ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!


ಶಿರಸಿ; ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಶಿರಸಿ ಮತ್ತು ಸಿದ್ಧಾಪುರ ದಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ ಶಿರಸಿ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದ ಹೆಲಿಪ್ಯಾಡ್ ಗೆ ಬಂದಿಳಿದರು. ರಾಜ್ಯಪಾಲ ಥಾವರ ಚಂದ್ ಗೆಹಲೊಟ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ ಉಪರಾಷ್ಟ್ರಪತಿಗಳನ್ನು ಸ್ವಾಗತಿಸಿಕೊಂಡರು.

ಶಿರಸಿಯಲ್ಲಿ ನಡೆದ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪರಾಷ್ಟ್ರಪತಿ ಗಳು, ತಾಯಿಯ ಸ್ಮೃರಣೆಯಲ್ಲಿ ಒಂದು ವೃಕ್ಷ ದಡಿ, ಶಿರಸಿಯ ಅರಣ್ಯ ಕಾಲೇಜಿನ ಆವರಣದಲ್ಲಿ ತಮ್ಮ ದಿವಂಗತ ತಾಯಿ ಶ್ರೀಮತಿ ಕೇಸರಿ ದೇವಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.

ಇದೇ ವೇಳೆ ರಾಜ್ಯಪಾಲ ಥಾವರ ಚಂದ್ ಗೆಹಲೊಟ್, ಅವರು ತಮ್ಮ ತಾಯಿ ದಿವಂಗತ ಶ್ರೀಮತಿ ಸುಮನ್ ಬಾಯಿ ಹೆಸರಿನಲ್ಲಿ ಮತ್ತು ಗೌರವಾನ್ವಿತ ಉಪ ರಾಷ್ಟ್ರಪತಿ ಅವರ ಪತ್ನಿ ಶ್ರೀಮತಿ ಡಾ. ಸುದೇಶ್ ಧನಕರ್ ಅವರು ತಮ್ಮ ತಾಯಿ ದಿವಂಗತ ಶ್ರೀಮತಿ ಭಗವತಿ ದೇವಿ ಅವರ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.

error: Content is protected !!