ರಾಜ್ಯದಲ್ಲಿ SSLC ಫಲಿತಾಂಶ ಹೊರಬಿದ್ದಿದೆ. ಅದ್ರಂತೆ, ಮುಂಡಗೋಡ ತಾಲೂಕಿನಲ್ಲೂ SSLC ಫಲಿತಾಂಶ ಘೋಷಣೆ ಆಗಿದ್ದು, 65.3 ರಷ್ಟು ಶೇಕಡವಾರು ಫಲಿತಾಂಶ ತಾಲೂಕಿನ ಪಾಲಾಗಿದೆ. ಅದ್ರಲ್ಲಿ ಅತಿಹೆಚ್ಚು ಅಂಕ ಪಡೆದ
ತಾಲೂಕಿನ ಮೂವರು ವಿದ್ಯಾರ್ಥಿಗಳ ಹೆಸರು ಇಲ್ಲಿದೆ.

ತಾಲೂಕಿನ ಮಳಗಿ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಸುರೇಶ್ ನಾಯ್ಕ್ 625 ಕ್ಕೆ 614 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಇನ್ನು ಮುಂಡಗೋಡಿನ ಮೌಲಾನಾ ಆಜಾದ್ ಪ್ರೌಢಶಾಲೆಯ ವಿದ್ಯಾರ್ಥಿನಿ, ಪರ್ವೀನ್ ಕೌಸರ್ ಅಬ್ದುಲ್ ಕರೀಂ ನರೇಗಲ್, 625 ಕ್ಕೆ 611 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಹಾಗೆನೇ, ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ, ಸವಿತಾ ಶಿವಪ್ಪ ಮತ್ತಿಗಟ್ಟಿ, 625 ಕ್ಕೆ 604 ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.

ತಾಲೂಕಿನಲ್ಲಿ ಈ ಬಾರಿ ಪರೀಕ್ಷೆಗೆ 554 ಗಂಡು, 697 ಹೆಣ್ಣು ಸೇರಿದಂತೆ ಒಟ್ಟು 1251 ಜನ ವಿದ್ಯಾರ್ಥಿಗಳು ಹಾಜರಾಗಿದ್ದರು. ಅದ್ರಲ್ಲಿ, 292 ಗಂಡು, 525 ಹೆಣ್ಣು ಸೇರಿ ಒಟ್ಟು 817 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 434 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಅಂತಾ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಮಾಹಿತಿ ನೀಡಿದ್ದಾರೆ.