ಮಣ್ಣು ತೆಗೆಯುತ್ತಿದ್ದ ವೇಳೆ ಕುಸಿದ ಗುಡ್ಡ ವ್ಯಕ್ತಿ ಸಾವು..!

ಗೋಕರ್ಣ: ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡ ಕುಸಿದು ವ್ಯಕ್ತಿಯೋರ್ವ ಸಾವನ್ನಪ್ಪಿರೊ ಘಟನೆ, ಗೋಕರ್ಣದ ಚೌಡಗೇರಿಯಲ್ಲಿ ನಡೆದಿದೆ. ಜೆಸಿಬಿ ಬಳಸಿ ಮಣ್ಣು ತೆಗೆಯುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, ಅಂಕೋಲಾ ಶಿಳ್ಯಾದ ಮೋಹನ್‌ದಾಸ್ ಹಮ್ಮಣ್ಣ ನಾಯಕ (56) ಮೃತ ವ್ಯಕ್ತಿಯಾಗಿದ್ದಾನೆ.

ಖಾಸಗಿ ಜಾಗದಲ್ಲಿ ಗುಡ್ಡ ಭಾಗದ ಮಣ್ಣು ತೆಗೆಯುವ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಕೊಂಡಿದ್ದ ಮೋಹನ್‌ದಾಸ್, ಮಣ್ಣು ತೆಗೆಯುವ ಸ್ಥಳದಲ್ಲಿ ಸೂಪರ್‌ವೈಸಿಂಗ್ ಮಾಡುತ್ತಾ ಕೆಲಸ ಮಾಡಿಸುತ್ತಿದ್ದ. ಜೆಸಿಬಿಯಿಂದ ಎಡಭಾಗದಲ್ಲಿ ಮಣ್ಣು ತೆಗೆಸುತ್ತಿದ್ದ ವೇಳೆ ಬಲಭಾಗದಿಂದ ಗುಡ್ಡಕುಸಿತವಾಗಿ ಸಾವು.

ಖಾಸಗಿ ಜಾಗದ ಮಾಲೀಕನ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

error: Content is protected !!