ಮುಂಡಗೋಡ ಪಟ್ಟಣದಲ್ಲಿ ಗುರುವಾರ ಬಾರೀ ಚರ್ಚೆ ಹಾಗೂ ಹಿಂದು ಕಾರ್ಯಕರ್ತರ ಪ್ರತಿರೋಧಕ್ಕೆ ಕಾರಣವಾಗಿದ್ದ ಗೋಹತ್ಯೆ ಕೇಸಿನಲ್ಲಿ ಮುಂಡಗೋಡ ಪೊಲೀಸ್ರು ಕೆಚ್ಚೆದೆಯ ಕ್ರಮ ಕೈಗೊಂಡಿದ್ದಾರೆ. ಜಾನುವಾರನ್ನು ಅಕ್ರಮವಾಗಿ ವಧೆ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇಬ್ಬರಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ.
ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ, ದೇಶಪಾಂಡೆ ನಗರದ ಜಹೀರ ಅಹ್ಮದ್ ಮೈಮದ್ದಿನ್ ಬೇಪಾರಿ(32) ಎಂಬುವವನನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ.
ಗುರುವಾರ ಬೆಳಗ್ಗೆ 09-15 ಗಂಟೆಯ ಸುಮಾರಿಗೆ ಮುಂಡಗೋಡ ಪಟ್ಟಣದ ಯಲ್ಲಾಪೂರ ರಸ್ತೆಯಲ್ಲಿರುವ ರಜಾಕಿಯ ಮಸೀದಿಯ ಹಿಂಭಾಗದ ಖಾಲಿಜಾಗದಲ್ಲಿ ಜಾನುವಾರನ್ನು ವಧೆ ಮಾಡಿ, ಅದರ ಮಾಂಸವನ್ನು ತಮ್ಮ ತಾಬಾದಲ್ಲಿ ಇಟ್ಟುಕೊಂಡು ಕುಳಿತುಕೊಂಡಿದ್ದರು. ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿದ್ದ ಮುಂಡಗೋಡ ಪೊಲೀಸ್ರು, ಕ್ರಮ ಕೈಗೊಂಡಿದ್ದಾರೆ.
ಉತ್ತರ ಕನ್ನಡ ಎಸ್ಪಿ ಎಮ್. ನಾರಾಯಣ ಹೆಚ್ಚುವರಿ ಎಸ್ಪಿಗಳಾದ, ಕೃಷ್ಣಮೂರ್ತಿ ಜಿ ಹೆಚ್.,ಜಗದೀಶ ನಾಯ್ಕ್, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ ಆರೋಪಿತನನ್ನು ಬಂಧಿಸುವಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐ ಪರಶುರಾಮ ಮಿರ್ಜಗಿ ಹಾಗೂ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು.