ಮುಂಡಗೋಡ ತಾಲೂಕಿನಲ್ಲಿ ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಇಂದೂರು ಕೊಪ್ಪ ಗ್ರಾಮದಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಹಲವು ಮನೆಗಳ ಮೇಲ್ಚಾವಣಿಗಳು ಹಾರಿಹೋಗಿದ್ದು, ಇನ್ನಿಲ್ಲದ ನಷ್ಟ ಸಂಭವಿಸಿದೆ.
ರೈತರ ಗೋಳು..!
ಇನ್ನು ಬೇಸಿಗೆ ಹಂಗಾಮಿನಲ್ಲಿ ಬೆಳೆದ ಗೋವಿನಜೋಳ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಪ್ಪ ಗ್ರಾಮದಲ್ಲಿ ಒಣಗಿಸಲು ಹಾಕಿದ್ದ ಗೋವಿನಜೋಳ ಮಳೆ ನೀರಿನ ಪಾಲಾಗಿದ್ದು ಹಾನಿಯುಂಟಾಗಿದೆ. ಗ್ರಾಮದ ಕಾಂಕ್ರೀಟು ರಸ್ತೆಯ ಮೇಲೆ ಒಣಗಲು ಹಾಕಿದ್ದ ಗೋವಿನಜೋಳದ ರಾಶಿಯಲ್ಲಿ ಮಳೆ ನೀರು ಹೊಕ್ಕು ನೆನೆದು ಹೋಗಿದೆ. ಹೀಗಾಗಿ, ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.