ಚಿಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದುಷ್ಟರು ನೀಚ ಕೃತ್ಯ ಮಾಡಿದ್ದಾರೆ. ಮೀನು ಸಾಕಾಣಿಕೆ ಮಾಡಿದ್ದ ಕೆರೆಗೆ ವಿಷ ಬೆರೆಸಿ ಮೀನುಗಳ ಸಾವಿಗೆ ಕಾರಣರಾಗಿದ್ದಾರೆ. ನೂರಾರು ಮೀನುಗಳು ಹಂತಹಂತವಾಗಿ ಸಾವನ್ನಪ್ಪುತ್ತಿವೆ ಅನ್ನೊ ಮಾಹಿತಿ ಲಭ್ಯವಾಗಿದೆ.
ಚಿಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕೇರಿಯಲ್ಲಿ ಸರ್ವೇ ನಂಬರ್ 49 ರಲ್ಲಿ ಘಟನೆ ನಡೆದಿದ್ದು, ಮೌಲಾಲಿ ಮಕಾಂದಾರ ಎನ್ನುವವರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಟೆಂಡರ್ ಪಡೆದಿದ್ದರು. ಆದ್ರೆ, ಈಗಾಗಲೇ ಮೀನುಗಳು ಒಂದು ಹಂತಕ್ಕೆ ಬೆಳೆದಿದ್ದಾಗಲೇ ದುರುಳರು ಕೆರೆಗೆ ವಿಷ ಹಾಕಿರೋ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಮೀನುಗಳು ಸಾವನ್ನಪ್ಪಿವೆ. ಎನ್ನಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.