ಮುಂಡಗೋಡ: ತಾಲೂಕಿನ ಮೈನಳ್ಳಿಯ ಗ್ರಾಮ ದೇವಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ ಐವರಿಗೆ ಸಿಡಿಲು ಬಡಿದು ಗಾಯಗೊಂಡ ಘಟನೆ ನಡೆದಿದೆ.
ನಾಗರತ್ನ ಜೋಲೆ, ಲಕ್ಷ್ಮೀ ಕೊಕರೆ, ಗಂಗಾರಾಮ ಮುಕ್ಕೊ ಕೊಕರೆ, ಶಾಂತಾಬಾಯಿ ಸಳಕೆ ಹಾಗೂ ಭರತ್ ಸಳಕೆ ಎಂಬಾತರೇ ಸಿಡಿಲಿನ ಶಾಖದಿಂದ ಗಾಯಗೊಂಡಿದ್ದಾರೆ.
ತಾಲೂಕಿನಾದ್ಯಂತ ಶನಿವಾರ ಮತ್ತು ರವಿವಾರ ರಾತ್ರಿ ಸಿಡಿಲು ಸಹಿತ ರಭಸದ ಗಾಳಿ ಮಳೆ ಸುರಿದಿತ್ತು. ಬಾಳೆಹಳ್ಳಿ ಹಾಗೂ ಕಳಕೀಕೆರಿ ಗ್ರಾಮದವರು ಮೈನಳ್ಳಿ ಗ್ರಾಮದೇವಿ ಜಾತ್ರೆಗೆ ಬಂದು ದೇವಿ ದರ್ಶನ ಪಡೆದು ನಂತರ ಸಿಡಿಲು ಮಳೆ ಪ್ರಾರಂಭವಾಗಿದ್ದರಿಂದ ಅವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ 10 ಗಂಟೆಗೆ ಇವರು ತಂಗಿದ್ದ ಮನೆಗೆ ಸಿಡಲು ಹೊಡದಿದೆ. ಇದರ ಪರಿಣಾಮ ಮನೆಯಲ್ಲಿದ್ದ ಹತ್ತೊಂಬತ್ತು ಜನರಲ್ಲಿ ಐವರಿಗೆ ಸಿಡಿಲಿನ ಶಾಖ ತಗಲಿದೆ. ಹೀಗೆ ಸಿಡಿಲಿನ ಶಾಖಕ್ಕೆ ಅಸ್ವಸ್ಥರಾದವರನ್ನು ತಾಲೂಕು ಆಸ್ಪತ್ರೆ ಗೆ ದಾಖಲಿಸಲಾಯಿತು. ಐವರಲ್ಲಿ ನಾಲ್ವರನ್ನು ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದರೆ ಗಂಗಾರಾಮ ಮುಕ್ಕೊ ಎಂಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.
ಮನೆಗೆ ಸಿಡಿಲು ಹೊಡೆದಿರುವುದರಿಂದ ಮನೆಗೂ ಸಹ ಹಾನಿಯಾಗಿ ಅಕ್ಕ ಪಕ್ಕದ ಮನೆಯವರಿಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.