ಮುಂಡಗೋಡ ಪಟ್ಟಣದಲ್ಲಿ ನಡೆದ ಗೋಹತ್ಯೆ ಖಂಡಿಸಿ ABVP ನೇತೃತ್ವದಲ್ಲಿ ಹಿಂದು ಸಂಘಟನೆಗಳು ಬೀದಿಗಿಳಿದಿವೆ. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿಸ ಕಾರ್ಯಕರ್ತರು, ಗೋ ಹಂತಕರನ್ನು ತಕ್ಷಣವೇ ಬಂಧಿಸುವಂತೆ ಘೋಷಣೆ ಕೂಗಿ ಆಗ್ರಹಿಸಿದ್ರು.

ನಂತ್ರ, ಶಿವಾಜಿ ಸರ್ಕಲ್ ನಿಂದ ಪೊಲೀಸ್ ಠಾಣೆ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದು ಕಾರ್ಯಕರ್ತರು, ಮೆರವಣಿಗೆಯುದ್ದಕ್ಕೂ ಗೋಹತ್ಯೆಯ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಘೋಷಣೆ ಕೂಗಿದ್ರು. ನಂತರ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ್ ರಿಗೆ ಮನವಿ ಅರ್ಪಿಸಿದ್ರು.

ಹಿಂದು ಜಾಗರಣ ವೇದಿಕೆ ತಾಲೂಕಾ ಸಂಚಾಲಕ ಪ್ರಕಾಶ ಬಡಿಗೇರ, ಹಿಂಜಾವೇ ಸಹ ಸಂಚಾಲಕ ವಿಶ್ವನಾಥ್ ನಾಯರ್, ಭಜರಂಗದಳದ ತಾಲೂಕಾಧ್ಯಕ್ಷ ಶಂಕರ ಲಮಾಣಿ, ಅಯ್ಯಪ್ ಭಜಂತ್ರಿ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಮಂಜುನಾಥ್ ಹರಿಜನ್, ತಂಗಮ್ ಚಿಣ್ಣನ್, ಶ್ರೀಧರ್ ಉಪ್ಪಾರ್, ಬಿಜೆಪಿ ಮಂಡಳಾಧ್ಯಕ್ಷ ಮಂಜುನಾಥ್ ಪಾಟೀಲ್, ಪಟ್ಟಣ ಪಂಚಾಯತಿ ಸದಸ್ಯ ಫಣಿರಾಜ್ ಹದಳಗಿ, ಭರತರಾಜ್ ಹದಳಗಿ, ರಾಜೇಶ್ ರಾವ್, ಮಂಜುನಾಥ್ ಶೇಠ್ ಸೇರಿದಂತೆ ಹಲವರು ಭಾಗಿಯಾಗಿದ್ರು.

error: Content is protected !!