ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಪಾಳಾ ಸಮೀಪದ ರಾಮಾಪುರ ಕ್ರಾಸ್ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದವನ ಹೆಡೆಮುರಿ ಕಟ್ಟಲಾಗಿದೆ.

ಬರೋಬ್ಬರಿ 50 ಸಾವಿರ ಮೌಲ್ಯದ್ದು..!ಅಂದಹಾಗೆ, ಖಾಕಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನು ಮುಂಡಗೋಡ ಯಲ್ಲಾಪುರ ರಸ್ತೆಯ ಮಹಮ್ಮದಅನಿಸ ಎಜಾಜ್ ಅಹ್ಮದ್ ಬೇಗ್ (20) ಎಂಬುವವ.. ಈತ ತನ್ನ ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿರೊ ಪೊಲೀಸರು 902 ಗ್ರಾಂ ಗಾಂಜಾ ಹಾಗೂ 200 ರೂ ನಗದು ವಶ ಪಡಿಸಿಕೊಂಡಿದ್ದಾರೆ. ಅಂದಹಾಗೆ ಹಾಗೆ ವಶಪಡಿಸಿಕೊಂಡಿರೋ ಗಾಂಜಾದ ಈಗಿನ ಕಿಮ್ಮತ್ತು ಬರೋಬ್ಬರಿ 50 ಸಾವಿರ ರೂ.

ಸಿಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ಗಣಪತಿ ಹುನ್ನಳ್ಳಿ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ ಹಾಗೂ ಬಸವರಾಜ ಒಡೆಯರ್ ಭಾಗಿಯಾಗಿದ್ರು.

error: Content is protected !!