ಮುಂಡಗೋಡ: ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ದಂಪತಿಗಳಿಬ್ಬರೂ ದಾರುಣ ಸಾವು ಕಂಡಿದ್ದಾರೆ‌. ನಸುಕಿನ ಜಾವ ಸಂಭವಿಸಿರಬಹುದಾದ ಘಟನೆ ಅಂತಾ ಹೇಳಲಾಗ್ತಿರೋ ಅಪಘಾತ ನಡೆದಿರೊದೇ ವಿಚಿತ್ರ. ಅಷ್ಟಕ್ಕೂ ಈ ಸಾವು ಅನ್ನೋದು ಇಷ್ಟು ಸಲೀಸಾ ಅನ್ನೋದೇ ಬಹುದೊಡ್ಡ ವಾಸ್ತವ..!

ಮೃತರು ದಂಪತಿಗಳು..!
ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ಸ್ವಿಪ್ಟ್ ಕಾರು ಇದಾಗಿದ್ದು, ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿಯವರಾದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ. ಕರವಳ್ಳಿಯಲ್ಲಿ ಸಂಬಂಧಿಯೊಬ್ಬರು ಅಸು ನೀಗಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ ಬೆಂಗಳೂರಿನಿಂದ ಕರವಳ್ಳಿಗೆ ಬರುತ್ತಿದ್ದರು ಎನ್ನಲಾಗಿದೆ. ಆದ್ರೆ ದಾರಿಮದ್ಯೆ ಇಂತಹದ್ದೊಂದು ದುರಂತ ಸಂಭವಿಸಿದೆ.

ಇದು ವಿಚಿತ್ರ ಅಲ್ವಾ..?
ಹಾಗೆ ನೋಡಿದ್ರೆ, ಅಮ್ಮಾಜಿ ಕೆರೆಯಲ್ಲಿ ಕಾರು ಬಿದ್ದ ಜಾಗ ನೋಡಿದಾಗ ವಿಚಿತ್ರ ಅನಿಸ್ತಿದೆ. ಕಾರು ಬಿದ್ದ ಜಾಗದಲ್ಲಿ ಅಬ್ಬಬ್ಬಾ ಅಂದ್ರೆ ನಾಲ್ಕು ಅಡಿಯಷ್ಟು ನೀರಿನ ಆಳವಿದೆ. ಹೀಗಾಗಿ ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗೇ ಇಲ್ಲ. ಹೀಗಿದ್ದಾಗ್ಯೂ ಏಕಾ ಏಕಿ ಸಾವು ಸಂಭವಿಸುವಷ್ಟು ಘನಘೋರವಂತೂ ಅಲ್ಲವೇ ಅಲ್ಲ. ಹಾಗಂತ ಈ ಘಟನೆ ನೋಡಿದ ಎಂತವರಿಗೂ ಹಾಗೆ ಅನ್ನಿಸದೇ ಇರಲ್ಲ. ಅದ್ರಲ್ಲೂ, ಮಹಿಳೆಯ ಶವ ಮೊಣಕಾಲಿನ ಮಟ್ಟದಲ್ಲಿ ಇರೋ ನೀರಲ್ಲಿ ಬಂದು ಬಿದ್ದಿದೆ.

ಬಹುಶಃ ಕಾರು ಚಾಲನೆ ಮಾಡುತ್ತಿದ್ದವರು ರಾಜು ವರ್ಗೀಸ್ ಇರಬಹುದೇನೋ..? ಯಾಕಂದ್ರೆ ಮೃತ ರಾಜು ವರ್ಗೀಸ್ ದೇಹ ಹಿಂದಿನ ಸೀಟಿಗೆ ಬಂದು ಕೂತ ಹಾಗಿದೆ, ಆದ್ರೆ ಕಾಲು ಮಾತ್ರ ಮುಂದಿನ ಸೀಟಿನ ಮೇಲಿದೆ.

ಮಹಿಳೆ ಕಾರಿಂದ ಹೊರಗೆ ಹೇಗೆ ಬಂದ್ರು..?
ಅಸಲು, ಕಾರು ಕೆರೆಗೆ ನುಗ್ಗುತ್ತಲೇ ಕಾರಿಂದ ಬಾಗಿಲು ತೆರೆದು ಪ್ರಾಣ ರಕ್ಷಣೆಗಾಗಿ ಮೃತ ಬ್ಲೆಸ್ಸಿ ಹೊರಗೆ ಬಂದಿರಬಹುದೇನೋ ಹೀಗಾಗಿ, ಅವ್ರ ಶವ ಹೊರಗೆ ಬಿದ್ದಿದೆ. ಆದ್ರೆ, ಮೊಣಕಾಲಿನ ಮಟ್ಟದಲ್ಲಿದ್ದ ನೀರಲ್ಲಿ ಸಾವು ಹೇಗಾಯ್ತು..? ಸಾವು ಆಗಿದ್ರೂ ಇಷ್ಟು ಬೇಗ ಹೇಗೆ ಶವ ತೇಲೋಕೆ ಸಾಧ್ಯ..? ಬಹುಶಃ ಕಾರು ಕೆರೆಗೆ ನುಗ್ಗಿದಾಗಲೇ ಕಾರಿನ ಒಳಗಡೆ ಸಂಪೂರ್ಣವಾಗಿ ನೀರು ನುಗ್ಗಿದೆ ಅನಿಸತ್ತೆ. ಹೀಗಾಗಿ, ಹೇಗೋ ಪ್ರಾಣ ರಕ್ಷಣೆಗಾಗಿ ಬ್ಲೆಸ್ಸಿ ಕಾರಿನ ಬಾಗಿಲು ತೆರೆದು ಹೊರಗೆ ಬಂದಿದ್ದಾರೆನೋ..? ಒಟ್ನಲ್ಲಿ, ಕತ್ತಲಿನಲ್ಲಿ ನಡೆದ ದುರಂತದಲ್ಲಿ ಭಯ ಅನ್ನೋದೇ ಸಾವಿಗೆ ಸಾಕ್ಷಿಯಾಯ್ತಾ..? ಗೊತ್ತಿಲ್ಲ.

ನಿದ್ದೆಗಣ್ಣಲ್ಲಿ ನಡೆದ ದುರಂತವಾ..?
ಹಾಗೆ ಅನ್ನಿಸ್ತಿದೆ, ಇಂತಹದ್ದೊಂದು ದುರಂತ ನಿದ್ದೆಗಣ್ಣಲ್ಲೇ ನಡೆದು ಹೋಗಿರಬಹುದು. ಬೆಂಗಳೂರಿನಿಂದ ಬಂದವರು ಇನ್ನೇನು ಕರವಳ್ಳಿಗೆ ತಲುಪುಷ್ಟರಲ್ಲೇ ಅಮ್ಮಾಜಿ ಕೆರೆಗೆ ಹಾರವಾಗಿದ್ದು ಬೆಳ್ಳಂ ಬೆಳಿಗ್ಗೆಯ ಸುಖದ ನಿದ್ದೆಯ ಹೊತ್ತಲ್ಲಿ ಅನಿಸತ್ತೆ. ಇದೇ ನಿದ್ದೆ ಮಂಪರಿನಲ್ಲಿ ಡ್ರೈವಿಂಗ್ ಮಾಡಿ ದುರಂತಕ್ಕೀಡಾದ್ರಾ ದಂಪತಿಗಳು..? ಅಥವಾ ಯಲ್ಲಾಪುರ ಕ್ರಾಸ್ ನಲ್ಲಿ ವೇಗವಾಗಿ ಬಂದು ಅಚಾನಕ್ಕಾಗಿ ಕೆರೆಗೆ ನುಗ್ಗಿದ್ರಾ..? ಯಾರಿಗೂ ಗೊತ್ತಿಲ್ಲ. ಒಟ್ನಲ್ಲಿ, ಮುಂಡಗೋಡಿಗರ ಪಾಲಿಗೆ ಸೋಮವಾರದ ಬೆಳಗು ದಂಪತಿಗಳ ಸಾವಿನ ಸುದ್ದಿಯ ಜೊತೆಗೆ ಶುರುವಾಗಿದೆ.

ಅಷ್ಟಕ್ಕೂ ಇಬ್ಬರೂ ಈಜು ಬಲ್ಲವರೇ..!
ನಿಮಗೆ ಗೊತ್ತಿರಲಿ, ಸದ್ಯ ದುರಂತದಲ್ಲಿ ಸಾವಿಗೀಡಾಗಿರೋ ರಾಜು ವರ್ಗೀಸ್ ಬರೋಬ್ಬರಿ 15 ವರ್ಷಗಳ ಕಾಲ CRPF ನಲ್ಲಿ ಸೇವೆ ಸಲ್ಲಿಸಿದ್ದವರು. ಇತ್ತಿಚೆಗಷ್ಟೇ ಸೇನೆಯಲ್ಲಿ ನಿವೃತ್ತಿ ಹೊಂದಿದ್ದರಂತೆ. ನಂತರ ಬೆಂಗಳೂರಿನಲ್ಲಿ ಪಿಎಸ್ಐ ಆಗಿ ನೇಮಕಗೊಂಡು ಇನ್ನೇನು ಸೇವೆಗೆ ಅಣಿಯಾಗಿದ್ದರು ಎನ್ನುವ ಮಾಹಿತಿ ಇದೆ. ಹಾಗಂತ, ಅವ್ರ ಬಲ್ಲವರು ಹೇಳುತ್ತಿದ್ದಾರೆ. ಹೀಗಾಗಿ, ಈಜು ಅನ್ನೋದು ಇವ್ರಿಗೆ ಗೊತ್ತಿಲ್ಲದೇ ಏನಿಲ್ಲ. ಹಾಗೆ ಅವ್ರ ಪತ್ನಿ ಬ್ಲೆಸ್ಸಿಯವರಿಗೂ ಕೂಡ ಈಜು ಬರ್ತಿತ್ತು ಎನ್ನಲಾಗಿದೆ‌. ಹೀಗಿದ್ದಾಗಲೂ ಇಂತಹ ದುರಂತದಲ್ಲಿ ಸಾವು ಕಂಡಿರೋದು ಅಂದ್ರೆ ಎಂತಹ ವಿಧಿಯಾಟ ಅಲ್ವಾ..?

ಸದ್ಯ, ಮುಂಡಗೋಡ ಪೊಲೀಸರು ಸ್ಥಳಕ್ಕೆ ಬಂದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಉತ್ತರ ಕನ್ನಡ ಎಸ್ಪಿ ಮೇಡಂ ಸ್ಥಳಕ್ಕೆ ಬರೋ ಸಾಧ್ಯತೆ ಇದೆ.

error: Content is protected !!