್ಷವನ್ನ ಬಲ ಪಡಿಸಲು ಈಗಲೇ ತಂತ್ರ ಹೆಣೆಯುತ್ತಿದ್ದಾರೆ. ಬೆಣ್ಣೆ ನಗರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯ ಕಾರಿಣಿ ಸಭೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಲಿದ್ದಾರೆ.
ನಾಯಕರ ಪಾಠ..!
ನಾಳೆ ಮೊದಲ ದಿನ ನಗರದ ಅಪೂರ್ವಾ ರೇಸಾರ್ಟ್ ನಲ್ಲಿ ಬಿಜೆಪಿ ಪದಾದಿಕಾರಿಗಳ ಸಭೆ ನಡೆಯಲಿದ್ದು, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಇತರೆ ಸ್ಥಳೀಯ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷವನ್ನ ಬಲ ಪಡಿಸಲು ಬಿಜೆಪಿ ಪದಾದಿಕಾರಿಗಳಿಗೆ ಪಕ್ಷ ಸಂಘಟನೆಗೆ ಮಾಡುವ ಬಗ್ಗೆ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ, ನಳೀನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಾಠ ಮಾಡಲಿದ್ದಾರೆ.. ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನ ಜನರಿಗೆ ತಲೂಪಿಸುವಂತೆ ಪಕ್ಷದ 500 ಕ್ಕೂ ಅಧಿಕ ಪದಾದಿಕಾರಿಗಳಿಗೆ ಸೂಚನೆ ನೀಡಲಾಗುತ್ತೆ….
ನಾಯಕರ ದಂಡು..!
ಇನ್ನು ಎರಡನೇ ದಿನ ಅಂದರೆ 19 ರಂದು ತ್ರೀಶೂಲ್ ಕಲಾ ಭವನದಲ್ಲಿ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಜಿಲ್ಲೆಗೆ ರಾಜ್ಯ ಬಿಜೆಪಿ ನಾಯಕರ ದಂಡೆ ಹರಿದು ಬರಲಿದೆ. ರಾಜ್ಯ ನಾಯಕತ್ವ ಬದಲಾವಣೆ ನಂತರ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೊದಲ ಕಾರ್ಯಕಾರಣಿ ಇದಾಗಿದ್ದು, ಮಾಜಿ ಸಿಎಂ ಬಿಎಸ್ ವೈ, ಸಂಪುಟದ ಸಚಿವರುಗಳು, ಶಾಸಕರು, ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಶಿ, ಸಚಿವೆ ಶೋಭಾ ಕರಂದ್ಲಾಜೆ, ಸೇರಿ ಇತರ ಸಚಿವರು ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ ಕೂಡ ಭಾಗಿಯಾಗಲಿದ್ದಾರೆ.
2023 ರ ಚುನಾವಣೆಗೆ..!
ಮುಂಬರುವ ವಿಧಾನ ಸಭಾ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟು ಕೊಂಡು ಮತ್ತೊಮ್ಮೆ ರಾಜ್ಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಪಕ್ಷದ ಎಲ್ಲ ನಾಯಕರಿಗೂ ಸೂಚನೆ ನೀಡಲಾಗುತ್ತೆ. ಇನ್ನೂ ಸಿಎಂ ಬದಲಾವಣೆ ವಿಚಾರ, ಮತ್ತು ಸಚಿವ ಸ್ಥಾನ ಸಿಗದ ನಾಯಕರುಗಳು, ಖಾತೆ ಬಗ್ಗೆ ಅಸಮಾಧಾನ ಹೊಂದಿದ ನಾಯಕರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
71 ಕುಟುಂಬಗಳಿಂದ ಸ್ವಾಗತ..!
ಈಗಾಗಲೇ ಕಾರ್ಯಕಾರಿಣಿಗೆ ಜಿಲ್ಲಾ ಬಿಜೆಪಿ ನಾಯಕರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ನಗರದಾದ್ಯಂತ ಬಿಜೆಪಿ ಭಾವುಟಗಳು ನಾಯಕರ ಪ್ಲೆಕ್ಸ್ ಕಟೌಟ್ ಗಳು ರಾರಾಜಿಸುತ್ತಿವೆ… ಜೊತೆಗೆ ಪ್ರಧಾನಿ ಮೋದಿಯರ 71 ನೇ ಹುಟ್ಟುಹಬ್ಬದ ವಿಶೇಷವಾಗಿ 71 ಕುಟುಂಬಗಳ ಮೂಲಕ ರಾಜ್ಯ ಹಾಗೂ ರಾಷ್ಟ ನಾಯಕರಿಗೆ ಸ್ವಾಗತ ಕೋರಲಾಗುತ್ತೆ..
ಒಟ್ನಲ್ಲಿ, ಮುಂಬರುವ ಚುನಾವಣೆಗೆ ಬಿಜೆಪಿ ನಾಯಕರು ಈಗಲೇ ತಂತ್ರ ಹೆಣಿಯುತಿದ್ದು, ಜನರ ಮೇಲೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಕಾದು ನೋಡಬೇಕಿದೆ.