ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಇಂದು, ಗ್ಯಾಸ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಂತೆ ಮುಂಡಗೋಡ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಣ್ಣಪ್ಪ ಗೌಡ್ರು, ಮಾಜಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಾರದಾ ಬಾಯಿ ರಾಠೋಡ್, ಧರ್ಮರಾಜ ನಡಗೇರಿ, ಎಂ. ಎನ್. ದುಂಡಸಿ, ಅಲಿ ಹಸನ್ ಬೆಂಡಿಗೇರಿ, ಮಲ್ಲಿಕಾರ್ಜುನ್ ಗೌಳಿ, ಜೈನು ಬೆಂಡಿಗೇರಿ, ಅಲ್ಲಾಉದ್ದೀನ್ ಕಮಡೊಳ್ಳಿ,ಪ್ರಶಾಂತ್ ಭದ್ರಾಪುರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.