ಮುಂಡಗೋಡ: ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಎತ್ತಂಗಡಿಯಾಗಿದ್ದಾರೆ. ಶಿರಸಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇಂದು ಮದ್ಯಾಹ್ನವೇ ಸರ್ಕಾದಿಂದ ಆದೇಶ ಹೊರಬಿದ್ದಿದ್ದು ರಾಜ್ಯದಲ್ಲಿ ಒಟ್ಟೂ ಐವರು ತಹಶೀಲ್ದಾರರಿಗೆ ವರ್ಗಾವಣೆಯಾಗಿದೆ. ಈ ಮೂಲಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಹುದ್ದೆ ಪಡೆದುಕೊಂಡಿರೋ ಆರೋಪಕ್ಕೆ ಗುರಿಯಾಗಿದ್ದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವರ್ಗಾವಣೆಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದಲಿತಪರ ಸಂಘಟನೆಗಳು ತಹಶೀಲ್ದಾರ್ ಕಾರ್ಯಾಲಯದ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದವು. ಇದನ್ನೇಲ್ಲ ಮನಗಂಡ ಸರ್ಕಾರ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರನ್ನು ವರ್ಗಾವಣೆಗೊಳಿಸಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಇಂದು ಮದ್ಯಾಹ್ನವೇ ಇಂತಹದ್ದೊಂದು ಆದೇಶ ಬಂದಿದ್ದು ಯಾರಿಗೂ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ಆದ್ರೆ, ಪಬ್ಲಿಕ್ ಫಸ್ಟ್ ನ್ಯೂಸ್ ಗೆ ವರ್ಗಾವಣೆಯ ಆದೇಶ ಪ್ರತಿ ದೊರೆತಿದೆ.