ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!

ಮುಂಡಗೋಡ : ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ದಂಪತಿಗಳು ಮೃತಪಟ್ಟ ಅಹಿತಕರ ಘಟನೆ ಸಂಭವಿಸಿದ್ದು.

ಘಟನೆ ಬಗ್ಗೆ ತಿಳಿದ ತಕ್ಷಣ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ಉಮೇಶ್ ಬಿಜಾಪುರ, ಕೆ.ಸಿ.ಗಲಭಿ, ಸಂಜೀವ್ ಪೀಶೆ ಹಾಗೂ ಪ್ರಮುಖರು ಹಾಜರಿದ್ದರು.

error: Content is protected !!