ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ಮಾಡಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿರೇಕೆರೂರಿನಿಂದ ಬಂದು ಮಟ್ಕಾ ಆಡಿಸುತ್ತಿದ್ದ ಬುಕ್ಕಿ ಸೇರಿದಂತೆ ಮೂವರ ಮೇಲೆ ಕೇಸು ದಾಖಲಾಗಿದೆ.
ಇನ್ನು ಹೀಗೆ ದಂಧೆ ನಡೆಸಲು ಬೆನ್ನೆಲುಬಾಗಿ ನಿಂತಿದ್ದ ಹಾಗೂ ಮಟ್ಕಾ ಆಟದಿಂದ ಸಂಗ್ರಹವಾದ ಹಣವನ್ನು ಪಾಳಾ ಗ್ರಾಮದ ಮೌಲಾಲಿ ಹಾಗೂ ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ಚಿಕ್ಕೆರೂರಿನ ಅಥಾವುಲ್ಲಾ ಎಂಬುವವನಿಗೆ ನೀಡುತ್ತಿರುವಾದಾಗಿ ಆರೋಪಿ ಒಪ್ಪಿಕೊಂಡಿದ್ದು ಅವರಿಬ್ಬರ ಮೇಲೂ ಕೇಸು ದಾಖಲಾಗಿದೆ. ಇವ್ರೊಂದಿಗೆ, ನಗದು ಹಣ 1120 -ರೂ ವಶಪಡಿಸಿಕೊಳ್ಳಲಾಗಿದೆ.