ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?

ಕಾರವಾರ: ನಗರಸಭೆ ಮಾಜಿ ಸದಸ್ಯ ಸತೀಶ್ ಕೋಳಂಬಕರ್ ಹತ್ಯೆಯ ಹಿಂದೆ ಅಲ್ಲಿನ ಪೊಲೀಸರ ನಿರ್ಲಕ್ಷ ಹಾಗೂ ಬೇಜವಾಬ್ದಾರಿಯೂ ಕಾರಣವಾಯ್ತಾ..? ಅದೊಂದು ಹೊಟೆಲ್ ನಲ್ಲಿ ನಡೆದಿದ್ದ ಗಲಾಟೆಯ ದೂರು ದಾಖಲಿಸಿಕೊಂಡು ಸರಿಯಾದ ಕ್ರಮ ಕೈಗೊಂಡಿದ್ದರೆ ಸತೀಶ್ ಹೆಣ ಬೀಳ್ತಾನೇ ಇರಲಿಲ್ಲವಾ..? ಹೀಗಾಗಿನೇ ಇವಾಗ ಆ ನಾಲ್ವರು ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆಯಾ..? ಸದ್ಯದ ಬಾತ್ಮಿಗಳನ್ನು ಗಮನಿಸಿದ್ರೆ ಹೌದು ಅನ್ನುತ್ತಿವೆ ಪೊಲೀಸ್ ಮೂಲಗಳು.

ಕಾರವಾರ ನಗರಸಭೆಯ ಮಾಜಿ ಸದಸ್ಯ ಸತೀಶ ಕೋಳಂಬಕರ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ, ನಗರ ಠಾಣೆಯ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದೆಯಂತೆ.
ಹತ್ಯೆಗೂ ಮೊದಲು ಹೊಟೇಲ್‌ ಒಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಕಾರವಾರ ನಗರಠಾಣೆಯ ಪಿಎಸ್‌ಐ ಸೇರಿ ನಾಲ್ವರನ್ನ ಅಮಾನತ್ ಮಾಡಲಾಗಿದೆ ಎನ್ನಲಾಗಿದೆ.

ಇದಿಷ್ಟು ಘಟನೆ..!
ಸತೀಶ್ ಕೋಳಂಬಕರ್ ಹತ್ಯೆಗೂ ಮೊದಲು ನಗರದ ಹೊಟೇಲ್ ಒಂದರಲ್ಲಿ ಹತ್ಯೆ ಆರೋಪಿ ಹಾಗೂ ಆತನ ಸ್ನೇಹಿತರು ಸತೀಶ್ ಕೋಳಂಬಕರ್ ನಡುವೆ ಮಾರಾಮಾರಿ ನಡೆದಿತ್ತು ಎನ್ನಲಾಗಿದೆ. ಅಂದು ನಡೆದ ಗಲಾಟೆಯ ಬಗ್ಗೆ ನಗರ ಠಾಣೆಯ ಪೊಲೀಸರು ಹೊಟೇಲ್ ಮಾಲೀಕರಿಂದ ದೂರು ಪಡೆದುಕೊಂಡಿದ್ದರೆ ಈ ಕೃತ್ಯ‌ ನಡೆಯುತ್ತಲೇ ಇರಲಿಲ್ಲ ಎನ್ನಲಾಗಿದೆ.‌ ಹೀಗಾಗಿ ಘಟನೆ ನಂತರ ನಗರ ಠಾಣೆಯ ಪೊಲೀಸರು ಕ್ರಮಕ್ಕೆ‌ ಮುಂದಾಗಿಲ್ಲ ಎಂದು ಆರೋಪಿಸಿ ಓರ್ವ ಪಿಎಸ್‌ಐ, ಓರ್ವ ಮಹಿಳಾ ಪಿಎಸ್ಐ ಹಾಗೂ ಇಬ್ಬರೂ ಕಾನ್ಸ್ಟೇಬಲ್‌ಗಳನ್ನ ಅಮಾನತ್ ಮಾಡಲಾಗಿದೆ ಎನ್ನಲಾಗಿದೆ.

 

error: Content is protected !!