ಮಂಗಳೂರಿನಲ್ಲಿ ಮಹಿಳೆಯ ದರೋಡೆಗೆ ಯತ್ನ ಪ್ರಕರಣ ಅಸಲೀ ಅಲ್ಲ ಬದಲಾಗಿ ಮಂಗಳೂರು ಪೊಲೀಸರು ನಡೆಸಿದ ಅಣಕು ಪ್ರದರ್ಶನವಂತೆ‌. ಹಾಗಂತ, ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.

ಇದು ನಿಜವಾದ ಘಟನೆ ಅಲ್ಲ‌, ಪೊಲೀಸ್ ಇಲಾಖೆಯಿಂದ ಮಾಡಲಾದ ಅಣಕು ಕಾರ್ಯಾಚರಣೆಯಂತೆ. ಇಂತಹ ಘಟನೆ ಆದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ..?
ಪೊಲೀಸರು ಎಷ್ಟು ಬೇಗ ಸ್ಪಂಧಿಸುತ್ತಾರೆ..?
ಈ ಎಲ್ಲದರ ಬಗ್ಗೆ ತಿಳಿದುಕೊಳ್ಳಲು ಮಾಡಲಾದ ಅಣಕು ಕಾರ್ಯಾಚರಣೆಯಾಗಿತ್ತು ಅಂತಾ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಇತ್ತಿಚೆಗೆ ಇಂತಹ ಪ್ರಕರಣಗಳು ನಡೆಯುತ್ತಿವೆ‌. ಇದರ ಬಗ್ಗೆ ಜನರಿಗೆ ಅರಿವು ಬರಬೇಕು. ದಾಳಿಗೊಳಗಾದ ಸಂತ್ರಸ್ಥರು ದೈರ್ಯವಾಗಿ ಎದುರಿಸಬೇಕು. ಪೊಲೀಸರೂ ಕೂಡ ತಕ್ಷಣ ಪ್ರತಿಕ್ರಿಯಿಸಬೇಕು. ಈ ಎಲ್ಲಾ ಉದ್ದೇಶದಿಂದ ಆ ಅಣುಕು ಪ್ರದರ್ಶನ ಮಾಡಲಾಗಿದೆ ಅಂತಾ ಕಮೀಶನರ್ ತಿಳಿಸಿದ್ದಾರೆ.

ಅಂದಹಾಗೆ, ಆ ದೃಶ್ಯದಲ್ಲಿರೋ ಮಹಿಳೆ ಸೌರಕ್ಷಾ ವುಮೆನ್ ಟ್ರಸ್ಟ್ ನ ಶೋಭಲತಾ ಕಟೀಲ್ ಎನ್ನುವವರಾಗಿದ್ದಾರೆ.

****************

ಜಾಹೀರಾತು

error: Content is protected !!