ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್..!

ಶಿವಮೊಗ್ಗ: ಚಲಿಸುವ ರೈಲಿನಿಂದ ಏಕಾಏಕಿ ಕೆಳಗೆ ಬಿದ್ದ ಮಹಿಳೆಯೋರ್ವಳು ಅದೃಷ್ಟವಶಾತ್ ಬಚಾವ್ ಆಗಿದ್ದಾಳೆ.
ಶಿವಮೊಗ್ಗದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಬೆಳ್ಳಂ ಬೆಳಿಗ್ಗೆ 7 ಗಂಟೆಗೆ ತಾಳಗುಪ್ಪ- ಬೆಂಗಳೂರು ಇಂಟರ್ ಸಿಟಿ ರೈಲು ಹೊರಡುವಾಗ, ಕುಟುಂಬದವರನ್ನು ಕಳಿಸಲು ಬಂದಿದ್ದ ಮಹಿಳೆ, ರೈಲು ಹೊರಟ ನಂತರ ಇಳಿಯಲು ಯತ್ನಿಸಿದ್ದಾಳೆ.ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ.

ಇದೇ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ರೇಲ್ವೇ ಪೊಲೀಸ್ ಸಮಯಪ್ರಜ್ಞೆ ತೋರಿದ್ದಾರೆ‌. ಹೀಗಾಗಿ, ಆ ಮಹಿಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೇಲ್ಲ ದೃಷ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

error: Content is protected !!