ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಮಂಗಳವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ನಗರದ ಹೊರವಲಯದ ಕುಕ್ಕಿಕಟ್ಟೆ ಎಂಬಲ್ಲಿ ಆಶಾ ಶೆಟ್ಟಿ (48) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಹಾಗೂ ತುಳು ಕೂಟ, ಭಜನಾ ಮಂಡಳಿ, ಚಂಡೆ ಬಳಗ ಇವುಗಳಲ್ಲಿ ಸಕ್ರಿಯವಾಗಿದ್ದರೆಂದು ತಿಳಿದು ಬಂದಿದೆ. ಮೃತಳ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಪತ್ರದಲ್ಲಿ ನೇತ್ರದಾನ ಮಾಡುವಂತೆ ಹಾಗೂ ಇನ್ನಿತರ ವಿಷಯಗಳು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಕಣ್ಣುಗಳನ್ನು ರಕ್ಷಿಸಿಡುವ ಪ್ರಕ್ರಿಯೆ ನಡೆಸಲು ಶವವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಮುಂಡಗೋಡಿಗೆ ಸಿಮಾನಿ ಎಸ್.ಎಸ್. ನೂತನ ಪೊಲೀಸ್ ಇನ್ಸ್ ಪೆಕ್ಟರ್..!
ಮುಂಡಗೋಡಿಗೆ ನೂತನ ಪಿಐ ಆಗಿ, ಸಿಮಾನಿ ಎಸ್.ಎಸ್. ಬರಲಿದ್ದಾರೆ. ಸದ್ಯ ವಿಜಯಪುರದ DCRE (Directorate of Civil Rights Enforcement) ನಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಮಾನಿ ಎಸ್.ಎಸ್. ರವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ, ಪ್ರಭುಗೌಡ ಕಿರೆದಳ್ಳಿ, ಡಿವೈಎಸ್ಪಿಯಾಗಿ ಬಡ್ತಿ ಹೊಂದಿ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಿದ್ದರು.
ಕಾತೂರಿನಲ್ಲಿ ಸರಳ ಗಣೇಶೋತ್ಸವ, ಸಂತೋಷ ಶೇಟ್ ರಾಯ್ಕರ್ ದಂಪತಿಯಿಂದ ವಿಶೇಷ ಪೂಜೆ..!
ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಗಣೇಶ ಚತುರ್ಥಿಯ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ದಂಪತಿಗಳು ಪೂಜಾ ಕಾರ್ಯಕ್ರಮ ನೆರವೇರಿಸಿದ್ರು. ಕಾತೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಟಾಪಿಸಲಾಗಿರೋ ಗಣೇಶ ಮೂರ್ತಿಗೆ ಸಂತೋಷ ರಾಯ್ಕರ್ ದಂಪತಿಗಳು ಇಂದು ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಗ್ರಾಮದ ಹಲವು ಮುಖಂಡರು ಭಾಗಿಯಾಗಿದ್ರು. ****************** ಜಾಹೀರಾತು
ಹುನಗುಂದದಲ್ಲಿ ಸರಳವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ..!
ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಿತು. ಕೋವಿಡ್ ಮಾರ್ಗಸೂಚಿಯ ಅನ್ವಯ ಸರಳವಾಗಿ ಆಚರಿಸಲಾದ ಗಣೇಶೋತ್ಸವಕ್ಕೆ, ಸರಳವಾದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ನಡೆಸಲಾಯಿತು. ಅದಕ್ಕೂ ಮೊದಲು, ಇಂದು ಗಣೇಶನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಜನಾ ಪದಗಳ ಮೂಲಕ ಗಣೇಶನಿಗೆ ಜಯ ಘೋಷಗಳನ್ನು ಕೂಗಿ ಭಕ್ತಿ ಸಮರ್ಪಿಸಲಾಯಿತು..
ಮುಂಡಗೋಡಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿಯ ಜಯಂತಿ ಕಾರ್ಯಕ್ರಮ..!
ಮುಂಡಗೋಡ: ಪಟ್ಟಣದಲ್ಲಿ ಇಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಪುರೋಹಿತರ ಬಳಗದಿಂದ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಬಸವಣ್ಣ ದೇವಸ್ಥಾನದಲ್ಲಿ ಸೇರಿದ್ದ ಪುರೋಹಿತರು ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಾರ್ಯಕರ್ತರು ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಿದ್ರು. ವೀರಭದ್ರೇಶ್ವರ ನಾಮಾವಳಿ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳ ಕುರಿತು ಚರ್ಚಿಸಿದ್ರು..
20 ಕೆಜಿ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ-ನಿರ್ದೇಶಕ ಶ್ರೀನಿ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದಾರಾಗಿದ್ದಾರೆ. 2018ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನಸೆಳೆದ ಕೆಲವು ದಿನಗಳ ನಂತರ ಎನ್ನುವ ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಶ್ರೀನಿ ಭರವಸೆಯ ಯುವ ನಿರ್ದೇಶಕ ಎನ್ನುವುದನ್ನು ಕೆಲವು ದಿನಗಳ ನಂತರ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ, ಕಣ್ಣಿಗೆ ಕಟ್ಟುವ ಕಥೆಯನ್ನು ಸೃಷ್ಟಿ ಮಾಡುವುದರಲ್ಲಿ ಶ್ರೀನಿ ಎತ್ತಿದ ಕೈ ಹೊಸ ಆಲೋಚನೆಯ ಜೊತೆಗೆ ಭಿನ್ನತೆಯನ್ನು ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಹಂಬಲ ಹೊತ್ತ ಭರವಸೆಯ ನಿರ್ದೇಶಕನ ಹೊಸ ಸಿನಿಮಾ ಅಂಬುಜದ ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ. ಶುಭಾಪುಂಜಾ ಅಂಬುಜ ಚಿತ್ರದಲ್ಲಿ ಒಂದು ವಿಶೇಷ ಗೆಟಪ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲ್ಕಿದ್ದಾರೆ ಹಾಗೂ ಇವರ ಜೊತೆಗೆ ಪದ್ಮಜಾರಾವ್, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿಕಿಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಅಜ್ರಿ, ಮಜಾಭಾರತದ...
ಅಗಡಿಯಲ್ಲಿ ತಮ್ಮ ನೆಚ್ಚಿನ ಹೋರಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾಮಸ್ಥರು..!
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರೋ ಹೋರಿಗೆ ಹುಟ್ಟು ಹಬ್ಬ ಆಚರಿಸಿದ್ರು. ಗ್ರಾಮಸ್ಥರೇಲ್ಲರೂ ಸೇರಿ ರಾಜಾ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಿ, ತಳೀರು ತೋರಣ ಕಟ್ಟಿ, ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದ್ರು. ಅಲ್ಲದೇ ಗ್ರಾಮಸ್ಥರು ತಮ್ಮನೆಚ್ಚಿನ ಹೋರಿಗೆ ವಿಶೇಷ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಮಹಿಳೆಯರು ಆರತಿ ಬೆಳಗಿದರು, ಜಯಘೋಷಗಳೊಂದಿಗೆ ಕುಣಿದು ಕುಪ್ಪಳಿಸಿದ್ರು.
ತೈಲ ಬೆಲೆ ಇಳಿಸುವಂತೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ, ಮನವಿ ಸಲ್ಲಿಕೆ..!
ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಇಂದು, ಗ್ಯಾಸ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಂತೆ ಮುಂಡಗೋಡ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಣ್ಣಪ್ಪ ಗೌಡ್ರು, ಮಾಜಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಾರದಾ ಬಾಯಿ ರಾಠೋಡ್, ಧರ್ಮರಾಜ ನಡಗೇರಿ, ಎಂ. ಎನ್. ದುಂಡಸಿ, ಅಲಿ ಹಸನ್ ಬೆಂಡಿಗೇರಿ, ಮಲ್ಲಿಕಾರ್ಜುನ್ ಗೌಳಿ, ಜೈನು ಬೆಂಡಿಗೇರಿ, ಅಲ್ಲಾಉದ್ದೀನ್ ಕಮಡೊಳ್ಳಿ,ಪ್ರಶಾಂತ್ ಭದ್ರಾಪುರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ..!
ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್ ನಿಧನರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದು, ಜುಲೈ 18ರಂದು ಮನೆಯಲ್ಲಿ ಯೋಗ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿದ್ದ ಆಸ್ಕರ್ ಫರ್ನಾಂಡೀಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ವೇಳೆ ಮೆದುಳುಗೆ ಏಟು ಬಿದ್ದರೋದು ಬೆಳಕಿಗೆ ಬಂದಿತ್ತು, ಹೀಗಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಪರ್ನಾಂಡೀಸ್ ವಿಧಿವಶರಾಗಿದ್ದಾರೆ. 1941ಮಾರ್ಚ್ 27ರಂದು ಉಡುಪಿಯಲ್ಲಿ ಜನಿಸಿದ್ದ ಆಸ್ಕರ್, 1980ರಲ್ಲಿ ಮೊದಲ ಬಾರಿ ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡೀಸ್, ಕೇಂದ್ರ ಸಾರಿಗೆ, ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸೋನಿಯಾ ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಷ್ಟ್ರ ಹಾಗೂ ರಾಜ್ಯದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಂಗಳೂರು ಮಹಿಳೆಯ ದರೋಡೆ ಯತ್ನ ಕೇಸ್ ಅಸಲೀ ಅಲ್ಲ ಕಣ್ರಿ..! ಹಾಗಾದ್ರೆ ಏನದು..?
ಮಂಗಳೂರಿನಲ್ಲಿ ಮಹಿಳೆಯ ದರೋಡೆಗೆ ಯತ್ನ ಪ್ರಕರಣ ಅಸಲೀ ಅಲ್ಲ ಬದಲಾಗಿ ಮಂಗಳೂರು ಪೊಲೀಸರು ನಡೆಸಿದ ಅಣಕು ಪ್ರದರ್ಶನವಂತೆ. ಹಾಗಂತ, ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ. ಇದು ನಿಜವಾದ ಘಟನೆ ಅಲ್ಲ, ಪೊಲೀಸ್ ಇಲಾಖೆಯಿಂದ ಮಾಡಲಾದ ಅಣಕು ಕಾರ್ಯಾಚರಣೆಯಂತೆ. ಇಂತಹ ಘಟನೆ ಆದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ..? ಪೊಲೀಸರು ಎಷ್ಟು ಬೇಗ ಸ್ಪಂಧಿಸುತ್ತಾರೆ..? ಈ ಎಲ್ಲದರ ಬಗ್ಗೆ ತಿಳಿದುಕೊಳ್ಳಲು ಮಾಡಲಾದ ಅಣಕು ಕಾರ್ಯಾಚರಣೆಯಾಗಿತ್ತು ಅಂತಾ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಇತ್ತಿಚೆಗೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಇದರ ಬಗ್ಗೆ ಜನರಿಗೆ ಅರಿವು ಬರಬೇಕು. ದಾಳಿಗೊಳಗಾದ ಸಂತ್ರಸ್ಥರು ದೈರ್ಯವಾಗಿ ಎದುರಿಸಬೇಕು. ಪೊಲೀಸರೂ ಕೂಡ ತಕ್ಷಣ ಪ್ರತಿಕ್ರಿಯಿಸಬೇಕು. ಈ ಎಲ್ಲಾ ಉದ್ದೇಶದಿಂದ ಆ ಅಣುಕು ಪ್ರದರ್ಶನ ಮಾಡಲಾಗಿದೆ ಅಂತಾ ಕಮೀಶನರ್ ತಿಳಿಸಿದ್ದಾರೆ. ಅಂದಹಾಗೆ, ಆ ದೃಶ್ಯದಲ್ಲಿರೋ ಮಹಿಳೆ ಸೌರಕ್ಷಾ ವುಮೆನ್ ಟ್ರಸ್ಟ್ ನ ಶೋಭಲತಾ ಕಟೀಲ್ ಎನ್ನುವವರಾಗಿದ್ದಾರೆ. **************** ಜಾಹೀರಾತು