ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!

ಮುಂಡಗೋಡ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆ, ಗಾಳಿ ಸಿಡಿಲಿನಾರ್ಭಟಕ್ಕೆ ಭಾರೀ ಅವಾಂತರಗಳು ಸೃಷ್ಟಿಯಾಗಿವೆ.. ಮುಂಡಗೋಡ ಪಟ್ಟಣದಲ್ಲೇ ಎರಡು ಕಡೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರಗಳು ಹೊತ್ತಿ ಉರಿದಿದ್ದರೆ, ತಾಲೂಕಿನ ನಂದಿಪುರ ಗ್ರಾಮದಲ್ಲಿ ಹಲವು ಮನೆಗಳಿಗೆ ಸಿಡಿಲಿನ ಸೆಳೆತ ಭಾರೀ ಹಾನಿ ಮಾಡಿದೆ.

ನಂದಿಪುರ ಗ್ರಾಮದ ದಸ್ತಗಿರ ಮಹ್ಮದ್ ಹುಸೇನ್ ಮರಗಡಿ ಎಂಬುವವರ ಮನೆ ಮುಂದಿನ ಗಿಡಕ್ಕೆ ಸಿಡಿಲು ಹೊಡೆದ ಪರಿಣಾಮ, ಮನೆಯ ವಿದ್ಯುತ್ ವೈಯರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಟಿವಿ, ಪ್ರಿಡ್ಜು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಇನ್ನು ಸಿಡಿಲಿನಾರ್ಭಟಕ್ಕೆ ಮನೆಯಲ್ಲಿ ಇದ್ದ ಓರ್ವ ಮಹಿಳೆಯ ಕಿವಿಗೆ ಹಾನಿಯಾಗಿದ್ದು, ಮಕ್ಕಳಿಗೂ ಭಯದಿಂದ ಸಣ್ಣ ಪುಟ್ಟ ಗಾಯವಾಗಿದೆ ಆದ್ರೆ, ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ ಅಂತಾ ಮನೆಯ ಮುಖ್ಯಸ್ಥ ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ದಾನೆ.