ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ಮಾಡಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿರೇಕೆರೂರಿನಿಂದ ಬಂದು ಮಟ್ಕಾ ಆಡಿಸುತ್ತಿದ್ದ ಬುಕ್ಕಿ ಸೇರಿದಂತೆ ಮೂವರ ಮೇಲೆ ಕೇಸು ದಾಖಲಾಗಿದೆ. ಕಾತೂರಿನಲ್ಲಿ ಟೀ ಅಂಗಡಿ ನಡೆಸುತ್ತಿರೊ ಮಹಮ್ಮದ್ ಜಾಫರ್ ಮಹಮ್ಮದ ಹುಸೇನ ಮರಗಡಿ (48) ಎಂಬುವವನು ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಆಲಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು, ಮಟ್ಕಾ ಬರೆಯುತ್ತಿದ್ದ. ಈ ವೇಳೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಹಾಗೂ ತಂಡ ದಾಳಿ ನಡೆಸಿದೆ. ಇನ್ನು ಹೀಗೆ ದಂಧೆ ನಡೆಸಲು ಬೆನ್ನೆಲುಬಾಗಿ ನಿಂತಿದ್ದ ಹಾಗೂ ಮಟ್ಕಾ ಆಟದಿಂದ ಸಂಗ್ರಹವಾದ ಹಣವನ್ನು ಪಾಳಾ ಗ್ರಾಮದ ಮೌಲಾಲಿ ಹಾಗೂ ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ಚಿಕ್ಕೆರೂರಿನ ಅಥಾವುಲ್ಲಾ ಎಂಬುವವನಿಗೆ ನೀಡುತ್ತಿರುವಾದಾಗಿ ಆರೋಪಿ ಒಪ್ಪಿಕೊಂಡಿದ್ದು ಅವರಿಬ್ಬರ ಮೇಲೂ ಕೇಸು ದಾಖಲಾಗಿದೆ. ಇವ್ರೊಂದಿಗೆ, ನಗದು ಹಣ 1120 -ರೂ ವಶಪಡಿಸಿಕೊಳ್ಳಲಾಗಿದೆ.
Top Stories
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಚಿಗಳ್ಳಿ ಹಿರಿಕೆರೆಯಲ್ಲಿ ಮೀನುಗಳ ದಾರುಣ ಸಾವು, ಇಡೀ ಕೆರೆಗೇ ವಿಷ ಹಾಕಿದ್ರಾ ದುರುಳರು..?
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ಕಮಲ್ ಪಂಥ್ ಸೇರಿ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ..!
ಬೆಂಗಳೂರು: ರಾಜ್ಯ ಸರ್ಕಾರ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂಥ್ ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಸಿ. ಎಚ್. ಪ್ರತಾಪ್ ರೆಡ್ಡಿ ನೇಮಕಗೊಂಡಿದ್ದಾರೆ. ಕೆಎಸ್ಆರ್ಪಿಯ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿ, ಅವರ ಜಾಗಕ್ಕೆ ಕ್ರೈಂ ಮತ್ತು ಟೆಕ್ನಿಕಲ್ ಸೆಲ್ನಲ್ಲಿ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು, ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂ. ಎನ್. ಅನುಚೇತ್ ಅವರನ್ನು ಸಿಐಡಿಯ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.
ಮುಂಡಗೋಡ ಸುಭಾಷ್ ನಗರದಲ್ಲಿ ವ್ಯಕ್ತಿ ನೇಣಿಗೆ ಶರಣು, ಸಾವಿನ ಹಿಂದೆ ನೂರಾರು ಪ್ರಶ್ನೆ..?
ಮುಂಡಗೋಡ: ಪಟ್ಟಣದ ಸುಭಾಷ್ ನಗರದಲ್ಲಿ ಓರ್ವ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ. ನಾರಾಯಣ ಲಮಾಣಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಇಂದು ಮದ್ಯಾನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಅಂದಹಾಗೆ, ನಾರಾಯಣ ಲಮಾಣಿ, ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡಿದ್ದ. ಆದ್ರೆ ಇತ್ತಿಚೆಗೆ ಯಾಕೊ ಅದೇನೋ ಟೆನ್ಶೆನ್ ನಲ್ಲಿ ಇರುತ್ತಿದ್ದ ಅಂತಾ ಆತನ ಸ್ನೇಹಿತರ ಮೂಲಗಳಿಂದ ಮಾಹಿತಿ ಬಂದಿದೆ. ಆದ್ರೆ, ದಿಢೀರ್ ಆತನ ಆತ್ಮಹತ್ಯೆಗೆ ಕಾರಣವಾದ್ರೂ ಏನು ಅನ್ನೋ ಪ್ರಶ್ನೆ ಎದುರಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವಂತ ಹುಡುಗ ಆತ ಅಲ್ಲ, ಆತ್ಮಹತ್ಯೆಗೆ ಅದೇನೋ ಮೇಜರ್ ಕಾರಣ ಇರಬಹುದು ಅಂತಿದಾರೆ ಆತನ ಸ್ನೇಹಿತರು. ಅದೇನೇ ಆದರೂ ಪೊಲೀಸರ ತನಿಖೆಯಿಂದ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಅನ್ನೋದು ಸ್ಪಷ್ಟವಾಗಲಿದೆ. ಪೊಲೀಸರು ಇನ್ನೇನು ಸ್ಥಳಕ್ಕೆ ಬಂದು ಪರಿಶಿಲೀಲನೆ ನಡೆಸಲಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಯಾಂಪ್ ನಂ.6 ರ ಬಳಿ ಕಲಘಟಗಿ ರಸ್ತೆಯಲ್ಲಿ “ಶ್ರೀಶೈಲಂ ಪ್ಯೂಲ್” ನೂತನ ಪೆಟ್ರೊಲ್ ಬಂಕ್ ಪ್ರಾರಂಭ..!
ಮುಂಡಗೋಡ: ತಾಲೂಕಿನ ಕಲಘಟಗಿ ರಸ್ತೆಯ, ಟಿಬೇಟಿಯನ್ ಕ್ಯಾಂಪ್ ನಂಬರ್ 6 ಬಳಿ ಶ್ರೀಶೈಲಂ ಪ್ಯೂಲ್ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆಗೊಂಡಿದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅಂಬ್ಯುಲೆನ್ಸ್ ಗೆ ಡಿಸೇಲ್ ಹಾಕುವ ಮೂಲಕ ನೂತನ ಪೆಟ್ರೊಲ್ ಬಂಕ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ಮುಖಂಡರಾದ ನಾಗಭೂಷಣ ಹಾವಣಗಿ, ಬಸಯ್ಯ ನಡುವಿಮನಿ, ಸಿದ್ದು ಹಡಪದ, ಹಾಗೂ ಸ್ಥಳೀಯ ಪ್ರಮುಖರು, ಪೆಟ್ರೋಲ್ ಬಂಕ್ ಮಾಲೀಕರಾದ ಸುರೇಶ್ ಕಲ್ಲೋಳ್ಳಿ, ದೇವೇಂದ ಕೆಂಚಗೊಣ್ಣವರ್, ಮಂಜುನಾಥ್ ಹಿರೇಮಠ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತಾ ತಮ್ಮನನ್ನೇ ಕೊಂದ್ಲಾ ಪಾಪಿ ಅಕ್ಕ..? ನೂಲ್ವಿ ಗ್ರಾಮದಲ್ಲೊಂದು ಅಮಾನವೀಯ ಘಟನೆ..!!
ಹುಬ್ಬಳ್ಳಿ: ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಸಹೋದರಿಯೇ ತನ್ನ ಪ್ರಿಯಕರನ ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿರುವುದು ಬಹಿರಂಗವಾಗಿದೆ. ಕಳೆದ ಎರಡು ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲೇ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಶಂಭುಲಿಂಗ ಕಮಡೊಳ್ಳಿ ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌಡರ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು. ಪೊಲೀಸರಿಗೆ ಸಂಶಯ ಬಾರದಿರಲಿ ಎಂದು ಸಹೋದರಿ ಸಹೋದರನ ಶವದ ಎದುರು ಕುಳಿತು ಕಣ್ಣೀರು ಹಾಕಿ ನಾಟಕವಾಡಿದ್ದರು. ಆದ್ರೆ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಅನೈತಿಕ ಸಂಬಂಧಕ್ಕೆ...
ಮುಂಡಗೋಡ ತಾಲೂಕಿನ 16 ಗ್ರಾಪಂ ನಲ್ಲಿ ಕರ್ತವ್ಯದಲ್ಲಿರೋ ಸಿಬ್ಬಂದಿಗಳಿಂದ ಅನುಮೊದನೆಗೆ ಸರ್ಕಾರಕ್ಕೆ ಮನವಿ..!
ಮುಂಡಗೋಡ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ ಇದುವರೆಗೂ ಅನುಮೋದನೆಯಾಗದೇ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಹಶೀಲ್ದಾರರವರ ಮುಖಾಂತರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ರು. ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸ್ತಿರೊ ಹಲವು ಸಿಬ್ಬಂದಿಗಳಿಗೆ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿ, ಈ ಸಿಬ್ಬಂದಿಗಳು ಬದುಕು ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ, ತಕ್ಷಣವೇ ಅನುಮೋದನೆ ನೀಡಿ ಸಹಕಾರಿಯಾಗಬೇಕೆಂದು ಸರ್ಕಾರಕ್ಕೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ..
ಆ ಹುಡುಗ ಭಗವಾಧ್ವಜ ಹಾಕಿದ್ದೇ ತಪ್ಪಾಯ್ತಾ..? ಅಷ್ಟಕ್ಕೂ ಆ ಪೊಲೀಸಪ್ಪನಿಗೆ ಅಷ್ಟೇಲ್ಲ ಅಧಿಕಾರ ಕೊಟ್ಟವರು ಯಾರು..?
ಮುಂಡಗೋಡ: ತಾಲೂಕಿನ ಮಳಗಿ ಪೊಲೀಸ್ ಠಾಣೆಯ ಪೊಲೀಸಪ್ಪ ಮಾಡಿರೋ ಅದೊಂದು ರಗಳೆ ,ರಾದ್ದಾಂತ ಇಡೀ ತಾಲೂಕಿನಲ್ಲಿ ಕಿಚ್ಚು ಹೊತ್ತಿಸುತ್ತಿದೆ. ತಾನೇ ಪೊಲೀಸ್ ವರಿಷ್ಠಾಧಿಕಾರಿ ಅಂತಾ ಪೋಸು ಕೊಡುವ ಹುಂಬತನಕ್ಕೆ ಈಗ ಅದೇ ಇಲಾಖೆಯ ಹಿರಿಯರು ತಲೆ ತಗ್ಗಿಸುವ ಮಟ್ಟಿಗೆ ಬಂದು ನಿಂತಿದೆ. ಆಗಿದ್ದೇನು..? ಅದು ಪಾಳಾ ಗ್ರಾಮ, ಮುಂಡಗೋಡ ತಾಲೂಕಿನ ಮಟ್ಟಿಗೆ ಒಂದಿಷ್ಟು ಸೂಕ್ಷ್ಮ ಪ್ರದೇಶ. ಇಲ್ಲಿ ದಶಕಗಳ ಹಿಂದಿನಿಂದಲೂ ಕೋಮು ದಳ್ಳುರಿ ಒಳಗೊಳಗೆ ಹೊಗೆಯಾಡಿ, ಕೆಲವು ಬಾರಿ ಹೊತ್ತಿಕೊಂಡೂ ಉರಿದ ಘಟನೆಗಳಾಗಿತ್ತು. ಆದ್ರೆ ಇತ್ತೀಚೆಗೆ ಇಲ್ಲಿ ಅಕ್ಷರಶಃ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಸಹಬಾಳ್ವೆ ನಡೆಸ್ತಿದಾರೆ. ಆದ್ರೆ, ಅವನೊಬ್ಬ ಖಾಕಿತೊಟ್ಟ ಹುಂಬನ ಕಿತಾಪತಿ ಈಗ ಮತ್ತೆ ಹಲವು ಮನಸ್ಸುಗಳನ್ನು ಕೆರಳಿಸಿದೆ. ಅವತ್ತು ಮೇ 13.. ಇದು ಈಗ್ಗೆ ಎರಡು ದಿನಗಳ ಹಿಂದಿನ ಮಾತು. ಪಾಳಾ ಸಮೀಪ ಅದೊಬ್ಬ ಮಾವಿನ ಹಣ್ಣಿನ ವ್ಯಾಪಾರಿ ಭಗವಾಧ್ವಜ ಹಾಕೊಂಡು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡ್ತಾ ಇರ್ತಾನೆ. ಆತನ ಹೆಸ್ರು ಅನಿಲ್. ಅಂದಹಾಗೆ ಈ ಹುಡುಗ...
ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಶಿರಸಿಗೆ ಎತ್ತಂಗಡಿ..!
ಮುಂಡಗೋಡ: ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಎತ್ತಂಗಡಿಯಾಗಿದ್ದಾರೆ. ಶಿರಸಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಮದ್ಯಾಹ್ನವೇ ಸರ್ಕಾದಿಂದ ಆದೇಶ ಹೊರಬಿದ್ದಿದ್ದು ರಾಜ್ಯದಲ್ಲಿ ಒಟ್ಟೂ ಐವರು ತಹಶೀಲ್ದಾರರಿಗೆ ವರ್ಗಾವಣೆಯಾಗಿದೆ. ಈ ಮೂಲಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಹುದ್ದೆ ಪಡೆದುಕೊಂಡಿರೋ ಆರೋಪಕ್ಕೆ ಗುರಿಯಾಗಿದ್ದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವರ್ಗಾವಣೆಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದಲಿತಪರ ಸಂಘಟನೆಗಳು ತಹಶೀಲ್ದಾರ್ ಕಾರ್ಯಾಲಯದ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದವು. ಇದನ್ನೇಲ್ಲ ಮನಗಂಡ ಸರ್ಕಾರ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರನ್ನು ವರ್ಗಾವಣೆಗೊಳಿಸಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇಂದು ಮದ್ಯಾಹ್ನವೇ ಇಂತಹದ್ದೊಂದು ಆದೇಶ ಬಂದಿದ್ದು ಯಾರಿಗೂ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ಆದ್ರೆ, ಪಬ್ಲಿಕ್ ಫಸ್ಟ್ ನ್ಯೂಸ್ ಗೆ ವರ್ಗಾವಣೆಯ ಆದೇಶ ಪ್ರತಿ ದೊರೆತಿದೆ.
ಯಲ್ಲಾಪುರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಬಹುತೇಕ ಫಿಕ್ಸ್..?
ಯಲ್ಲಾಪುರ ಕ್ಷೇತ್ರದಲ್ಲಿ ಅಕ್ಷರಶಃ ಮಕಾಡೆ ಮಲಗಿದ್ದ ಜೆಡಿಎಸ್ ನ ತೆನೆ ಹೊತ್ತ ಮಹಿಳೆ, ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಸೂಚನೆಗಳು ಸಿಕ್ಕಿವೆ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲದ ಹಾಗಿದ್ದ ಪಕ್ಷಕ್ಕೆ ಹುರುಪಿನಿಂದಲೇ ಯುವ ಪಡೆಯೊಂದು ದಾಂಗುಡಿ ಇಟ್ಟಿದೆ. ಇನ್ನೇನು ಕುಮಾರಣ್ಣನ ಇಶಾರೆಗಾಗಿ ಕಾದು ಕುಳಿತಿರೊ ಅದೊಂದು ಟೀಂ ಯಲ್ಲಾಪುರ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗುತ್ತಿದೆ. ಅವ್ರು ಸಂತೋಷ್..! ಅವ್ರ ಹೆಸ್ರು ಸಂತೋಷ ರಾಯ್ಕರ್, ಮಳಗಿ ಗ್ರಾಮದವರು. ನಿಮಗೆ ನೆನಪಿರಬಹುದು, ಅದು 2014 ರ ಲೋಕಸಭಾ ಚುನಾವಣೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿಯ ದಿ. ಸುರೇಶ್ ಅಂಗಡಿಯವರ ವಿರುದ್ಧ ಸ್ಪರ್ಧಿಸಿದ್ದವರು ಇದೇ ಸಂತೋಷ್, ನಂತ್ರ, 2018 ರ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೊನೆ ಹಂತದಲ್ಲಿ ಕುಮಾರಣ್ಣನ ಇಶಾರೆಯಿಂದ ಕಣದಿಂದ ಹಿಂದೆ ಸರಿದಿದ್ದ ಇವ್ರು ಆ ನಂತರದಲ್ಲಿ ಕುಮಾರಣ್ಣನ ತೀರ್ಮಾನದಿಂದ ಮುನಿಸಿಕೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಆದ್ರೆ, ತಮ್ಮ ರಾಜಕೀಯದ ಕಾರ್ಯಗಳನ್ನು ಮಾತ್ರ ಕೈಬಿಟ್ಟಿರಲಿಲ್ಲ. ಬಿಜೆಪಿಯೊಂದಿಗೆ ಗುರುತಿಸಿಕೊಂಡು...
ನಂದಿಕಟ್ಟಾದ ಟಿಕ್ ಟಾಕ್ ಪ್ರೇಮಿಗಳು ಮತ್ತೆ ಒಂದಾದ್ರು, ಥ್ಯಾಂಕ್ಸ್ ಅಂದ್ಲು ಹುಡುಗಿ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕನ ಲವ್ ಕಹಾನಿ ಮತ್ತೆ ರಿಯಲ್ ಲೈಫ್ ಗೆ ಬಂದು ನಿಂತಿದೆ. ಟಿಕ್ ಟಾಕ್ ನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯ ಮೂರು ಗಂಟಿನೊಂದಿಗೆ ಬಾಂಧವ್ಯ ಬೆಸೆದುಕೊಂಡು ಅದೇನೋ ಮನಸ್ತಾಪಗಳು ತಪ್ಪು ಕಲ್ಪನೆಗಳಿಂದ ದೂರವಾಗಿದ್ದ ಒಂದೂವರೇ ವರ್ಷದ ಪ್ರೇಮ್ ಕಹಾನಿ ಮತ್ತದೇ ಹಳೆಯ ಪ್ರೀತಿಯ ಬಂಧನದಲ್ಲಿ ಬೆಸೆದುಕೊಂಡಿದೆ. ಹಾಗಂತ ಮೊನ್ನೆಯಷ್ಟೇ ನೊಂದು ಮನದಾಳ ಬಿಚ್ಚಿಟ್ಟಿದ್ದ ಮಹಿಳೆ ಈಗ ತನ್ನ ಲೈಫು ಸರಿಯಾಯ್ತು ಕಣ್ರಿ ಅಂತಾ ಖುಶಿಯಿಂದಲೇ ಹೇಳಿಕೊಂಡಿದ್ದಾಳೆ. ತಪ್ಪು ಕಲ್ಪನೆಗಳಾಗಿತ್ತು..! ನನ್ನ ಪತಿ ಒಳ್ಳೆಯವನು, ನನಗೆ ಮೋಸ ಮಾಡಿಲ್ಲ. ನಾನೇ ಅವರನ್ನ ಹಾಗೆ ತಪ್ಪಾಗಿ ತಿಳಿದುಕೊಂಡಿದ್ದೆ. ಅವತ್ತು ನನ್ನ ಪತಿ ಊರಿಗೆ ಹೋದವರು ವಾಪಸ್ ಬರದೇ ಇದ್ದ ಕಾರಣ ನಾನು ತುಂಬಾ ಕುಗ್ಗಿ ಹೋಗಿ ಮಾನಸಿಕವಾಗಿ ನೊಂದು ಜರ್ಜರಿತಳಾಗಿದ್ದೆ ಹೀಗಾಗಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಬೇಕಾಗಿತ್ತು. ಅಲ್ಲದೇ ತಮ್ಮ ಮಾದ್ಯಮದ ಮೂಲಕ ನನ್ನ ನೋವು ತೋಡಿಕೊಳ್ಳಬೇಕಾಯ್ತು. ಆದ್ರೆ ಈಗ ನಿಮ್ಮೇಲ್ಲರ ಸಹಕಾರದಿಂದ ನಾವು ಒಂದಾಗಿದ್ದೇವೆ ಅಂತಾ ಪಬ್ಲಿಕ್...