ಮುಂಡಗೋಡ ತಾಲೂಕಿನಲ್ಲಿ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಗೋಳು ಕೇಳೋರೇ ಇಲ್ವಾ..? ಪ್ರತಿನಿತ್ಯವೂ ಶಾಲಾ ಕಾಲೇಜಿಗೆ ಹೋಗಲು ಬಸ್ ಗಳಿಲ್ಲದೇ ಪರದಾಡುವಂತಾಗಿದೆ. ಹೀಗಾಗಿನೇ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಪಾಲಕರ ಆಕ್ರೋಶದ ಕಟ್ಟೆ ಒಡೆದಿದೆ.

ಇಂದೂರಿನಲ್ಲಿ ಪ್ರತಿಭಟನೆ..!                                      ಈ ಕಾರಣಕ್ಕಾಗೇ, ಇಂದೂರಿನಲ್ಲಿ ಇಂದು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ್ರು. ಇಂದೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಕೈಗೊಂಡ ವಿದ್ಯಾರ್ಥಿಗಳಿಗೆ ಪಾಲಕರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ರು. ಪ್ರತಿನಿತ್ಯ ಕಾಲೇಜಿಗೆ ಹೋಗಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲ, ಕೆಲವು ಬಸ್ ಗಳಿವೆ ಆದ್ರೆ ಅವುಗಳು ಎಲ್ಲೇಂದರಲ್ಲಿ ಕೆಟ್ಟು ನಿಲ್ಲುತ್ತವೆ. ಹೀಗಾಗಿ, ನಮಗೆ ಕಾಲೇಜಿಗೆ ಹೋಗಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.

ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..?
ಇದು ನಿಜಕ್ಕೂ ನಾಚಿಗ್ಗೇಡಿನ ಸಂಗತಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದವರು ಇದೇ ಮುಂಡಗೋಡ ತಾಲೂಕಿನವರು. ಆದ್ರೆ, ಇಡೀ ತಾಲೂಕಿನಲ್ಲಿ ಸಮರ್ಪಕ ಬಸ್ ಗಳ ವ್ಯವಸ್ಥೆ ಇಲ್ಲವೇ ಇಲ್ಲ. ಅದ್ರಲ್ಲೂ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ಗಳಿಗಾಗಿ ಪರದಾಡುವ ಸ್ಥಿತಿ ಇರೋದು ಅಧ್ಯಕ್ಷ ವಿ.ಎಸ್.ಪಾಟೀಲರ ಗಮನಕ್ಕೆ ಬರಲೇ ಇಲ್ವಾ.‌.? ಅದೇಷ್ಟೇ ಬಾರಿ ಅಧ್ಯಕ್ಷರ ಎದುರು ಸಮಸ್ಯೆ ಹೇಳಿಕೊಂಡ್ರೂ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿ.ಎಸ್.ಪಾಟೀಲರು ಮನಸ್ಸೇ ಮಾಡ್ತಿಲ್ಲ ಅನ್ನೋದು ನಾಗರೀಕರ ಆಕ್ರೋಶ.

ಪಾಟೀಲರೆಗೆ ಕರೆ..!
ಹೀಗಾಗಿ, ಇಂದೂರಿನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪಾಲಕರು ಅಧ್ಯಕ್ಷ ವಿ.ಎಸ್.ಪಾಟೀಲರಿಗೆ ಕರೆ ಮಾಡಿದ್ರು, ಸೋಮವಾರದ ಒಳಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ರು. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಅಧ್ಯಕ್ಷರ ಮಾತು ಕೇಳೋದೇ ಇಲ್ಲವಾ..?
ಅಸಲು, ಅಧ್ಯಕ್ಷ ವಿ.ಎಸ್.ಪಾಟೀಲರ ಮಾತಿಗೆ ಸಾರಿಗೆ ಅಧಿಕಾರಿಗಳು ಕ್ಯಾರೇ ಅನ್ನಲ್ಲವಾ..? ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಮುಂಡಗೋಡ ಪಟ್ಟಣದಿಂದ ಶಿರಸಿಗೆ ಹೋಗುವ ಬಸ್ ಗಳು ಲೊಯೊಲಾ ಕಾಲೇಜಿನ ಎದುರು “ಕೋರಿಕೆಯ ನಿಲುಗಡೆ” ಇದ್ರೂ ಒಂದು ದಿನವೂ ನಿಲ್ಲೋದೇ ಇಲ್ಲ. ನೂರಾರು ವಿದ್ಯಾರ್ಥಿಗಳು ಕೈ ಮಾಡಿ ಬೇಡಿಕೊಂಡ್ರೂ ಆ ಬಸ್ ಗಳ ಚಾಲಕರಿಗೆ ಕರುಣೆಯೇ ಬರಲ್ಲ. ಹೀಗಾಗಿ ಸುಮಾರು ಮೂರು ಕೀ.ಮಿ. ದೂರ ನಿತ್ಯವೂ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕು, ನಡೆದುಕೊಂಡೇ ಬರಬೇಕು‌. ಈ ಸಮಸ್ಯೆಯ ಕುರಿತು ಅಧ್ಯಕ್ಷ ಪಾಟೀಲರ ಗಮನಕ್ಕೆ ತಂದ್ರೂ ಅವ್ರ ಮಾತು ಸಾರಿಗೆ ಇಲಾಖೆಯ ಯಾವೊಬ್ಬ ಚಾಲಕ, ನಿರ್ವಾಹಕ ಕೇಳೋದೇ ಇಲ್ಲ ಅನ್ನೋದು ನಿಜಕ್ಕೂ ನಾಚಿಗ್ಗೇಡಿನ ಸಂಗತಿ ಅಂತಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನಾದ್ರೂ ಗಮನಿಸಿ ಅಧ್ಯಕ್ಷರೇ..!
ಸದ್ಯ, ಇಂದೂರಿನ ವಿದ್ಯಾರ್ಥಿಗಳ ಆಕ್ರೋಶದ
ಕಟ್ಟೆಯೊಡೆದಿದೆ. ಈಗಲೇ ಈ ಸಮಸ್ಯೆಗೆ ಸ್ಪಂಧಿಸದಿದ್ದರೆ, ಸೋಮವಾರ ಉಗ್ರ ಪ್ರತಿಭಟನೆ ಗ್ಯಾರ‌ಂಟಿ. ಹೀಗಾಗಿ, ಅಧ್ಯಕ್ಷರು ಎಚ್ಚೇತ್ತುಕೊಳ್ಳಬೇಕಿದೆ. ತಮ್ಮದೇ ತಾಲೂಕಿನ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂಧಿಸಬೇಕಿದೆ.

error: Content is protected !!