ಮುಂಡಗೋಡ: ಪಟ್ಟಣದ ಸುಭಾಷ್ ನಗರದಲ್ಲಿ ಓರ್ವ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ. ನಾರಾಯಣ ಲಮಾಣಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಇಂದು ಮದ್ಯಾನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ.
ಅಂದಹಾಗೆ, ನಾರಾಯಣ ಲಮಾಣಿ, ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡಿದ್ದ. ಆದ್ರೆ ಇತ್ತಿಚೆಗೆ ಯಾಕೊ ಅದೇನೋ ಟೆನ್ಶೆನ್ ನಲ್ಲಿ ಇರುತ್ತಿದ್ದ ಅಂತಾ ಆತನ ಸ್ನೇಹಿತರ ಮೂಲಗಳಿಂದ ಮಾಹಿತಿ ಬಂದಿದೆ. ಆದ್ರೆ, ದಿಢೀರ್ ಆತನ ಆತ್ಮಹತ್ಯೆಗೆ ಕಾರಣವಾದ್ರೂ ಏನು ಅನ್ನೋ ಪ್ರಶ್ನೆ ಎದುರಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವಂತ ಹುಡುಗ ಆತ ಅಲ್ಲ, ಆತ್ಮಹತ್ಯೆಗೆ ಅದೇನೋ ಮೇಜರ್ ಕಾರಣ ಇರಬಹುದು ಅಂತಿದಾರೆ ಆತನ ಸ್ನೇಹಿತರು. ಅದೇನೇ ಆದರೂ ಪೊಲೀಸರ ತನಿಖೆಯಿಂದ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಅನ್ನೋದು ಸ್ಪಷ್ಟವಾಗಲಿದೆ. ಪೊಲೀಸರು ಇನ್ನೇನು ಸ್ಥಳಕ್ಕೆ ಬಂದು ಪರಿಶಿಲೀಲನೆ ನಡೆಸಲಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.