ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ ಮಿಲ್ ನ ಬೃಹತ್ ಗಾತ್ರದ ಯಂತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಹಳೇ ದಾಂಡೇಲಿ ನಿವಾಸಿ ಅಬ್ದುಲ್ ಸಲೀಂ ಖಲಾಸಿ (55) ಸಾವನ್ನಪಿದ್ದ ವ್ಯಕ್ತಿ. ಮೃತ ವ್ಯಕ್ತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಗರದ ಪೊಲೀಸ ಠಾಣೆಯ ಪಿಎಸ್‌ಐ ಅಮೀನಸಾಬ ಅತ್ತಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಗುತ್ತಿಗೆದಾರ ಸಾಜಿದ್ ಪಠಾಣ್ ಹಾಗೂ ಮೇಲ್ವಿಚಾರಕ ಅಬ್ದುಲ್ ಖಾದರ ಪಠಾಣ ಇವರ ಮೇಲೆ ಮೃತನ ಹೆಂಡತಿ ಬಲಕಿಸ್ ಬಾನು ಖಲಾಸಿ ನಗರಠಾಣೆಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ 6 ನಂ ಮೆಷೀನ್ ನ 14 ನೇ ರೆಡಿಯೇಟರ್ ಹತ್ತಿರ ಕೆಲಸ ಸಮಯದಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿದರಿಂದ ನನ್ನ ಗಂಡ ಮೃತಪಟ್ಟಿದ್ದಾನೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.