ಮುಂಡಗೋಡ ತಾಲೂಕಿನಲ್ಲಿ ಅದ್ಯಾಕೋ ಏನೋ ಎಲ್ಲವೂ ಸರಿಯಿಲ್ಲ. ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷವೋ ಗೊತ್ತಿಲ್ಲ. ಇಲ್ಲಿ ಏನಂದ್ರೆ ಏನೂ ನಡೆಯುತ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿವೆ. ಬೇರೆ ಏನಾದ್ರೂ ಸಮಸ್ಯೆಗಳು ಒತ್ತಟ್ಟಿಗಿರಲಿ, ಆದ್ರೆ, ವಿದ್ಯಾರ್ಥಿಗಳಿಗೆ ನಿರಾತಂಕವಾಗಿ ಪಾಠ ಕೇಳಲು ತಾಲೂಕಿನಲ್ಲಿ ಬರೋಬ್ಬರಿ 79 ಶಾಲೆಗಳು ಸಾಧ್ಯವಾಗದ ಸ್ಥಿತಿಯಲ್ಲಿದೆ.
ಹೌದು, ಮುಂಡಗೋಡ ತಾಲೂಕಿನ ಒಟ್ಟೂ 169 ಶಾಲೆಗಳಲ್ಲಿ 79 ಶಾಲೆಗಳಿಗೆ ಪ್ರಕೃತಿ ವಿಕೋಪದಿಂದ ಹಾನಿಯಾಗಿದೆ. ಅನುದಾನ ಕೊರತೆಯಿಂದಾಗಿ ಶಾಲೆಗಳು ದುರಸ್ಥಿಯಾಗದೆ ಹಾಗೆಯೇ ಉಳಿದುಕೊಂಡಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ. ತಾಲೂಕನಾದ್ಯಂತ ಒಟ್ಟು ಸರಕಾರಿ ಕಿರಿಯ-ಹಿರಿಯ ಪ್ರಾಥಮಿಕ ಸೇರಿ169 ಶಾಲೆಗಳು ಇವೆ. 2024-25 ಸಾಲಿನ ಜುಲೈ ತಿಂಗಳಿನಿಂದ, ನವೆಂಬರ್ ತಿಂಗಳಿನ ಅವಧಿಯಲ್ಲಿ ಪ್ರಕೃತಿ ವಿಕೋಪದಿಂದ 79 ಶಾಲೆಗಳು ಹಾನಿಯಾಗಿವೆ.
ಶಾಲೆಗಳಿಗೆ ಹಾನಿ ಎಲ್ಲೇಲ್ಲಿ..?
ಬೆಡಸಗಾಂವ ಗ್ರಾ.ಪಂ.ವ್ಯಾಪ್ತಿಯ ಉಮ್ಮುಚಗಿ, ಹಿರಿಯ ಪ್ರಾಥಮಿಕ ಶಾಲೆಯ ಗೊಡೆ ಮೇಲ್ಚಾವಣಿಗೆ ಹಾನಿ, ಅಜ್ಜಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆ ಮತ್ತು ಮೇಲ್ಚಾವಣಿ, ಪಟ್ಟಣದ ಸಂಜಯನಗರದ ಪ್ರಾಥಮಿಕ ಶಾಲೆಯ ಕೊಠಡಿ ಹಾಗೂ ಮೇಲ್ಚಾವಣಿ, ಅಂದಲಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ, ಮೇಲ್ಚಾವಣಿ, ಹುಲಿಹೊಂಡ ಶಾಲೆಯ ಮೇಲ್ಚಾವಣಿ ಹಾಗೂ ನೆಲಹಾಸು, ಚವಡಳ್ಳಿ ಶಾಲೆಯ ಮೇಲ್ಚಾವಣಿ, ಇಂದಿರಾನಗರದ ಉರ್ದು ಶಾಲೆಯ ಕೊಠಡಿ, ಹಾಗೂ ಅಡುಗೆ ಕೊಠಡಿಯ ಮೇಲ್ಚಾವಣಿ, ಗುಂಜಾವತಿ ಶಾಲೆಯ ಕೊಠಡಿ ಹಾಗೂ ನೆಲಹಾಸು, ಇಂದೂರ ಶಾಲೆಯ ಕೊಠಡಿ ಹಾಗೂ ಕಿಟಕಿ ಬಾಗಿಲು ರಿಪೇರಿ, ದೊಡ್ಡಹಾರವಳ್ಳಿ ಗ್ರಾಮದ ಶಾಲೆಯ ಕೊಠಡಿ ಯ ಮೇಲ್ಚಾವಣಿ, ಅಟ್ಟಣಗಿ ಗ್ರಾಮದ ಶಾಲೆ ಅಡುಗೆ ಕೊಠಡಿ ಮೇಲ್ಚಾವಣಿ, ಅರಿಶಿಣಗೇರಿ ಶಾಲೆಯ ಗೋಡೆ ಹಾಗೂ ಮೇಲ್ಚಾವಣಿ, ಓರಲಗಿ ಉರ್ದು ಶಾಲೆಯ ಕೊಠಡಿ ಮೇಲ್ಚಾವಣಿ, ಲಕ್ಕೊಳ್ಳಿ ಶಾಲೆಯ ಶೌಚಾಲಯ, ಕಾಂಪೌಂಡ್ ದುರಸ್ಥಿ, ಕಾತೂರ ಉರ್ದು ಶಾಲೆಯ ಕೊಠಡಿ ಮೇಲ್ಚಾವಣಿ, ಮಳಗಿ ಗ್ರಾ.ಪಂಯ ಇಂದಿರಾನಗರದ ಶಾಲೆಯ ಎರಡು ಕೊಠಡಿಯ ಗೋಡೆ, ಮೇಲ್ಛಾವಣಿ, ಅತ್ತಿವೇರಿ ಶಾಲೆಯ ಶೌಚಾಲಯ ದುರಸ್ತಿ, ಪಟ್ಟಣದ ಮಾರಿಕಾಂಬಾ ನಗರ ಶಾಲೆಯ ಕಾಂಪೌಂಡ್ ದುರಸ್ತಿ, ಹುನಗುಂದ ಉರ್ದು ಶಾಲೆಯ ಕೊಠಡಿ ಹಾಗೂ ಮೇಲ್ಚಾವಣಿ, ಬಾಚಣಕಿ ಉರ್ದು ಶಾಲೆಯ ಅಡುಗೆ ಕೊಠಡಿಯ ಮೇಲ್ಚಾವಣಿ, ಸಾಲಗಾಂವ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ದುರಸ್ಥಿ ಸೇರಿದಂತೆ 79 ಶಾಲೆಗಳು ದುರಸ್ಥಿಯಲ್ಲಿವೆ.
ಕಳೆದ ಮಳೆಗಾಲದಲ್ಲಿ ಈ ಶಾಲೆಗಳು ಹಾನಿಯಾಗಿದ್ದು ಈ ಬಗ್ಗೆ ಪಂಚಾಯತ ರಾಜ್ ಇಲಾಖೆ ಕ್ರಿಯಾಯೋಜನೆ ಸಿದ್ದ ಪಡಿಸಿಸಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳಹಿಸಿದ್ದಾರೆ. ಆದರೆ ಈವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ..! ಬಹುತೇಕ ಶಾಲೆಗಳಲ್ಲಿ ಮೇಲ್ಚಾವಣಿ ಹಾಗೂ ಶಾಲೆಯ ಗೋಡೆ ದುರಸ್ಥಿಯಲ್ಲಿವೆ. ಶಾಲೆ ಇನ್ನು ತಿಂಗಳುಗಳಲ್ಲಿ ಶಾಲೆಗಳು ಆರಂಭಗೊಳ್ಳುತ್ತವೆ. ಈ ಅವಧಿಯಲ್ಲಿ ದುರಸ್ಥಿಯಾಗದಿದ್ದರೆ. ಮಕ್ಕಳು ಇದ್ದ ಸ್ಥಿತಿಯ ಶಾಲೆಗಳಲ್ಲಿ ಕುಳಿತುಕೊಂಡು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ.
ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಳ್ಳಿ.!
ತಾಲೂಕಿನಲ್ಲಿ ಬಹುತೇಕ ಶಾಲೆಗಳು ಬಹಳ ಹಳೆಯ ಶಾಲೆಗಳಿವೆ. ಈ ಶಾಲೆಗಳ ಮೇಲ್ಚಾವಣಿಗಳು ಕಟ್ಟಿಗೆ ಹಾಕಿ ಹೆಂಚು ಹೊಂದಿಸಲಾಗಿದೆ. ಆದರೆ ಎಷ್ಟು ಶಾಲೆಗಳಲ್ಲಿ ರಾಪ್ಟರ್ (ಜಂತು)ಹಾಳಾಗಿವೆ. ಶಾಲೆ ಅವಧಿಯಲ್ಲಿ ಗಾಳಿಮಳೆಯಾಗಿ ಏನಾದರೂ ಅನಾಹುತವಾದರೆ ಯಾರು ಹೊಣೆ ಎಂಬ ಆತಂಕ ಪಾಲಕರದ್ದಾಗಿದೆ. ಹೀಗಾಗಿ ಶಾಲೆಯ ಪ್ರಾರಂಭವಾಗುವ ಮೊದಲು ದುರಸ್ತಿಯಲ್ಲಿರುವ ಶಾಲೆಗಳನ್ನು ರಿಪೇರಿ ಮಾಡಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.