ಮುಂಡಗೋಡ: ತಾಲೂಕಿನ ಕಲಘಟಗಿ ರಸ್ತೆಯ, ಟಿಬೇಟಿಯನ್ ಕ್ಯಾಂಪ್ ನಂಬರ್ 6 ಬಳಿ ಶ್ರೀಶೈಲಂ ಪ್ಯೂಲ್ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆಗೊಂಡಿದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅಂಬ್ಯುಲೆನ್ಸ್ ಗೆ ಡಿಸೇಲ್ ಹಾಕುವ ಮೂಲಕ ನೂತನ ಪೆಟ್ರೊಲ್ ಬಂಕ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ‌.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ಮುಖಂಡರಾದ ನಾಗಭೂಷಣ ಹಾವಣಗಿ, ಬಸಯ್ಯ ನಡುವಿ‌ಮನಿ, ಸಿದ್ದು ಹಡಪದ, ಹಾಗೂ ಸ್ಥಳೀಯ ಪ್ರಮುಖರು, ಪೆಟ್ರೋಲ್ ಬಂಕ್ ಮಾಲೀಕರಾದ ಸುರೇಶ್ ಕಲ್ಲೋಳ್ಳಿ, ದೇವೇಂದ ಕೆಂಚಗೊಣ್ಣವರ್, ಮಂಜುನಾಥ್ ಹಿರೇಮಠ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!