ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ‌ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು, ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಸಾಗಿಸಿದ್ದಲ್ಲದೇ, ಅಕ್ಣರಶಃ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಆ ವ್ಯಕ್ತಿಯ ಬೆಲೆಬಾಳುವ ವಸ್ತುಗಳನ್ನು ಆರು ತಿಂಗಳವರೆಗೂ ಜೋಪಾನವಾಗಿ ಕಾಯ್ದಿಟ್ಟು, ನಂತರ ಮರುಳಿಸಲಾಗಿದೆ. ಇಂತಹದ್ದೊಂದು ಕಾರ್ಯವನ್ನು ಅಥಣಿಯ ಅಂಬ್ಯುಲೆನ್ಸ್ ಸಿಬ್ಬಂದಿಗಳಾದ EMT ಶ್ರೀಮತಿ ನಿರ್ಮಲಾ ಬನಸೋಡೆ ಹಾಗೂ ಪೈಲೆಟ್ ಯಲ್ಲಾಲಿಂಗ ಅವರು ಮರಳಿಸಿ ಮಾನವೀಯ ಹಾಗೂ ಪ್ರಮಾಣಿಕ ಕಾರ್ಯ ಮಾಡಿದ್ದಾರೆ.

ಅಂದಹಾಗೆ 2024 ರ ಅಕ್ಟೋಬರ್ 19 ರಂದು, ಕಲಘಟಗ ಮೂಲದ ಅಕ್ಷಯ ಸುನೀಲ ಲಗಳಿ (32) ಈತನು ವೈಯಕ್ತಿಕ ಕೆಲಸದ ನಿಮಿತ್ತ ಬೈಕ್ ಮೇಲೆ ಅಥಣಣಿಯಿಂದ ಐಗಳಿಯ ಕಡೆಗೆ ಹೋಗುತ್ತಿರುವಾಗ, ಬಡಚಿಯ ಗ್ರಾಮದಲ್ಲಿ ಬಸ್ಸಿಗೆ ಈತನ ಬೈಕ್ ಗೆ ಅಪಘಾತ ಸಂಭವಿಸಿತ್ತು. ಹೀಗಾಗಿ, ಆ ವೇಳೆ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು, ಸ್ಥಳೀಯರು 108 ಅಂಬ್ಯುಲೆನ್ಸ್ ಗೆ ಕರೆಮಾಡಿದ್ದರು.

ಆ ವೇಳೆ ಅಂಬ್ಯುಲೆನ್ಸ್ ಸಿಬ್ಬಂದಿಗಳಾದ EMT ಶ್ರೀಮತಿ ನೀರ್ಮಲಾ ಬನಸೋಡೆ ಹಾಗೂ ಪೈಲೆಟ್ ಯಲ್ಲಾಲಿಂಗ ಸ್ಥಳಕ್ಕೆ ಬಂದು ರಕ್ತದ ಮಡುವಿನಲ್ಲಿ ಮತ್ತು ಪ್ರಜ್ಞೆ ತಪ್ಪಿ ಬಿದ್ದಿದ್ದ, ಅಕ್ಷಯನನ್ನು ಸರ್ಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ವಿಜಯಪುರದ
ಬಿ ಎಲ್ ಡಿ ಆಸ್ಪತ್ರೆಗೆ ಸೇರಿಸಿದ್ದರು. ಜೊತೆಗೆ ಆತನಲ್ಲಿದ್ದ ಮೊಬೈಲ್,ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಹಾಗೂ ಹಣವನ್ನು EMT ನೀರ್ಮಲಾ ಅವರು ತಮ್ಮ ಹತ್ತಿರ ಇಟ್ಟುಕೊಂಡು ಅಪಘಾತದಲ್ಲಿ ಇರುವ ವ್ಯಕ್ತಿಯ ವಿಳಾಸ ಹುಡುಕಿ ಅವರಿಗೆ ಮಾಹಿತಿ ನೀಡಿದ್ದರು.

ಪರಿಣಾಮ, ದಿನಾಂಕ 5/04/2025 ರಂದು ಅಕ್ಷಯ ರವರು ಪ್ರಾಣಾಪಾಯದಿಂದ ಪಾರಾಗಿ, ತನಗೆ ಸೇರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಬಂದಾಗ EMT ನಿರ್ಮಲಾ ಅವರು ತಮ್ಮ ಮನೆಗೆ ಕರೆಯಿಸಿ 6 ತಿಂಗಳಿನಿಂದ ಕಾಯ್ದಿಟ್ಟ ಅಕ್ಷಯ ಲಗಳಿ ಈತನ ದಾಖಲೆಗಳ ಜೊತೆಗೆ ಮೊಬೈಲ್ ಹಣ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಹೀಗಾಗಿ, ಪ್ರಾಮಾಣಿಕ ಹಾಗೂ‌ಮಾನವೀಯ ಕಳಕಳಿಯ ಕಾರ್ಯ ಮಾಡಿರೋ ಅಂಬುಲೆನ್ಸ್ ಸಿಬ್ಬಂದಿಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

 

error: Content is protected !!