ಮುಂಡಗೋಡ: ತಾಲೂಕಿನ ಅಗಡಿ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ, ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಆದ್ರೆ, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್, ರಸ್ತೆಗಳ ಗುಂಡಿಗಳಲ್ಲಿ ನಿಯಂತ್ರಣ ತಪ್ಪಿ ಬಿದ್ದಿತ್ತು ಎನ್ನಲಾಗಿದೆ. ಹೀಗಾಗಿ, ರಸ್ತೆಗಳ ಅವ್ಯವಸ್ಥೆಗೆ ಜನರು ಹಿಡಿಶಾಪ ಹಾಕುವಂತಾಗಿದೆ. ಅಂದಹಾಗೆ, ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಕಬ್ಬು ಸಾಗಿಸುತ್ತಿವೆ. ಈ ವೇಳೆ ರಸ್ತೆಗಳ ಗುಂಡಿಗಳಿಂದ ಇನ್ನಿಲ್ಲದ ಕಿರಿಕಿರಿಯಾಗುತ್ತಿದೆ. ಸಂಬಂದಪಟ್ಟ ಇಲಾಖೆ ಈ ಕಡೆ ಸ್ವಲ್ಪ ಗಮನ ಹರಿಸಲಿ ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.
Top Stories
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಪ್ರಶಸ್ತಿ
ಉತ್ತರ ಕನ್ನಡದಲ್ಲಿ ಮೇ.5 ರಿಂದ ಪ.ಜಾತಿ ಸಮುದಾಯದ ಸಮೀಕ್ಷೆ : ಜಿಲ್ಲಾಧಿಕಾರಿ
ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು..!
ಮುಂಡಗೋಡ ತಾಲೂಕಿಗೆ 65.3% ರಷ್ಟು SSLC ಫಲಿತಾಂಶ, ಮಳಗಿ ಪ್ರೌಢಶಾಲೆಯ ಭಾಗ್ಯಶ್ರೀ ಗೆ ಅತಿ ಹೆಚ್ಚು ಅಂಕ..!
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ಮುಂಡಗೋಡ ತಾಲೂಕಿನ 79 ಶಾಲೆಗಳ ಸ್ಥಿತಿ ಚಿಂತಾಜನಕ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಪಾಲಕರಿಗೆ ಭಾರೀ ಆತಂಕ..!
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಮುಂಡಗೋಡ ಪೊಲೀಸರ ಗಟ್ಟಿ ಕಾರ್ಯಾಚರಣೆ, ಗೋಹತ್ಯೆ ಕೇಸಿನಲ್ಲಿ ಓರ್ವ ಆರೋಪಿ ಅರೆಸ್ಟ್, ಮತ್ತೋರ್ವ ಪರಾರಿ..!
ಮುಂಡಗೋಡ ಕರಗಿನಕೊಪ್ಪ ಬಳಿ ಬೈಕ್ ಅಪಘಾತ, ಮೂಡಸಾಲಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಗೋಹತ್ಯೆಗೆ ಖಂಡನೆ, ಹಿಂದು ಕಾರ್ಯಕರ್ತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ..!
ಮುಂಡಗೋಡಿನಲ್ಲೂ ಮಾಂಸಕ್ಕಾಗಿ ಆಕಳ ಹತ್ಯೆ..! ಪೊಲೀಸರ ದಾಳಿ..! ಸಿಕ್ಕಿದ್ದೇನು..?
ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?
ಭಾರೀ ಮಳೆ ಗಾಳಿಗೆ ಇಂದೂರು ಕೊಪ್ಪ ಗ್ರಾಮದಲ್ಲಿ, ಮನೆಯ ಮೇಲ್ಚಾವಣಿ ಹಾನಿ, ಗೋವಿನಜೋಳ ರಾಶಿ ನೀರಲ್ಲಿ
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ, ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ..!
ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!
ಮುಂಡಗೋಡ : ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ದಂಪತಿಗಳು ಮೃತಪಟ್ಟ ಅಹಿತಕರ ಘಟನೆ ಸಂಭವಿಸಿದ್ದು. ಘಟನೆ ಬಗ್ಗೆ ತಿಳಿದ ತಕ್ಷಣ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ಉಮೇಶ್ ಬಿಜಾಪುರ, ಕೆ.ಸಿ.ಗಲಭಿ, ಸಂಜೀವ್ ಪೀಶೆ ಹಾಗೂ ಪ್ರಮುಖರು ಹಾಜರಿದ್ದರು.
ಮುಂಡಗೋಡ ಅಮ್ಮಾಜಿ ಕೆರೆಯಲ್ಲಿ ಕಾರು ದುರಂತ, ವಿಧಿಯಾಟಕ್ಕೆ ಬಲಿಯಾದವರು ಅರಶಿಣಗೇರಿ ದಂಪತಿಗಳು..!
ಮುಂಡಗೋಡ: ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ದಂಪತಿಗಳಿಬ್ಬರೂ ದಾರುಣ ಸಾವು ಕಂಡಿದ್ದಾರೆ. ನಸುಕಿನ ಜಾವ ಸಂಭವಿಸಿರಬಹುದಾದ ಘಟನೆ ಅಂತಾ ಹೇಳಲಾಗ್ತಿರೋ ಅಪಘಾತ ನಡೆದಿರೊದೇ ವಿಚಿತ್ರ. ಅಷ್ಟಕ್ಕೂ ಈ ಸಾವು ಅನ್ನೋದು ಇಷ್ಟು ಸಲೀಸಾ ಅನ್ನೋದೇ ಬಹುದೊಡ್ಡ ವಾಸ್ತವ..! ಮೃತರು ದಂಪತಿಗಳು..! ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ಸ್ವಿಪ್ಟ್ ಕಾರು ಇದಾಗಿದ್ದು, ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿಯವರಾದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ. ಕರವಳ್ಳಿಯಲ್ಲಿ ಸಂಬಂಧಿಯೊಬ್ಬರು ಅಸು ನೀಗಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ ಬೆಂಗಳೂರಿನಿಂದ ಕರವಳ್ಳಿಗೆ ಬರುತ್ತಿದ್ದರು ಎನ್ನಲಾಗಿದೆ. ಆದ್ರೆ ದಾರಿಮದ್ಯೆ ಇಂತಹದ್ದೊಂದು ದುರಂತ ಸಂಭವಿಸಿದೆ. ಇದು ವಿಚಿತ್ರ ಅಲ್ವಾ..? ಹಾಗೆ ನೋಡಿದ್ರೆ, ಅಮ್ಮಾಜಿ ಕೆರೆಯಲ್ಲಿ ಕಾರು ಬಿದ್ದ ಜಾಗ ನೋಡಿದಾಗ ವಿಚಿತ್ರ ಅನಿಸ್ತಿದೆ. ಕಾರು ಬಿದ್ದ ಜಾಗದಲ್ಲಿ ಅಬ್ಬಬ್ಬಾ ಅಂದ್ರೆ ನಾಲ್ಕು ಅಡಿಯಷ್ಟು ನೀರಿನ ಆಳವಿದೆ. ಹೀಗಾಗಿ ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗೇ ಇಲ್ಲ. ಹೀಗಿದ್ದಾಗ್ಯೂ ಏಕಾ ಏಕಿ ಸಾವು ಸಂಭವಿಸುವಷ್ಟು ಘನಘೋರವಂತೂ ಅಲ್ಲವೇ ಅಲ್ಲ....
ಮುಂಡಗೋಡ ಬಳಿ ಭಾರೀ ಅಪಘಾತ, ಕೆರೆಯಲ್ಲಿ ಮುಳಗಿದ ಕಾರು, ಓರ್ವನ ಶವ ಪತ್ತೆ, ಹಲವರು ಸಿಲುಕಿರೋ ಶಂಕೆ..!
ಮುಂಡಗೋಡ ಪಟ್ಟಣದ ಹೊರವಲಯದ ಯಲ್ಲಾಪುರ ರಸ್ತೆಯ ಕೆರೆಯಲ್ಲಿ ಭಾರೀ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಕೆರೆಗೆ ನುಗ್ಗಿ, ಕಾರು ಸಂಪೂರ್ಣ ಮುಳಗಡೆಯಾಗಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು ಶವ ಕೆರೆಯಲ್ಲಿ ತೇಲಾಡುತ್ತಿತ್ತು, ಶವ ಹೊರ ತೆಗೆಯಲಾಗಿದೆ. ಇನ್ನು ಕಾರಲ್ಲಿ ಹಲವರು ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗಿದೆ. ಮೃತರು ಎಲ್ಲಿಯವರು, ಯಾವಾಗ ಘಟನೆ ಆಯ್ತು, ತಿಲಕಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, 108 ಅಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಶವ ಹೊರತೆಗೆಯುವ ಕಾರ್ಯ ಮಾಡಿದ್ದಾರೆ.
ನಂದಿಕಟ್ಟಾದ ತೋಟದ ಮನೆಯಲ್ಲಿ ಹೆಣವಾಗಿ ಬಿದ್ದ ಮಾಲೀಕ, ಸಾವಿನ ಸುತ್ತ ಹಲವು ಅನುಮಾನ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ತೋಟದ ಮನೆಯಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. ನಂದಿಕಟ್ಟಾ ಗ್ರಾಮದ ಬಾಬು ನವಲೆನವರ್ ಎಂಬ ವ್ಯಕ್ತಿಯು ಅವರ ತೋಟದ ಮನೆಯಲ್ಲಿಯೇ ಹೆಣವಾಗಿ ಬಿದ್ದಿದ್ದಾನೆ. ಶನಿವಾರ ರಾತ್ರಿಯೇ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಮೃತನ ಬಾಯಲ್ಲಿ ರಕ್ತ ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಧ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆಯ ನಂತರವಷ್ಟೇ ಅಸಲಿ ಸಂಗತಿ ಹೊರಬರುವ ಸಾಧ್ಯತೆ ಇದೆ.
ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?
ಮುಂಡಗೋಡ ತಾಲೂಕಿನಲ್ಲಿ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಗೋಳು ಕೇಳೋರೇ ಇಲ್ವಾ..? ಪ್ರತಿನಿತ್ಯವೂ ಶಾಲಾ ಕಾಲೇಜಿಗೆ ಹೋಗಲು ಬಸ್ ಗಳಿಲ್ಲದೇ ಪರದಾಡುವಂತಾಗಿದೆ. ಹೀಗಾಗಿನೇ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಪಾಲಕರ ಆಕ್ರೋಶದ ಕಟ್ಟೆ ಒಡೆದಿದೆ. ಇಂದೂರಿನಲ್ಲಿ ಪ್ರತಿಭಟನೆ..! ಈ ಕಾರಣಕ್ಕಾಗೇ, ಇಂದೂರಿನಲ್ಲಿ ಇಂದು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ್ರು. ಇಂದೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಕೈಗೊಂಡ ವಿದ್ಯಾರ್ಥಿಗಳಿಗೆ ಪಾಲಕರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ರು. ಪ್ರತಿನಿತ್ಯ ಕಾಲೇಜಿಗೆ ಹೋಗಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲ, ಕೆಲವು ಬಸ್ ಗಳಿವೆ ಆದ್ರೆ ಅವುಗಳು ಎಲ್ಲೇಂದರಲ್ಲಿ ಕೆಟ್ಟು ನಿಲ್ಲುತ್ತವೆ. ಹೀಗಾಗಿ, ನಮಗೆ ಕಾಲೇಜಿಗೆ ಹೋಗಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ಇದು ನಿಜಕ್ಕೂ ನಾಚಿಗ್ಗೇಡಿನ ಸಂಗತಿ, ವಾಯುವ್ಯ ಕರ್ನಾಟಕ ಸಾರಿಗೆ...
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್..!
ಶಿವಮೊಗ್ಗ: ಚಲಿಸುವ ರೈಲಿನಿಂದ ಏಕಾಏಕಿ ಕೆಳಗೆ ಬಿದ್ದ ಮಹಿಳೆಯೋರ್ವಳು ಅದೃಷ್ಟವಶಾತ್ ಬಚಾವ್ ಆಗಿದ್ದಾಳೆ. ಶಿವಮೊಗ್ಗದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಳ್ಳಂ ಬೆಳಿಗ್ಗೆ 7 ಗಂಟೆಗೆ ತಾಳಗುಪ್ಪ- ಬೆಂಗಳೂರು ಇಂಟರ್ ಸಿಟಿ ರೈಲು ಹೊರಡುವಾಗ, ಕುಟುಂಬದವರನ್ನು ಕಳಿಸಲು ಬಂದಿದ್ದ ಮಹಿಳೆ, ರೈಲು ಹೊರಟ ನಂತರ ಇಳಿಯಲು ಯತ್ನಿಸಿದ್ದಾಳೆ.ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ರೇಲ್ವೇ ಪೊಲೀಸ್ ಸಮಯಪ್ರಜ್ಞೆ ತೋರಿದ್ದಾರೆ. ಹೀಗಾಗಿ, ಆ ಮಹಿಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೇಲ್ಲ ದೃಷ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!
ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ವಿಜೇತ ಹೋರಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ವಿಜೇತ ಹೋರಿಗಳಿಗೆ ಬಹುಮಾನ ನೀಡಿದ್ರು.. ಅತ್ಯುತ್ತಮ ಹಿಡಿತಗಾರರಿಗೂ ಬಹುಮಾನ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಹಬ್ಬದ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಗೃಹೋಪಯೋಗಿ ವಸ್ತುಗಳ ಆಕರ್ಶಕ ಬಹುಮಾನ ನೀಡಲಾಯಿತು.. ಈ ವೇಳೆ ಅಣ್ಣಪ್ಪ ಸಾವಿಕೇರಿ, ಲಕ್ಷ್ಮಣ ಗಡಕನಳ್ಳಿ, ಮಂಜು ಭೋವಿ, ಜಮೀರ್ ಶೇಖ್, ಮುಖೇಶ್ ತಳವಾರ್, ಗಣೇಶ್ ಕೋಡಿಹಳ್ಳಿ, ಪ್ರಶಾಂತ್ ದೋರಳ್ಳಿ, ಕೃಷ್ಣ ಕೋಡಿಕೊಪ್ಪ, ವಿನಾಯಕ್ ಶೆಟ್ಟಿ, ಅಣ್ಣಪ್ಪ ನಾಯ್ಕ್, ಪ್ರಜ್ವಲ್ ಮಳಗಿ, ಸುಭಾಷ್ ಮಳಗಿ, ವಡಕಪ್ಪ ಮಳಗಿ, ಅಣ್ಣಪ್ಪ ನಾಟೀನ್, ಪರಶುರಾಮ್ ದಾಸರ ಸೇರಿ ಹಲವರು ಹಾಜರಿದ್ದರು..
ಮಣ್ಣು ತೆಗೆಯುತ್ತಿದ್ದ ವೇಳೆ ಕುಸಿದ ಗುಡ್ಡ ವ್ಯಕ್ತಿ ಸಾವು..!
ಗೋಕರ್ಣ: ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡ ಕುಸಿದು ವ್ಯಕ್ತಿಯೋರ್ವ ಸಾವನ್ನಪ್ಪಿರೊ ಘಟನೆ, ಗೋಕರ್ಣದ ಚೌಡಗೇರಿಯಲ್ಲಿ ನಡೆದಿದೆ. ಜೆಸಿಬಿ ಬಳಸಿ ಮಣ್ಣು ತೆಗೆಯುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, ಅಂಕೋಲಾ ಶಿಳ್ಯಾದ ಮೋಹನ್ದಾಸ್ ಹಮ್ಮಣ್ಣ ನಾಯಕ (56) ಮೃತ ವ್ಯಕ್ತಿಯಾಗಿದ್ದಾನೆ. ಖಾಸಗಿ ಜಾಗದಲ್ಲಿ ಗುಡ್ಡ ಭಾಗದ ಮಣ್ಣು ತೆಗೆಯುವ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಕೊಂಡಿದ್ದ ಮೋಹನ್ದಾಸ್, ಮಣ್ಣು ತೆಗೆಯುವ ಸ್ಥಳದಲ್ಲಿ ಸೂಪರ್ವೈಸಿಂಗ್ ಮಾಡುತ್ತಾ ಕೆಲಸ ಮಾಡಿಸುತ್ತಿದ್ದ. ಜೆಸಿಬಿಯಿಂದ ಎಡಭಾಗದಲ್ಲಿ ಮಣ್ಣು ತೆಗೆಸುತ್ತಿದ್ದ ವೇಳೆ ಬಲಭಾಗದಿಂದ ಗುಡ್ಡಕುಸಿತವಾಗಿ ಸಾವು. ಖಾಸಗಿ ಜಾಗದ ಮಾಲೀಕನ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..
ಚಿಗಳ್ಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 14 ಜನರ ಮೇಲೆ ಕೇಸ್..!
ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀ ಕಲ್ಮೇಶ್ವರ ಮಠದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ, 14 ಜನರ ಮೇಲೆ ಕೇಸು ದಾಖಲಿಸಿದ ಘಟನೆ ನಡೆದಿದೆ. ಇನ್ನು ದಾಳಿ ವೇಳೆ ಅಂದರ್ ಬಾಹರ್ ಆಟದಲ್ಲಿ ಬಳಸಿದ್ದ ನಗದು 3,500 ರೂಪಾಯಿ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 4 ಜನ ಆರೋಪಿಗಳು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಇನ್ನುಳಿದವರು ಪರಾರಿಯಾಗಿದ್ದಾರೆ. ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಡಗೋಡಿನ ಕಂಬಾರಗಟ್ಟಿ ಪ್ಲಾಟ್ ಬಳಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ..! ಮುಂಡಗೋಡ: ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಐವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರಮೇಶ ಹನುಮಂತಪ್ಪ ಸುಣಗಾರ, ಮಹೇಶ ಪರಶುರಾಮ ಸೋರಗಿ, ಗಂಗಾಧರ ರಾಮಚಂದ್ರ ಕಲಾಲ್, ರಾಮು...