ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!

ಗೋಕರ್ಣ: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವತಿಯರು ಜಟಾಯು ತೀರ್ಥದ ಹತ್ತಿರ ಕಾಲು ಜಾರಿ ಸಮುದ್ರಕ್ಕೆ ಬಿದ್ದು ದಾರುಣ ಸಾವು ಕಂಡಿದ್ದಾರೆ. ತಮಿಳನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ ಕೊನೆಯ ವರ್ಷದ ಪರೀಕ್ಷೆ ಮುಗಿಸಿ, ಚಾರಣಕ್ಕೆ ಬಂದಿದ್ದ ಒಟ್ಟು 23ಜನರ ತಂಡದಲ್ಲಿದ್ದ, ಸಿಂದುಜಾ ಮತ್ತು ಕನ್ನಿಮೊಳಿ ಎಂಬ ಹೆಸರಿನ ಇಬ್ಬರು ಯುವತಿಯರು ಸಮುದ್ರದ ಪಾಲಾಗಿದ್ದಾರೆ.

ನಾಲ್ವರು ಯುವತಿಯರು ಸಮುದ್ರ ಅಂಚಿನ ಬಂಡೆ ಮೇಲೆ ಕುಳಿತಿ ಸಮುದ್ರದ ಸುಂದರತೆಯನ್ನು ಕಣ್ತುಂಬಿಕೊಳ್ತಿದ್ದರು. ಇದೇ ವೇಳೆ ರಭಸದ ಅಲೆ ಬಡಿದು ಇಬ್ಬರು ಸಮುದ್ರಕ್ಕೆ ಬಿದ್ದಿದ್ದಾರಡ. ಮತ್ತಿಬ್ಬರು ಬಂಡೆಯ ಪಕ್ಕ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹೀಗಾಗಿ, ಆಸ್ಪತ್ರೆಯಲ್ಲಿ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿದೆ..

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!