ಶಿರಸಿ: ಸಿನಿಮೀಯ ರೀತಿಯಲ್ಲಿ ಚಿನ್ನದ ಸರ ಅಪಹರಣ ಮಾಡಿದ ಘಟನೆ, ಶಿರಸಿಯ ರತ್ನದೀಪ ಜ್ಯುವೆಲರ್ಸ್ ನಲ್ಲಿ ನಡೆದಿದೆ.

ಚಿನ್ನದ ಸರ ಖರೀದಿಯ ನೆಪದಲ್ಲಿ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿ, ಚಿನ್ನದ ಸರ ತೋರಿಸುವಂತೆ ಕೇಳಿದ್ದಾನೆ. ಅಂಗಡಿಯಾತ ಚಿನ್ನದ ಸರ ತೋರಿಸುತ್ತಿದ್ದಾಗಲೇ ಸರ ಕಸಿದುಕೊಂಡ ಕಳ್ಳ ಕಾಲ್ಕಿತ್ತಿದ್ದಾನೆ. ಚಿನ್ನದ ಸರದೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಕಳ್ಳನ ಸಂಪೂರ್ಣ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಚಾಲಾಕಿ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

error: Content is protected !!