ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ವಿಜೇತ ಹೋರಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ವಿಜೇತ ಹೋರಿಗಳಿಗೆ ಬಹುಮಾನ ನೀಡಿದ್ರು.. ಅತ್ಯುತ್ತಮ ಹಿಡಿತಗಾರರಿಗೂ ಬಹುಮಾನ ನೀಡಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಹಬ್ಬದ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಗೃಹೋಪಯೋಗಿ ವಸ್ತುಗಳ ಆಕರ್ಶಕ ಬಹುಮಾನ ನೀಡಲಾಯಿತು.. ಈ ವೇಳೆ ಅಣ್ಣಪ್ಪ ಸಾವಿಕೇರಿ, ಲಕ್ಷ್ಮಣ ಗಡಕನಳ್ಳಿ, ಮಂಜು ಭೋವಿ, ಜಮೀರ್ ಶೇಖ್, ಮುಖೇಶ್ ತಳವಾರ್, ಗಣೇಶ್ ಕೋಡಿಹಳ್ಳಿ, ಪ್ರಶಾಂತ್ ದೋರಳ್ಳಿ, ಕೃಷ್ಣ ಕೋಡಿಕೊಪ್ಪ, ವಿನಾಯಕ್ ಶೆಟ್ಟಿ, ಅಣ್ಣಪ್ಪ ನಾಯ್ಕ್, ಪ್ರಜ್ವಲ್ ಮಳಗಿ, ಸುಭಾಷ್ ಮಳಗಿ, ವಡಕಪ್ಪ ಮಳಗಿ, ಅಣ್ಣಪ್ಪ ನಾಟೀನ್, ಪರಶುರಾಮ್ ದಾಸರ ಸೇರಿ ಹಲವರು ಹಾಜರಿದ್ದರು..

error: Content is protected !!