ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದಾರಾಗಿದ್ದಾರೆ.
2018ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನಸೆಳೆದ ಕೆಲವು ದಿನಗಳ ನಂತರ ಎನ್ನುವ ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಶ್ರೀನಿ ಭರವಸೆಯ ಯುವ ನಿರ್ದೇಶಕ ಎನ್ನುವುದನ್ನು ಕೆಲವು ದಿನಗಳ ನಂತರ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ, ಕಣ್ಣಿಗೆ ಕಟ್ಟುವ ಕಥೆಯನ್ನು ಸೃಷ್ಟಿ ಮಾಡುವುದರಲ್ಲಿ ಶ್ರೀನಿ ಎತ್ತಿದ ಕೈ ಹೊಸ ಆಲೋಚನೆಯ ಜೊತೆಗೆ ಭಿನ್ನತೆಯನ್ನು ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಹಂಬಲ ಹೊತ್ತ ಭರವಸೆಯ ನಿರ್ದೇಶಕನ ಹೊಸ ಸಿನಿಮಾ ಅಂಬುಜದ ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ.
ಶುಭಾಪುಂಜಾ ಅಂಬುಜ ಚಿತ್ರದಲ್ಲಿ ಒಂದು ವಿಶೇಷ ಗೆಟಪ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲ್ಕಿದ್ದಾರೆ ಹಾಗೂ ಇವರ ಜೊತೆಗೆ ಪದ್ಮಜಾರಾವ್, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿಕಿಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಅಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಹಾಗೂ ಇನ್ನಿತರರು ಅಭಿನಯಿಸಿ ಚಿತ್ರದ ಮೇರಗು ಇನಷ್ಟು ಹೆಚ್ಚಿಸುತ್ತಿದ್ದಾರೆ.
ಅಂಬುಜ ಸಿನಿಮಾದ ಕಥೆ ಏನು ಹೇಳುತ್ತದೆ !?
ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ. ಹಾಗೂ ಅವರು ಅನುಭವಿಸುವ ತೊಂದರೆಗಳೇನು…? ಅವರ ಅಸಹಾಯಕತೆಯನ್ನ ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜ್ಞಾನ-ವಿಜ್ಞಾನ-ಅಜ್ಙಾನಗಳ ಒಟ್ಟು ಚಿತ್ರಣವೇ *ಅಂಬುಜ* ಸಿನಿಮಾದ ಹೈಲೆಟ್ಸ್ ಆಗಿದೆ ಹಾಗೂ *ಅಂಬುಜ* ಒಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದೆ ಮತ್ತು ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ರಡಿಮಾಡಲು ಚಿತ್ರತಂಡ ನಾಲ್ಕು ತಿಂಗಳುಗಳು ತೆಗೆದುಕೊಂಡಿದೆ ಹಾಗೂ ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4ತಿಂಗಳು ಇದನ್ನು ತಯಾರು ಮಾಡಲು ಸಮಯ ನೀಡಿದ್ದೇವೆ ಎಂದು ನಿರ್ದೇಶಕ ಶ್ರೀನಿ ಮತ್ತು ನಿರ್ಮಾಪಕ ಕಾಶೀನಾಥ್ ಮಡಿವಾಳರ್ ಹೇಳಿದರು.
ಲಂಬಾಣಿ ವಸ್ತ್ರಾಲಂಕಾರದ ತೂಕ ಬರೋಬ್ಬರಿ – 20KG.ಯಿದೆ ಇದನ್ನು ಇಡೀ ಸಿನಿಮಾದಲ್ಲಿ ಶುಭಾಪುಂಜಾ ಹಾಕಿಕೊಂಡು ಚಿತ್ರೀಕರಣ ಮಾಡುವುದೇ ದೊಡ್ಡ ಸಾಹಸ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದೀಗ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಶುರು ಮಾಡಲಿದೆ ಚಿತ್ರತಂಡ ಹಾಗೂ ಚಿತ್ರದ ಚಿತ್ರೀಕರಣ ಬೆಂಗಳೂರು, ಗದಗ, ಹಾಗೂ ಚಿಕ್ಕ ಮಂಗಳೂರು ಉಡುಪಿ ,ಕುಂದಾಪುರ ಭಾಗಗಳಲ್ಲಿ ನಡೆಯಲಿದೆಯಂತೆ ಈ ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ರವರು ಕಥೆಯನ್ನು ಬರೆದು, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ
ಸಾಮಾಜಿಕ ಕಳ-ಕಳಿಯ ಚಿತ್ರ ನಿರ್ದೇಶಿಸಿದ್ದ ಶ್ರೀನಿ ಹನುಮಂತರಾಜು ಚಿತ್ರಕಥೆ-ನಿರ್ದೇಶನ ಮಾಡಲಿದ್ದು ಹೊಸ ಭರವಸೆ ಸೃಷ್ಟಿಸಲು ಹೋರಟಿದ್ದಾರೆ.
ಮುರಳೀಧರ್ ಕ್ಯಾಮೆರಾ ವರ್ಕ್ ಹಾಗೂ ಸಂಗೀತವನ್ನು ಪ್ರಸನ್ನ ಕುಮಾರ್ ಹಾಗೂ ಹಿನ್ನೆಲೆ ಸಂಗೀತವನ್ನು ಎಂ.ಎಸ್ ತ್ಯಾಗರಾಜರವರು ಮಾಡಲಿದ್ದು ಚಿತ್ರ ಮುಂದಿನ ತಿಂಗಳು ಚಿತ್ರೀಕರಣಕ್ಕೆ ಹೋಗಲು ಸಕಲ ಸಿದ್ಧತೆ ಮಾಡಿಕೊಂಡಿದೆ.