ಕಾರವಾರ: ನಿಫಾ ವೈರಸ್ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರದ ಯುವಕ ಸದ್ಯ ರಿಲೀಫ್ ಆಗಿದ್ದಾನೆ. ಯಾಕಂದ್ರೆ, ನಿಫಾ ಆತಂಕಿತ ಯುವಕನ ನಿಫಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಇದ್ರಿಂದ ನಿಫಾ ಆತಂಕಕ್ಕಿಡಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಕ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಂತ,
ದಕ್ಷಿಣಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ,
ಕಾರವಾರ ಮೂಲದ ಯುವಕನ ಬ್ಲಡ್, ಯುರಿನ್ ಮತ್ತು ಸ್ವಾಬ್ ಸ್ಯಾಂಪಲನ್ನು ಟೆಸ್ಟ್ ಗೆ ಕಳಿಸಿತ್ತು. ಗೋವಾದಲ್ಲಿ ನಿಫಾ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡ್ತಿದ್ದ ಯುವಕ, ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ಕಳೆದ ಶನಿವಾರ ಸಂಜೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಯುವಕ ದಾಖಲಾಗಿದ್ದ.
ಈ ಕಾರಣಕ್ಕಾಗಿ, ನಿಫಾ ಆತಂಕದಿಂದ ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಿದ್ದ ಆರೋಗ್ಯ ಇಲಾಖೆಗೆ, ಇಂದು ಪುಣೆಯ ಲ್ಯಾಬ್ ನಿಂದ ವರದಿ ಬಂದಿದ್ದಿ, ನೆಗೆಟಿವ್ ಅಂತಾ ದಾಖಲಾಗಿದೆ.